ಗೋಣಿಕೊಪ್ಪ, ಸೆ. ೧೬: ದಸರಾ ಮಂಟಪಗಳ ಶೋಭಯಾತ್ರೆಯಲ್ಲಿ ಡಿ.ಜೆ ಅಳವಡಿಸುವುದಿಲ್ಲ ಎಂದು ಗೋಣಿಕೊಪ್ಪ ೪೭ನೇ ದಸರಾ ಜನೋತ್ಸವದ ದಶಮಂಟಪ ಸಮಿತಿಗಳು ಭರವಸೆ ನೀಡಿವೆ. ಪರಿಮಳ ಮಂಗಳ ವಿಹಾರ ಸಭಾಂಗಣದಲ್ಲಿ ನಡೆದ ಪೊಲೀಸ್ ಮತ್ತು ಮಂಟಪ ಸಮಿತಿಗಳ ಸಭೆಯಲ್ಲಿ ಕಲಾಕೃತಿಗಳ ಪ್ರದರ್ಶನಕ್ಕೆ ಮಾತ್ರ ಧ್ವನಿ ಪೆಟ್ಟಿಗೆಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಡಿಜೆ ಬದಲಾಗಿ ಕೊಡಗಿನ ವಾಲಗ, ಮೈಸೂರು ಬ್ಯಾಂಡ್ ಸೆಟ್‌ನಂತಹ ಸಾಂಸ್ಕೃತಿಕ ಸಂಗೀತ ವಾದ್ಯಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಸಮಿತಿಯ ಪದಾಧಿಕಾರಿಗಳು ತಿಳಿಸಿದರು.

ತಾಲೂಕು ಉಪ ಪೊಲೀಸ್ ಅಧೀಕ್ಷಕ ಮಹೇಶ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಾಡ ಹಬ್ಬ ದಸರಾ ಸಮಿತಿಯ ಅಧ್ಯಕ್ಷ ಪ್ರಭಾಕರ್ ನೆಲ್ಲಿತ್ತಾಯ ಮಾತನಾಡಿ ಯಾವುದೇ ಶಬ್ಧ ಮಾಲಿನ್ಯಗಳಿಗೆ ಅವಕಾಶ ನೀಡದೇ ಕೊಡಗಿನ ಸಾಂಪ್ರದಾಯಿಕ ವಾಲಗವನ್ನು ಬಳಸಿಕೊಳ್ಳುವ ಬಗ್ಗೆ ವಿವರಣೆ ನೀಡಿದರು. ನಂತರ ಮಾತನಾಡಿದ ವಿವಿಧ ಸಮಿತಿಗಳ ಪ್ರಮುಖರು ಹೆಚ್ಚು ಶಬ್ಧ ಹೊರಡಿಸದ ಸಂಗೀತ ಪರಿಕರಗಳನ್ನು ಬಳಸಿ ಮೆರವಣಿಗೆ ನಡೆಸುವುದಾಗಿ ತಿಳಿಸಿದರು.

ಡಿ.ವೈ.ಎಸ್.ಪಿ ಮಹೇಶ್‌ಕುಮಾರ್ ಮಾತನಾಡಿ, ಶೋಭಾಯಾತ್ರೆಯಲ್ಲಿ ಜನರಿಗೆ ಸಮಸ್ಯೆ ಉಂಟಾಗದAತೆ ಆಯೋಜಕರು ಕ್ರಮ ಕೈಗೊಳ್ಳಬೇಕು. ಪಟಾಕಿ ಸಿಡಿಸುವುದು ಅಪಾಯಕಾರಿ. ಜನರ ೭ನೇ ಪುಟಕ್ಕೆ

ಮೊದಲ ಪುಟದಿಂದ) ಸುರಕ್ಷತೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಒಪ್ಪಿಕೊಂಡ ರೀತಿಯಲ್ಲಿಯೇ ನಡೆದುಕೊಂಡರೆ ಅದು ಉತ್ತಮ ಬೆಳವಣಿಗೆ. ಒಂದು ವೇಳೆ ಇಲ್ಲವಾದರೆ ಕ್ರಮ ಕೈಗೊಳ್ಳಲಾಗುವುದು. ಕಲಾಕೃತಿಗಳ ಪ್ರದರ್ಶನ ಎಷ್ಟು ಡಿಸೆಬಲ್ ಒಳಗೆ ಧ್ವನಿ ಪೆಟ್ಟಿಗೆ ಅಳವಡಿಸಬೇಕೆಂಬುದನ್ನು ಚರ್ಚಿಸಿ ನಂತರ ಅದರ ಅಳವಡಿಕೆಗೆ ಅವಕಾಶ ನೀಡುವ ಬಗ್ಗೆ ಚಿಂತಿಸಲಾಗುವುದು ಎಂದು ಮಾಹಿತಿ ನೀಡಿದರು.

ವೃತ್ತ ನಿರೀಕ್ಷಕ ಶಿವರಾಜ್ ಆರ್. ಮುದೋಳ್ ಮಾತನಾಡಿ, ಮಂಟಪಗಳು ಸರಿಯಾದ ಸಮಯಕ್ಕೆ ಬಸ್ಸ್ ನಿಲ್ದಾಣದಲ್ಲಿ ಪ್ರದರ್ಶನ ನೀಡುವ ಮೂಲಕ ಜನಾಕರ್ಷಣೆ ಪಡೆಯಬೇಕು. ಪ್ರದರ್ಶನ ವೀಕ್ಷಿಸಲು ಜನರನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಾಡಿಸುವಂತಾಗಬಾರದು. ವಿದ್ಯುತ್ ಇಲಾಖೆಯ ಮಾರ್ಗದರ್ಶನದಲ್ಲಿ ಲೈಟಿಂಗ್ ಬೋರ್ಡಿನ ಎತ್ತರವನ್ನು ನಿರ್ಧರಿಸಿ ವಿದ್ಯುತ್ ಅವಘಡ ತಪ್ಪಿಸಲು ಕ್ರಮ ಕೈಗೊಳ್ಳಬೇಕು. ಮಂಟಪದ ನಿರ್ವಹಣೆಗೆ ಹೆಚ್ಚು ಸ್ವಯಂ ಸೇವಕರನ್ನು ನೇಮಿಸಬೇಕೆಂದು ತಿಳಿಸಿದರು.

ಚೆಸ್ಕಾಂ ಇಂಜಿನಿಯರ್ ಹೇಮಂತ್ ಕುಮಾರ್ ಮಾತನಾಡಿ, ದಸರಾ ಆಚರಣೆಗೆ ಸಮಸ್ಯೆಯಾಗಬಾರದೆಂಬ ನಿಟ್ಟಿನಲ್ಲಿ ಪಟ್ಟಣದ ಎರಡೂ ಬದಿಗಳಲ್ಲಿ ಕಂಬಗಳನ್ನು ಅಳವಡಿಸಿ ವಿದ್ಯುತ್ ಸಂಪರ್ಕಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಮಂಟಪಗಳು ರಸ್ತೆಯಲ್ಲಿ ಸಂಚರಿಸುವಾಗ ಅವಘಡಗಳು ಉಂಟಾಗಬಾರದೆAದು ರಸ್ತೆ ನಡುವೆ ಹಾದು ಹೋಗಿರುವ ವಿದ್ಯುತ್ ತಂತಿಗಳನ್ನು ತೆರವುಗೊಳಿಸಿ ೨೫ ಅಡಿ ಎತ್ತರಕ್ಕೆ ಫೈಬರ್ ಕೇಬಲ್‌ಗಳನ್ನು ಅಳವಡಿಸಲಾಗಿದೆ ಎಂದರು. ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ದಶಮಂಟಪಗಳ ಸಮಿತಿ ಅಧ್ಯಕ್ಷ ಶಾಜಿ ಅಚ್ಚುತ್ತನ್ ದಸರಾ ಆಚರಣೆಗೆ ಕೈಗೊಂಡ ವ್ಯವಸ್ಥೆಗಳ ಬಗ್ಗೆ ಮಾತನಾಡಿದರು.

ತಾಲೂಕು ವೈಧ್ಯಾಧಿಕಾರಿ ಡಾ. ಯತಿರಾಜ್, ಠಾಣಾಧಿಕಾರಿ ಪ್ರದೀಪ್‌ಕುಮಾರ್ ಬಿ.ಕೆ, ಎ.ಎಸ್.ಐ ದೇವರಾಜ್ ಸೇರಿದಂತೆ ಅಗ್ನಿಶಾಮಕ ದಳ, ಕೆ.ಇ.ಬಿ, ಪಿ.ಡಬ್ಲೂ÷್ಯ.ಡಿ ಅಧಿಕಾರಿಗಳು ಹಾಗೂ ದಶಮಂಟಪಗಳ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.

-ಎನ್.ಎ