ಕೂಡಿಗೆ, ಸೆ. ೧೬: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು, ಭುವನಗಿರಿ, ೬ನೇ ಹೊಸಕೋಟೆ, ಹೆಬ್ಬಾಲೆ ಗ್ರಾಮ ಪಂಚಾಯಿತಿಯ ಮರೂರು, ಹಳೆಕೋಟೆ ವ್ಯಾಪ್ತಿಯ ನೂರಾರು ರೈತರು, ಗ್ರಾಮಸ್ಥರು ಕಾಡಾನೆ-ಕಾಡು ಹಂದಿಗಳಿAದ ಬೆಳೆ ನಷ್ಟ ಉಂಟಾಗಿರುವ ಹಿನ್ನೆಲೆಯಲ್ಲಿ ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎ ಗೋಪಾಲ ಅವರಿಗೆ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದರು.
ಬೆಳೆಯ ನಷ್ಟಕ್ಕೆ ಪರಿಹಾರ ನೀಡುವಂತೆ ಮತ್ತು ಕಾಡಾಂಚಿಗೆ ರೈಲ್ವೆ ಕಂಬಿಗಳನ್ನು ಅಳವಡಿಕೆ ಮಾಡುವಂತೆ ಮನವಿಯನ್ನು ಸಲ್ಲಿಸಿದರು. ಈ ಸಂದರ್ಭ ಸೀಗೆಹೊಸೂರು ಗ್ರಾಮಸ್ಥರಾದ ಧನಂಜಯ, ನಾಗೇಶ್, ರಾಜಶೇಖರ, ಕಣಿವೆ ನಂಜುAಡ ಸ್ವಾಮಿ, ರವಿ, ಅಪ್ಪಾಜಿ ಜವರಪ್ಪ, ಮಹಾದೇವ, ಸೇರಿದಂತೆ ಇತರರು ಹಾಜರಿದ್ದರು.
ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಶೈಲೇಂದ್ರ ಕುಮಾರ್, ಹೆಬ್ಬಾಲೆ ಉಪ ವಲಯ ಅರಣ್ಯಾಧಿಕಾರಿ ಬಿ.ಎಸ್. ಗುರುಪ್ರಸಾದ್ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.