ಮಡಿಕೇರಿ, ನ. ೧೨: ನಗರದ ಗಾಂಧಿ ಮೈದಾನ ಮೊನ್ನೆಯ ದಿನ ಸಂಜೆಯಿAದಲೇ ಕಲಾಭಿಮಾನಿಗಳಿಂದ ತುಂಬಿತ್ತು. ಇದಕ್ಕೆ ಕಾರಣ ಮಡಿಕೇರಿಯಲ್ಲಿ ಪ್ರಪ್ರಥಮ ಬಾರಿಗೆ ನಡೆದ ಪೌರಾಣಿಕ ಪರಮಾತ್ಮೆ ಪಂಜುರ್ಲಿ ಕನ್ನಡ ನಾಟಕ. ಇದು ಸಿನಿಮಾನ, ನಾಟಕನ ಅಥವಾ ನಾಟಕದ ವೀಡಿಯೋ ಪ್ರದರ್ಶನವೇ ಎಂಬ ರೀತಿಯಲ್ಲಿ ನಡೆದ ಕಲಾವಿದರ ಅಭಿನಯ ಎಲ್ಲಾರ ಮೆಚ್ಚುಗೆಗೆ ಪಾತ್ರವಾಯಿತು.

ದೇವಲೋಕದಲ್ಲೆ ಇದ್ದಂತೆ ಭಾಸವಾಯಿತು, ನನಗೆ ಸಿನಿಮಾ ನೋಡಿದಂತೆ ಆಯಿತು, ನಾನು ಇಂತಹ ನಾಟಕ ಈ ಜನ್ಮದಲ್ಲೆ ನೋಡಿರಲಿಲ್ಲ, ಎಂಬಾAತ ಮಾತುಗಳು ನಾಟಕ ಮುಗಿದ ನಂತರ ಪ್ರೇಕ್ಷಕರಿಂದ ಕೇಳಿಬರುತ್ತಿತ್ತು. ಕಲಾಕುಂಭ ಕುಲಾಯಿ ಮಂಗಳೂರು ತಂಡದವರು ನಡೆಸಿಕೊಟ್ಟ ಈ ನಾಟಕ ೬೫ನೇ ಪ್ರದರ್ಶನಕ್ಕೆ ಸಾವಿರಾರು ಕಲಾಭಿಮಾನಿಗಳು ಸಾಕ್ಷಿಯಾದರು.

ಪಾಡ್ದನ ಆಧಾರಿತ ಅದ್ದೂರಿ ಸೆಟ್ಟಿಂಗ್‌ನಲ್ಲಿ ನಡೆದ ಪೌರಾಣಿಕ ನಾಟಕ ಪರಮಾತ್ಮ ಪಂಜುರ್ಲಿ ಎರಡೂವರೆ ಗಂಟೆಗಳ ಕಾಲ ಕಲಾಭಿಮಾನಿಗಳನ್ನು ಮೂಕಪ್ರೇಕ್ಷಕರನ್ನಾಗಿಸಿತು. ದೇವಲೋಕದ ಕೈಲಾಸದಲ್ಲಿ ಇದ್ದಂತೆ ಭಾಸವಾಗುತ್ತಿತ್ತು ಎಂದು ಪ್ರೇಕ್ಷಕರ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು.

ಪಂಜುರ್ಲಿ ದೈವದ ಹುಟ್ಟು ಹೇಗಾಯಿತು? ದೈವ ಪಂಜುರ್ಲಿ ಭೂಲೋಕಕ್ಕೆ ಹೇಗೆ ಬಂತು? ಕುಟುಂಬದ ಧರ್ಮ ದೈವವಾಗಿ ಹೇಗೆ ಮಾರ್ಪಾಡುಗೊಂಡಿತ್ತು ಎಂಬ ಬಗ್ಗೆ ಬಹಳ ಸುಂದರವಾಗಿ ನೈಜ ಕಥೆಯನ್ನು ನಾಟಕದ ಮೂಲಕ ಜನರಿಗೆ ಮನಮುಟ್ಟುವಂತೆ ಪ್ರದರ್ಶನಗೊಳಿಸಲಾಯಿತು.

ದೈವ ನರ್ತನೆ ಅನುಕರಣೆ ಮಾಡಬೇಡಿ: ದೈವ ಆರಾಧನೆ ಪ್ರದರ್ಶನದ ಕಲೆಯಲ್ಲ ನಿದರ್ಶನದ ಕಲೆ, ಅದನ್ನು ಯಾರು ಅನುಕರಣೆ ಮಾಡಬೇಡಿ ಎಂದು ಖ್ಯಾತ ವಾಗ್ಮಿ ಜಾನಪದ ವಿದ್ವಾಂಸ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನಿಕಟ ಪೂರ್ವ ಅಧ್ಯಕ್ಷ ದಯಾನಂದ್ ಕತ್ತಲ್ ಸರ್ ಹೇಳಿದರು.

ಮಡಿಕೇರಿಯಲ್ಲಿ ನಡೆದ ಪರಮಾತ್ಮೆ ಪಂಜುರ್ಲಿ ನಾಟಕದ ಸಭಾ ಕಾರ್ಯಕ್ರಮದಲ್ಲಿ ಧರ್ಮದೈವ ಪಂಜುರ್ಲಿ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ದೈವ ಆರಾಧನೆ ಪ್ರಾಕೃತಿಕ ಶಕ್ತಿಯಿಂದ ಉದ್ಭವವಾಗಿರುವ ಒಂದು ದೈವಿಕ ಶಕ್ತಿ. ಮೂಲ ಪಾಡ್ದನ ಆಧರಿತ ಈ ನಾಟಕ ನಿಜವಾಗಿಯು ಪಂಜುರ್ಲಿ ದೈವದ ನೈಜ ದಂತಕತೆ. ಕರಾವಳಿ ಭಾಗದಲ್ಲಿ ದೈವ ಆರಾಧನೆ ನಮ್ಮ ಹಿರಿಯರು ಹಾಕಿಕೊಟ್ಟಿರುವ ಮೂಲ ಪದ್ಧತಿ, ನಂಬಿಕೆ ಪರಂಪರೆಯ ಭಾಗವಾಗಿದ್ದು ದೈವ ಆರಾಧನೆಗೆ ಸಾವಿರಾರು ವರ್ಷದ ಇತಿಹಾಸವಿದ್ದು, ನ್ಯಾಯ ಸಿಗದಿದ್ದಂತ ಆ ಕಾಲಘಟ್ಟದಲ್ಲಿ ದೈವವೇ ನ್ಯಾಯ ನೀಡಿದಂತ ಇತಿಹಾಸವಿದೆ ಎಂದರು. ಪಂಜುರ್ಲಿ ದೈವವು ಧರ್ಮ ರಕ್ಷಣೆಗಾಗಿ ಸ್ವತ ಈಶ್ವರ ದೇವರೇ ಭೂಲೋಕಕ್ಕೆ ಕಳುಹಿಸಿ ಕೊಟ್ಟಿರುವುದು ಕಥೆಯಲ್ಲಿ ಉಲ್ಲೇಖ ಇದೆ ಎಂದರು. ನಾಟಕ ಪ್ರಾರಂಭಕ್ಕೂ ಮುನ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ವಿವಿಧ ಸಮಾಜದ ಅಧ್ಯಕ್ಷರು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ನಗರಸಭೆ ಅಧ್ಯಕ್ಷರು ಸದಸ್ಯರುಗಳು ಉಪಸ್ಥಿತರಿದ್ದರು. ಈ ಸಂದರ್ಭ ನಾಟಕದ ಸೂತ್ರಧಾರ ನಿರ್ಮಾಣ ಸಾರಥ್ಯ ಮಾಡಿರುವ ನಾಗೇಶ್ ಕುಲಾಳ್ ಹಾಗೂ ದಯಾನಂದ್ ಕತ್ತಲ್ ಸರ್ ಅವರನ್ನು ಗೌರವಿಸಲಾಯಿತು. ನಾಟಕವನ್ನು ಮಡಿಕೇರಿಯಲ್ಲಿ ನಡೆಸಲು ಪಿ.ಎಂ ರವಿ, ವಸಂತ್ ಕುಲಾಲ್, ಓಂಕಾರ್ ಚಂದ್ರ, ಹರೀಶ್ ಕಾರ್ಯನಿರ್ವಹಿಸಿದರು.