ವೀರಾಜಪೇಟೆ, ನ. ೪: ಮೈಸೂರಿನ ಟೆರೆಷಿಯನ್ ಕಾಲೇಜಿನಲ್ಲಿ ಮೈಸೂರಿನ ವಿ.ಎನ್. ಯೋಧ ಮಾರ್ಷಲ್ ಆರ್ಟ್ಸ್ ಅಕಾಡೆಮಿ ವತಿಯಿಂದ ನಡೆದ ಐದನೇ ರಾಷ್ಟಿçÃಯ ಮುಕ್ತ ಕರಾಟೆ ಪಂದ್ಯಾಳಿಯಲ್ಲಿ ವೀರಾಜಪೇಟೆಯ ಆರ್ಜಿ ಗ್ರಾಮದ ಪೆರುಂಬಾಡಿಯ ಜೆನ್ ಸಿಟೋರಿಯೋ ಸ್ಕೂಲ್ ಆಫ್ ಇಂಡಿಯಾ ಕರಾಟೆ ಶಾಲೆಯ ವಿದ್ಯಾರ್ಥಿಗಳು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದ್ದಾರೆ.

ಬಾಲಕರ ಕುಮಿತೆ ವಿಭಾಗದಲ್ಲಿ ಧೃತಿಕ್ ಡಿ. ಕಾರ್ತಿಕ್ ಕೆ.ಎಚ್. ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ಪ್ರಜನ್ ಎಸ್.ಬಿ, ಗಗನ್ ಎಸ್., ಕೃಶಾಂಕ್ ಎಂ.ಎಸ್., ಪರಿಣಿತ್ ಎ.ಟಿ, ಕೃತಿಕ್ ಎಂ. ದ್ವಿತೀಯ ಸ್ಥಾನ ಗಳಿಸಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.

ಡೆನಿಸ್ ಪಿ.ಎಲ್., ಅನುರಾಗ ಟಿ.ಎಸ್ ತೃತೀಯ ಸ್ಥಾನ ಗಳಿಸಿ ಕಂಚಿನ ಪದಕ ಪಡೆದುಕೊಂಡಿದ್ದಾರೆ.

ಬಾಲಕಿಯರ ಕುಮಿತೆ ವಿಭಾಗದಲ್ಲಿ ಧನುಶ್ರೀ ಆರ್, ನಿರಂಜನ ಎಂ.ಎಚ್. ದ್ವಿತೀಯ ಸ್ಥಾನ ಗಳಿಸಿ ಬೆಳ್ಳಿ ಪದಕ ಪಡೆದುಕೊಂಡರೆ, ಬಿಂದ್ಯಾ ತೃತೀಯ ಸ್ಥಾನ ಗಳಿಸಿ ಕಂಚಿನ ಪದಕ ಪಡೆದುಕೊಂಡಿದ್ದಾರೆ. ಸೋಹಾನ್, ಆದರ್ಶ್, ಸಮೀತ್, ಗಾನವಿ ಸಮಾಧಾನಕರ ಬಹುಮಾನ ಪಡೆದುಕೊಂಡಿದ್ದಾರೆ. ಇವರಿಗೆ ಸೆನ್ಸಾಯಿ ಶಿವಪ್ಪ ಅವರು ತರಬೇತಿ ನೀಡಿದ್ದಾರೆ.