ಮಡಿಕೇರಿ, ನ. ೧೩: ಕಮಾನ್ ತಾತಾ... ಸ್ಟಡೀ ಅಜ್ಜಿ... ಹರ‍್ರೆ... ಇದೊಂದು ಅಪರೂಪದ ಆದರೆ, ಅಷ್ಟೇ ಮಹತ್ವದ ಒಂದು ಕಾರ್ಯಕ್ರಮವಾಗಿತ್ತು. ಈಗಿನ ಆಧುನಿಕ ಪ್ರಪಂಚದಲ್ಲಿ ಮಕ್ಕಳಿಗೆ ತಾತ... ಅಜ್ಜಿಯರು ಇರಲಿ ತಂದೆ - ತಾಯಿಯರೊಂದಿಗೇ ಪ್ರೀತಿ - ವಾತ್ಸಲ್ಯ, ಬೆಸುಗೆಗಳು ಕಡಿಮೆಯಾಗುತ್ತಿವೆ.

ಮಕ್ಕಳು ಎಲ್ಲವನ್ನೂ ಮರೆತು ಮೊಬೈಲ್... ಟಿ.ವಿ.ಯಂತಹ ಪ್ರಪಂಚದಲ್ಲಿ ಮುಳುಗಿ ಹೋಗಿರುತ್ತಾರೆ. ಇಂತಹ ಸನ್ನಿವೇಶದ ನಡುವೆ ಪುಟ್ಟ ಮಕ್ಕಳಲ್ಲಿ ತಾತ... ಅಜ್ಜಿಯರೊಂದಿಗೆ ಬಾಂಧವ್ಯ ಬೆಸೆಯುವುದು ಪ್ರೀತಿ - ವಾತ್ಸಲ್ಯ ಮೂಡಿಸುವ ಚಿಂತನೆಯAತೆ ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ ಕಳೆದ ವರ್ಷದಿಂದ ಹೊಸತೊಂದು ಕಾರ್ಯಕ್ರಮ ಆಯೋಜಿಸುತ್ತಿದೆ.

“ಗ್ರಾö್ಯಂಡ್ ಪೇರೆಂಟ್ಸ್ ಡೇ'' ಎಂಬ ಕಾರ್ಯಕ್ರಮವನ್ನು ಇಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಎಲ್‌ಕೆಜಿಯಿಂದ ಎರಡನೆಯ ತರಗತಿಯವರೆಗಿನ ಮಕ್ಕಳಿಗೆ ಇದು ಅನ್ವಯ. ಪುಟ್ಟ ಮಕ್ಕಳು ಈ ದಿನದಂದು ತಮ್ಮ ಅಜ್ಜ - ಅಜ್ಜಿಯನ್ನು ಶಾಲೆಗೆ ಕರೆತರಬೇಕು. ಅಲ್ಲಿ ಮಕ್ಕಳೊಂದಿಗೆ ಈ ಹಿರಿಯ ಜೀವಗಳಿಗೆ ಹೊಸ ಚೈತನ್ಯ ಮೂಡಿಸುವ ಪ್ರಯತ್ನ ನಡೆಸಲಾಗುತ್ತದೆ. ಇದರಂತೆ ಈ ಬಾರಿಯೂ ಅಜ್ಜ - ಅಜ್ಜಿಯರ ದಿನವನ್ನು ಏರ್ಪಡಿಸಲಾಗಿತ್ತು. ಅಜ್ಜಂದಿಯರು ಮಕ್ಕಳಿಗೆ ಐಡಿ ಕಾರ್ಡ್ ಹಾಕುವುದು, ಲಂಚ್ ಬ್ಯಾಗ್, ಸ್ಕೂಲ್‌ಬ್ಯಾಗ್ ಸಿದ್ಧಪಡಿಸಿ ಮಕ್ಕಳೊಂದಿಗೆ ಓಡುವ ಸ್ಪರ್ಧೆ, ಅಜ್ಜಿಯರಿಗೆ ಕೈಯಲ್ಲಿ ಕಪ್‌ನೊಂದಿಗೆ ಬಾಲ್ ಇಟ್ಟು ಬ್ಯಾಲೆನ್ಸಿಂಗ್ ಮಾಡುತ್ತಾ ಓಡುವ ಸ್ಪರ್ಧೆ, ಮಕ್ಕಳಿಗೆ ತಮ್ಮ ತಾತ - ಅಜ್ಜಿಯರ ಎದುರು ನೃತ್ಯ ಸ್ಪರ್ಧೆ, ಬಳಿಕ ಹಿರಿಯರಿಂದ ತಮ್ಮ ಅನುಭವದ ಹಂಚಿಕೆಯAತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಗಮನ ಸೆಳೆದವು. ಸುಮಾರು ೨೨೦ ಮಕ್ಕಳ, ೨೫೦ ರಷ್ಟು ಅಜ್ಜ- ಅಜ್ಜಿಯರು ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪುಟಾಣಿಗಳು ತಮ್ಮ ತಾತ ಅಜ್ಜಿಯರನ್ನು ಪುಷ್ಪಾರ್ಚನೆ ಮಾಡುವುದರ ಮೂಲಕ ಬರಮಾಡಿಕೊಂಡು ಗಣೇಶನ ಸ್ತುತಿಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಪ್ರಾಂಶುಪಾಲರಾದ ಸವಿತ ಎಂ.ಜಿ ಅವರು “ಅಜ್ಜ ಅಜ್ಜಿಯರು ಮನೆಯಲ್ಲಿ ಇದ್ದರೆ ಪುಟಾಣಿಗಳಿಗೆ ಸಂಸ್ಕಾರ, ಸಂಬAಧಗಳ ಮೌಲ್ಯವನ್ನು ತಿಳಿಸುವುದರೊಂದಿಗೆ ಪರಿವಾರ ಹಾಗೂ ಜೀವನದ ಪಾಠಗಳ ಮಹತ್ವವನ್ನು ತಿಳಿಸುತ್ತಾರೆ” ಎಂದರು. ಪುಟಾಣಿಗಳು ತಮ್ಮ ಅಜ್ಜ ಅಜ್ಜಿಯ ಕುರಿತು ಹಾಡು, ನೃತ್ಯ, ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶಾಲೆಯಲ್ಲಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು.ನಂತರ ಕಾರ್ಯಕ್ರಮದ ಕೇಂದ್ರಬಿAದುವಾದ ಹಿರಿಯರಿಗೆ ಮನೋರಂಜನಾ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಮುತ್ತಪ್ಪ ಅವರು ತಮ್ಮ ಮರಿ ಮಕ್ಕಳನ್ನು ಪ್ರೀತಿಯಿಂದ, ಜವಾಬ್ದಾರಿಯುತವಾಗಿ ತಿದ್ದಿ ಬೆಳೆಸಿ ಸಮಾಜಕ್ಕೆ ಉತ್ತಮ ಸಂಸ್ಕೃತಿಯುಳ್ಳ ವ್ಯಕ್ತಿಯನ್ನಾಗಿ ರೂಪಿಸಬೇಕೆಂದು ಕರೆ ನೀಡಿದರು. ವೇದಿಕೆಯಲ್ಲಿ ಶಾಲಾ ಕಾರ್ಯಾಧ್ಯಕ್ಷರು ಹಾಗೂ ಶಾಲಾ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಹಿರಿಯರೊಬ್ಬರು ಕಾರ್ಗಿಲ್ ಯೋಧರ ಬಗ್ಗೆ ಸ್ವರಚಿತ ಕವನವನ್ನು ವಾಚಿಸಿದರು. ಶಾಲಾ ಶಿಕ್ಷಕಿ ಮಿಥಿಲ ಸ್ವಾಗತಿಸಿ, ಚಂದ್ರಾವತಿ ವಂದಿಸಿ, ಕುಸುಮ ನಿರೂಪಿಸಿದರು. ಶಾಲಾ ಶಿಕ್ಷಕ ವೃಂದ, ಶಿಕ್ಷಕೇತರ ಸಿಬ್ಬಂದಿಗಳ ಸಹಕಾರದೊಂದಿಗೆ ಸಮಾರಂಭ ಅರ್ಥಪೂರ್ಣವಾಗಿ ಜರುಗಿತು.

- ಶಶಿ ಸೋಮಯ್ಯ