ಭಾಗಮಂಡ, ಅ. ೧೪ : ತಾ. ೧೭ರಂದು ಮಧ್ಯಾಹ್ನ ೧.೪೪ ಕ್ಕೆ ಮಕರ ಲಗ್ನದಲ್ಲಿ ಕಾವೇರಿ ತೀರ್ಥೋದ್ಭವ ನಡೆಯಲಿದ್ದು ಜಾತ್ರೆಗೆ ಸಂಬAಧಿಸಿದAತೆ ಜಿಲ್ಲಾಡಳಿತದಿಂದ ಸಿದ್ಧತೆಗಳು ನಡೆಯುತ್ತಿವೆ. ತೀರ್ಥೋದ್ಭವ ಮಧ್ಯಾಹ್ನ ಆಗುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಹೆಚ್ಚಿನ ಭಕ್ತರು ಬರುವ ನಿರೀಕ್ಷೆಯಿರುವ ಹಿನ್ನೆಲೆ ಭದ್ರತಾ ವ್ಯವಸ್ಥೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಕಾರ್ಯ ನಿರ್ವಹಿಸಲಿದ್ದಾರೆ.
ಇಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಐಶ್ವರ್ಯ ಕಾವೇರಿ ಕ್ಷೇತ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಹಿಂದೆ ಸಭೆಯಲ್ಲಿ ನಿರ್ಣಯಿಸಿದಂತೆ ಜಿಲ್ಲಾಡಳಿತದಿಂದ ಎಲ್ಲಾ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದರು. ತೀರ್ಥೋದ್ಭವ ವೀಕ್ಷಣೆಗೆ ದೇವಾಲಯಗಳಲ್ಲಿ ಐದು ಕಡೆ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ. ತಲಕಾವೇರಿಗೆ ತೆರಳುವ ದಾರಿಯಲ್ಲಿ ನಾಲ್ಕು ಕಡೆ ಮೊಬೈಲ್ ಶೌಚಾಲಯಗಳನ್ನು ಅಳವಡಿಸಲಾಗಿದೆ. ಜಾತ್ರೆಯ ಅಂಗವಾಗಿ ಬಿಗಿ ಭದ್ರತೆಗಾಗಿ ಪೊಲೀಸ್ ಇಲಾಖೆಯಿಂದ ಕುಂಡಿಕೆಯ ಸುತ್ತ ಸುಮಾರು ಹತ್ತು ಅಡಿ ಎತ್ತರದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ದೇವಾಲಯಗಳಲ್ಲಿ ೪೫ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಜಾತ್ರೆಗೆಂದು ಹೆಚ್ಚುವರಿಯಾಗಿ ೫೦ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ತಾ. ೧೬ ರಿಂದಲೇ ದೇವಾಲಯಗಳು ವಿದ್ಯುತ್ ಅಲಂಕಾರದಿAದ ಕಂಗೊಳಿಸಲಿವೆ. ೧೭ರಂದು ಕಾವೇರಿ ತೀರ್ಥೋದ್ಭವದ ಸಂದರ್ಭ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ, ಅರೆಭಾಷೆ ಮತ್ತು ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ತಲಕಾವೇರಿಯಲ್ಲಿ ಈ ಬಾರಿ ಅರ್ಚಕರಾದ ಗುರುರಾಜ್ ಮತ್ತು ರವಿರಾಜ್ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ತಲಕಾವೇರಿಯಲ್ಲಿ ೪ಆರನೇ ಪುಟಕ್ಕೆ ಕೊಡಗು ಏಕೀಕರಣ ರಂಗದ ವತಿಯಿಂದ ಒಂದು ತಿಂಗಳ ಕಾಲ ಅನ್ನದಾನ ನಡೆಯಲಿದೆ. ಭಾಗಮಂಡಲ ದೇವಾಲಯದ ವತಿಯಿಂದ ಎಂದಿನAತೆ ಅನ್ನದಾನ ನೆರವೇರಲಿದೆ. ಕುಂಡಿಕೆಯ ಸುತ್ತ ೪೦ಕ್ಕೂ ಅಧಿಕ ಹೈಮಾಸ್ಕ್ ದೀಪಗಳು, ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಭಾಗಮಂಡಲ ಹಾಗೂ ತಲಕಾವೇರಿ ದೇವಾಲಯಗಳಲ್ಲಿ ರೂ. ೬.೭೦ ಲಕ್ಷ ವೆಚ್ಚದಲ್ಲಿ ಹೂವಿನ ಅಲಂಕಾರ ಕೈಗೊಳ್ಳಲಾಗಿದೆ. ಭಾಗಮಂಡಲದಿAದ ತಲಕಾವೇರಿವರೆಗೆ ಉಚಿತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ.ತಲಕಾವೇರಿಯಲ್ಲಿ ಗೋಪುರದಿಂದ ದೇವಾಲಯದವರೆಗೆ ಬಿಸಿಲು ಮಳೆೆಗೆ ಭಕ್ತರು ನಡೆದಾಡಲು ಅನುಕೂಲವಾಗುವಂತೆ ಒಂದು ಪಾರ್ಶ್ವದಲ್ಲಿ ಶಾಶ್ವತ ಮೇಲ್ಚಾವಣಿ ನಿರ್ಮಿಸಲಾಗಿದೆ. ಜನ ದಟ್ಟಣೆ ನಿಯಂತ್ರಿಸುವ ಸಲುವಾಗಿ ಪೊಲೀಸ್ ಇಲಾಖೆಯಿಂದ ಬ್ಯಾರಿಕೇಡ್ ಅಳವಡಿಸುವ ಕಾರ್ಯ ನಡೆಯುತ್ತಿದೆ. ತಲಕಾವೇರಿಯಲ್ಲಿ ತಾ. ೧೭ರಂದು ಬೆಳಿಗ್ಗೆ ನಿತ್ಯಪೂಜೆ ನಡೆದು ಬಳಿಕ ಸ್ಥಗಿತಗೊಳ್ಳಲಿದೆ. ನಂತರ ತೀರ್ಥೋದ್ಭದ ಬಳಿಕ ಪೂಜಾ ಕಾರ್ಯಗಳು ಎಂದಿನAತೆ ಜರುಗಲಿದೆ. ಕುಂಡಿಗೆಯ ಮೇಲ್ಭಾಗದ ಪೂಜಾ ಮಂಟಪದಲ್ಲಿ ಕುಂಕುಮಾರ್ಚನೆ ಇನ್ನಿತರ ಪೂಜಾ ಕಾರ್ಯವು ನಿರಂತರವಾಗಿ ನಡೆಯಲಿದೆ. ತಲಕಾವೇರಿಯನ್ನು ಸಾವಿರಕ್ಕೂ ಅಧಿಕ ಬಲ್ಬ್ಗಳಿಂದ ಅಲಂಕರಿಸಲಾಗಿದೆ ಸ್ವಚ್ಛತಾ ಕಾರ್ಯ ಪೂರ್ಣಗೊಂಡಿದ್ದು ದೇವಾಲಯಗಳು ವಿದ್ಯುತ್ ಅಲಂಕಾರದಿAದ ಕಂಗೊಳಿಸುತ್ತಿವೆ.
ಭಾಗಮAಡಲ ದೇವಾಲಯದ ವತಿಯಿಂದ ಅನ್ನದಾನ ಯಥಾಸ್ಥಿತಿಯಲ್ಲಿ ನಡೆಯಲಿದೆ. ಗ್ರಾಮ ಪಂಚಾಯಿತಿ ವತಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಲಾಗಿದೆ. ಕರಿಕೆ ಜಂಕ್ಷನ್‌ನಿAದ ಭಾಗಮಂಡಲ ದೇವಾಲಯದವರೆಗೆ ಬೀದಿ ದೀಪಗಳ ವ್ಯವಸ್ಥೆ ಕಲ್ಪಿಸಲಾಗಿದೆ. ತ್ರಿವೇಣಿ ಸಂಗಮದಲ್ಲಿ ಪಿಂಡಪ್ರದಾನ ತಾ. ೧೭ರಂದು ಮೂರು ಗಂಟೆವರೆಗೆ ನಡೆಯಲಿದೆ. ತ್ರಿವೇಣಿ ಸಂಗಮದಲ್ಲಿ ಹೂಳೆತ್ತುವ ಕಾರ್ಯ ಮುಕ್ತಾಯದ ಹಂತದಲ್ಲಿದ್ದು ತಾ. ೧೫ರಂದು ಪೂರ್ಣಗೊಳ್ಳಲಿದೆ.
ಭಗಂಡೇಶ್ವರ ಸನ್ನಿಧಿಯಲ್ಲಿ ನಂದಾದೀಪ
ತಲಕಾವೇರಿ ಜಾತ್ರೆಗೆ ಸಂಬAಧಿಸಿದAತೆ ನಡೆಯುವ ವಿವಿಧ ಕಾರ್ಯಕ್ರಮಗಳಿಗೆ ಯಾವುದೇ ವಿಘ್ನ ಬಾರದಿರಲಿ ಎಂದು ಪ್ರಾರ್ಥಿಸಿ, ಇಲ್ಲಿನ ಭಗಂಡೇಶ್ವರ ದೇವಾಲಯದಲ್ಲಿ ಮಂಗಳವಾರ ನಂದಾ ದೀಪವನ್ನು ಉರಿಸಲಾಯಿತು. ಸೆಪ್ಟೆಂಬರ್ ೨೬ ರಿಂದ ಆರಂಭಗೊAಡ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಆಜ್ಞಾ ಮುಹೂರ್ತ, ಪತ್ತಾಯಕ್ಕೆ ಅಕ್ಕಿ ಹಾಕುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದ್ದು, ಇಂದು ಅಕ್ಷಯ ಪಾತ್ರೆಗೆ ಅಕ್ಕಿ ಹಾಕುವ ಕಾರ್ಯಕ್ರಮ ನಡೆಯಿತು. ಅರ್ಚಕ ರವಿ ಭಟ್ ನೇತೃತ್ವದಲ್ಲಿ ದೇವಾಲಯದಲ್ಲಿ ವಿಶೇಷ ಪೂಜೆ ಜರುಗಿದ ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ಐಶ್ವರ್ಯ ಹಾಗೂ ತಲಕಾವೇರಿ ಕ್ಷೇತ್ರದ ತಕ್ಕರಾದ ಕೋಡಿ ಮೋಟಯ್ಯ ನಂದಾ ದೀಪವನ್ನು ಉರಿಸಿದರು. ಬೆಳಿಗ್ಗೆ ೧೧:೪೫ಕ್ಕೆ ಧನುರ್ ಲಗ್ನದಲ್ಲಿ ಅಕ್ಷಯ ಪಾತ್ರೆಗೆ ಭಾಗಮಂಡಲ ತಕ್ಕರಾದ ಬಳ್ಳಡ್ಕ ಅಪ್ಪಾಜಿ ಅಕ್ಕಿಯನ್ನು ಸುರಿದು ಚಾಲನೆ ನೀಡಿದರು. ಇಂದಿನಿAದ ಒಂದು ತಿಂಗಳ ಕಾಲ ಕಿರು ಸಂಕ್ರಮಣದವರೆಗೆ ನಂದಾದೀಪ ತುಪ್ಪದಿಂದ ಉರಿಯಲಿದ್ದು, ಮಹಿಳೆಯರು, ಭಕ್ತರು ಪಡಿಯಕ್ಕಿಯನ್ನು ಮನೆಗಳಿಗೆ ಕೊಂಡೊಯ್ದರು.
ಬಳಿಕ ದೇವಾಲಯದಲ್ಲಿ ಅಕ್ಷಯ ಪಾತ್ರೆ ಅಕ್ಕಿಯನ್ನು ಭಕ್ತರು ಸುರಿದರು. ಪಡಿಯಕ್ಕಿ ರೂಪದಲ್ಲಿ ಒಂದು ತಿಂಗಳ ಕಾಲ ಭಕ್ತರಿಗೆ ಇದನ್ನು ವಿತರಿಸಲಾಗುತ್ತದೆ. ಅಕ್ಷಯ ಪಾತ್ರೆಯಿಂದ ಕೊಂಡೊಯ್ದ ಅಕ್ಕಿಯಿಂದ ಸಂಪತ್ತು ವೃದ್ಧಿಸಲಿದೆ ಎಂಬ ನಂಬಿಕೆ ಭಕ್ತರದ್ದು. ಸಂಜೆ ೪:೪೫ ಕ್ಕೆ ಮೀನಾ ಲಗ್ನದಲ್ಲಿ ಕಾಣಿಕೆ ಡಬ್ಬಿಯನ್ನು ಇರಿಸಲಾಯಿತು. ಸಾಂಪ್ರದಾಯಿಕ ಆಚರಣೆಯಲ್ಲಿ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ್ ಕರಂದ್ಲಾಜೆ, ಕಾರ್ಯದರ್ಶಿ ಪೇರಿಯನ ಉದಯ, ಅಕಾಡೆಮಿ ಸದಸ್ಯರಾದ ಕುದುಪಜೆ ಪ್ರಕಾಶ್, ಪಟ್ಟಮಾಡ ಗಿರಿ, ಮಣವಟ್ಟಿರ ಪಾಪು, ಆಪಾಡಂಡ ಕೌಂಡಿನ್ಯ, ಬಡ್ಡಿರ ನಂದ, ದೇವಂಗೋಡಿ ಹರ್ಷ, ಭಾಗಮಂಡಲ ನಾಡು ಗೌಡ ಯುವ ಒಕ್ಕೂಟದ ಅಧ್ಯಕ್ಷ ಕುದುಕುಳಿ ಕಿಶೋರ್, ಸ್ಥಳೀಯ ಬಳ್ಳಡ್ಕ ಕುಟುಂಬಸ್ಥರು ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು.
-ಸುನಿಲ್ ಕುಯ್ಯಮುಡಿ.