ಚೆಟ್ಟಳ್ಳಿ, ಸೆ. ೧೬: ಚೆಟ್ಟಳ್ಳಿ ಕೊಡವ ಸಮಾಜ ವತಿಯಿಂದ ತಾ. ೨೧ ರಂದು ಮಂಗಳ ಸಭಾಂಗಣದಲ್ಲಿ ಕೈಲ್‌ಪೊಳ್ದ್ ಒತ್ತೋರ್ಮೆ ಕೂಟ ನಡೆಯಲಿದೆ ಎಂದು ಗೌರವ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ ತಿಳಿಸಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಸಾಂಪ್ರದಾಯಿಕ ಆಯುಧ ಪೂಜೆ, ತೆಂಗಿನಕಾಯಿಗೆ ಗುಂಡು ಹೊಡೆಯುವುದು, ವಿವಿಧ ಕ್ರೀಡೆ, ಗುರು ಕಾರೋಣನಿಗೆ ಮೀದಿ ಅರ್ಪಣೆ, ಸಾಧಕರಿಗೆ ಸನ್ಮಾನ ನಡೆಯಲಿದೆ. ಅಂದು ಪೂರ್ವಾಹ್ನ ೧೦.೩೦ ಗಂಟೆಗೆ ಸಮಾಜದ ಅಧ್ಯಕ್ಷ ಮುಳ್ಳಂಡ ರತ್ತು ಚಂಗಪ್ಪನವರ ಅಧ್ಯಕ್ಷತೆಯಲ್ಲಿ ಸಮಾಜದ ೫ನೇ ವರ್ಷದ ಮಹಾಸಭೆ ನಡೆಯಲಿದೆ. ಎಂದು ತಿಳಿಸಿದ್ದಾರೆ.