ಗೋಣಿಕೊಪ್ಪಲು, ನ. ೧೨: ಭಾರತೀಯ ಸೇನೆಯಲ್ಲಿ ಸುದೀರ್ಘ ೩೨ ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದ ದ. ಕೊಡಗಿನ ಬಾಡಗರಕೇರಿ ನಿವಾಸಿ ಬಲ್ಯಮಿದೇರಿರ ರಾಜು ಮೊಣ್ಣಪ್ಪ ಅವರಿಗೆ ಕೊಡಗಿನ ಹಾಗೂ ಕೇರಳ ರಾಜ್ಯದ ನಿವೃತ್ತ ಸೈನಿಕರು ಸನ್ಮಾನಿಸಿ, ಗೌರವಿಸಿದರು.
೮೨ ವರ್ಷ ಪ್ರಾಯದ ನಿವೃತ್ತ ಕ್ಯಾಪ್ಟನ್ ರಾಜು ಮೊಣ್ಣಪ್ಪ ಅವರು ತಮ್ಮ ಸೇವಾವಧಿಯಲ್ಲಿ ಕೊಡಗಿನ ಹಾಗೂ ಕೇರಳ ರಾಜ್ಯದ ಅನೇಕ ಯುವಕರಿಗೆ ಮಾರ್ಗದರ್ಶಕರಾಗಿ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವ ಅವಕಾಶಕ್ಕೆ ಪ್ರೇರಣೆಯಾಗಿದ್ದರು.
ಇದೀಗ ನಿವೃತ್ತಿ ಜೀವನದಲ್ಲಿರುವ ಇವರನ್ನು ಮಾಜಿ ಸುಬೇದಾರ್ ತೀತಮಾಡ ಭರತ್, ಐತಿಚಂಡ ನಾಚಪ್ಪ, ಮಾಪಣಮಾಡ ಮುದ್ದಪ್ಪ ಮುಂದಾಳತ್ವದಲ್ಲಿ ಸನ್ಮಾನಿಸಲಾಯಿತು. ದ. ಕೊಡಗಿನ ಬಾಡಗರಕೇರಿ ಗ್ರಾಮದ ಮನೆಗೆ ಆಗಮಿಸಿದ ಇವರ ಶಿಷ್ಯವೃಂದ ಗೌರವಿಸಿ ಸನ್ಮಾನಿಸಿತು.
ಈ ವೇಳೆ ಸೇನೆಯಲ್ಲಿ ದುಡಿದ ಹಳೆಯ ನೆನಪುಗಳನ್ನು ಹಂಚಿಕೊAಡರು. ಈ ವೇಳೆ ರಾಜು ಮೊಣ್ಣಪ್ಪ ಅವರ ಪತ್ನಿ ಪ್ರೇಮ ಜಾನಕಿ, ಪ್ರಮುಖರುಗಳಾದ ಮಂಜು, ನೆಲ್ಲಿರ ನವೀನ್ ಅಜಿತ್, ಮುದ್ದಿಯಡ ಸಲೀನ್ ಮೊಣ್ಣಪ್ಪ, ಕೌಶಿ, ವೈಷ್ಣವಿ ಬೋಜಮ್ಮ, ಹಿಮಾನಿ, ಬೋಜಮ್ಮ, ಹಿರ್ಷಿತ್ ದೇವಯ್ಯ, ದೃತಿ ದೇಚಮ್ಮ, ದಕ್ಷ ನಾಣಯ್ಯ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.