ಐಗೂರು, ನ. ೧೨: ತಾಲೂಕು ಕಸಾಪದ ಪೂರ್ವಭಾವಿ ಸಭೆಯು ಇಲ್ಲಿನ ಸ. ಹಿ. ಪ್ರಾಥಮಿಕ ಶಾಲೆಯಲ್ಲಿ ಐಗೂರು ಘಟಕದ ಅಧ್ಯಕ್ಷ ನಂಗಾರು ಕೀರ್ತಿ ಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಮುಂದಿನ ತಾಲೂಕು ಕಸಾಪ ಸಮ್ಮೇಳನವು ಐಗೂರಿನಲ್ಲಿ ನಡೆಯುವುದರಿಂದ ಸದಸ್ಯರು ನಿರ್ವಹಿಸಬೇಕಾದ ಜವಾಬ್ದಾರಿಯ ಬಗ್ಗೆ ಚರ್ಚಿಸಲಾಯಿತು. ಐಗೂರಿನ ಕಾಜೂರು ಶಾಲೆ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಸಮ್ಮೇಳನ ನಡೆಯಲಿದ್ದು ಸ್ವಚ್ಛತೆ, ಶಾಲಾ ಕಟ್ಟಡಗಳಿಗೆ ಸುಣ್ಣಬಣ್ಣ ಬಳಿಯುವುದು, ಅಧ್ಯಾಪಕ ವೃಂದ, ಪೊಲೀಸ್ ಮತ್ತು ಗ್ರಾಮ ಪಂಚಾಯಿತಿ ಸದಸ್ಯರ ಸಹಕಾರ ಕೋರುವುದು, ಗ್ರಾಮದ ಎಲ್ಲಾ ಜಾತಿ ಧರ್ಮದವರು, ದಾನಿಗಳು, ಸ್ತಿçÃಶಕ್ತಿ ಸಂಘ, ಅಂಗನವಾಡಿ ಆಶಾ ಕಾರ್ಯಕರ್ತೆಯರು, ಕೃಷಿ ಸಂಘ, ರೈತರು, ವರ್ತಕರು, ಕರ್ನಾಟಕ ರಕ್ಷಣಾ ವೇದಿಕೆ, ಜಾನಪದ ಪರಿಷತ್, ಮತ್ತು ಬೆಳೆಗಾರರನ್ನು ರಾಜಕೀಯ ರಹಿತವಾಗಿ ಪತ್ರ ಮುಖೇನ ಮುಂದಿನ ಸಭೆಗೆ ಆಹ್ವಾನಿಸಲು ತೀರ್ಮಾನಿಸಲಾಯಿತು.

ಮುಂದಿನ ಸಭೆಗೆ ತಾಲೂಕು ಸಮಿತಿಯ ಎಲ್ಲಾ ಪದಾಧಿಕಾರಿಗಳನ್ನು ಆಹ್ವಾನಿಸಿ ಅವರ ಮಾರ್ಗದರ್ಶನದಲ್ಲಿ ಕೆಲಸ ನಿರ್ವಹಿಸುವಂತೆ ಮತ್ತು ಕಳೆದ ಬಾರಿ ಗೌಡಳ್ಳಿಯಲ್ಲಿ ನಡೆದ ಸಮ್ಮೇಳನವು ಯಶಸ್ವಿಯಾಗಿದ್ದು ಅಂದು ಕಾರ್ಯನಿರ್ವಹಿಸಿದ ಸದಸ್ಯರ ಸಹಕಾರ ಕೋರುವಂತೆ ನಿರ್ಧರಿಸಲಾಯಿತು. ಮುಂದಿನ ಸಭೆಯು ಐಗೂರು ವಿ.ಎಸ್.ಎಸ್.ಎನ್. ಸಭಾಂಗಣದಲ್ಲಿ ನಡೆಯಲಿದ್ದು ಎಲ್ಲರ ಸಹಕಾರವನ್ನು ಕೋರಲಾಯಿತು. ಸಭೆಯಲ್ಲಿ ಕಾರ್ಯದರ್ಶಿ ವಿಶ್ವನಾಥ ಅರಸ್, ತಾಲೂಕು ಖಜಾಂಚಿ ಕೆ.ಪಿ. ದಿನೇಶ್, ದಾನಿ ಅಭಿರಾಮ್, ಸಾಹಿತಿ ಹೇಮಂತ್ ಪಾರೇರ, ಸೋಮಪ್ಪ, ಮುಖ್ಯ ಶಿಕ್ಷಕರಾದ ಸರಳ ಕುಮಾರಿ, ಮಚ್ಚಂಡ ಅಶೋಕ್, ಸಿ.ಆರ್.ಪಿ. ಗಿರೀಶ್, ಶಿಕ್ಷಕರಾದ ಅಜಿತ್ ಕುಮಾರ್, ಶಿಕ್ಷಕಿಯರಾದ ಅನಸೂಯ, ವಿದ್ಯಾ, ಮತ್ತು ಸ್ವರ್ಣ ಹಾಜರಿದ್ದರ