ಮುಳ್ಳೂರು, ಸೆ. ೧೬: ಇಲ್ಲಿನ ಶ್ರೀ ವಿನಾಯಕ ಗೆಳೆಯರ ಬಳಗ ವತಿಯಿಂದ ಗೌರಿ ಗಣೇಶ ಹಬ್ಬದ ಪ್ರಯುಕ್ತ ಪ್ರತಿಷ್ಠಾಪಿಸಲಾಗಿದ್ದ ೧೦ನೇ ವರ್ಷದ ಗೌರಿ ಗಣೇಶ ವಿಸರ್ಜನೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ನೆರವೇರಿಸಲಾಯಿತು. ಮುಳ್ಳೂರು ಗ್ರಾಮದ ಶ್ರೀ ವಿನಾಯಕ ಗೆಳೆಯರ ಬಳಗ ಸಮಿತಿಗೆ ೧೦ ವರ್ಷದ ತುಂಬಿದ ಹಿನ್ನೆಲೆಯಲ್ಲಿ ಈ ಬಾರಿ ೧೦ ಅಡಿ ಎತ್ತರದ ಬೃಹತ್ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತು. ಗೌರಿ ಗಣೇಶ ಮೂರ್ತಿಯ ವಿಸರ್ಜನೋತ್ಸವ ಪ್ರಯುಕ್ತ ಗೌರಿ-ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ ವೇದಿಕೆಯಲ್ಲಿ ಗಣಪತಿ ಹೋಮ ಕಾರ್ಯವನ್ನು ನೆರವೇರಿಸಲಾಯಿತು ಗೌರಿ ಗಣೇಶ ಮೂರ್ತಿಗೆ ಅರ್ಚಕರು ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು ನಂತರ ಗೌರಿ ಗಣೇಶನ ಮೂರ್ತಿಯನ್ನು ಅಲಂಕರಿಸಿದ ವಾಹನದ ಮಂಟಪದಲ್ಲಿ ಪ್ರತಿಷ್ಠಾಪಿಸಿ ಬಳಿಕ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ಗ್ರಾಮದ ಬೀದಿಗಳಲ್ಲಿ ಮಂಗಳವಾದ್ಯಗೋಷ್ಠಿಯೊAದಿಗೆ ಮೆರವಣಿಗೆ ಸಾಗಿತು. ಶೋಭಾಯಾತ್ರೆ ಸಂದರ್ಭ ಗ್ರಾಮದ ರಸ್ತೆ ಬದಿಯ ಮನೆ ಮುಂಭಾಗದಲ್ಲಿ ರಂಗೋಲಿ ಬಿಟ್ಟು ಮೆರವಣಿಗೆಯನ್ನು ಬರಮಾಡಿಕೊಂಡ ಮಹಿಳೆಯರು ಗೌರಿ ಗಣೇಶ ಮೂರ್ತಿಯನ್ನು ಭಕ್ತಿಪೂರ್ವಕವಾಗಿ ಪೂಜಿಸಿದರು. ಹೊನ್ನೆಕೊಪ್ಪಲು ಗ್ರಾಮದ ಜಂಕ್ಷನ್‌ವರೆಗೆ ತಲುಪಿ ನಂತರ ಅದೇ ರಸ್ತೆಯಲ್ಲಿ ವಾಪಾಸಾದ ಮೆರವಣಿಗೆ ಮುಳ್ಳೂರು ಗ್ರಾಮದ ಅರಳಿಕಟ್ಟೆ ಜಂಕ್ಷನ್‌ಗೆ ಸಾಗಿದ ನಂತರ ಅದೇ ಮಾರ್ಗವಾಗಿ ವಾಪಾಸಾಯಿತು ಸಂಜೆ ೭ ಗಂಟೆಗೆ ಗ್ರಾಮದ ಗುದ್ದಲಿಕೆರೆಯಲ್ಲಿ ಹತ್ತು ಅಡಿ ಎತ್ತರದ ಗಣೇಶ ಮೂರ್ತಿಯ ವಿಸರ್ಜನೆ ಮೂಲಕ ಗಣೇಶೋತ್ಸವ ಕಾರ್ಯಕ್ರಮ ಸಂಪನ್ನಗೊAಡಿತು. ಅರ್ಚಕ ಶರತ್ ಆಚಾರ್ಯ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನೆರವೇರಿತು. ವಿಸರ್ಜನೋತ್ಸವ ಕಾರ್ಯಕ್ರಮದ ಅಂಗವಾಗಿ ಸೇವಾ ಸಮಿತಿಯಿಂದ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.