ನಾಪೋಕ್ಲು, ಸೆ. ೧೬ : ಇಲ್ಲಿಗೆ ಸಮೀಪದ ನೆಲಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೨೦೨೪ -೨೫ ಸಾಲಿನಲ್ಲಿ ರೂ. ೩೭.೧೩ ಲಕ್ಷ ಲಾಭ ಗಳಿಸಿದೆ ಎಂದು ಸಂಘಧ ಅಧ್ಯಕ್ಷ ಮಾಳೆಯಂಡ ಎಂ. ಅಪ್ಪಚ್ಚ ತಿಳಿಸಿದ್ದಾರೆ.

ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಸಂಘದಲ್ಲಿ ೧೨೨೬ ಸದಸ್ಯರಿದ್ದು ರೂ. ೧೯೧.೩೨ ಲಕ್ಷ ಷೇರು ಹಣ ಇರುತ್ತದೆ. ಸಂಘದಲ್ಲಿ ಒಟ್ಟು ದುಡಿಯುವ ಬಂಡವಾಳ ೨೦ ಕೋಟಿ ಹೊಂದಿದೆ. ಸಂಘವು ಕೃಷಿ ಸಾಲವನ್ನು ೪೪೧ ರೈತರಿಗೆ ರೂ. ೧೧೩೦.೫೪ ಲಕ್ಷ ಸಾಲ ವಿತರಿಸಿದ್ದು, ಜಾಮೀನು ಸಾಲ ಮತ್ತು ಗೊಬ್ಬರ ಸಾಲ ರೂ. ೧೪೩.೫೯ ಲಕ್ಷ ವಿತ್ತರಿಸಲಾಗಿದೆ. ಸಂಘವು ಡಿಸಿಸಿ ಬ್ಯಾಂಕಿನಿAದ ರೂ. ೧೧೩೦.೫೪ ಲಕ್ಷ ಸಾಲ ಪಡೆದುಕೊಂಡು ಅದನ್ನು ಪಾವತಿಸಿದೆ.

ಸಂಘದ ಸದಸ್ಯರಿಗೆ ಶೇಕಡ ೧೧ ಡಿವಿಡೆಂಡ್ ನೀಡುವಂತೆ ನಿರ್ಣಯಿಸಲಾಗಿದೆ ಎಂದರು. ಸಂಘದ ಸದಸ್ಯರುಗಳ ಮಕ್ಕಳಿಗೆ ೧೦ನೇ ತರಗತಿ ಮತ್ತು ದ್ವಿತೀಯ ಪಿ.ಯು.ಸಿ. (ಶೇ. ೮೫) ಎಲ್ಲಾ ಅಂತಿಮ ಪದವಿ ಮತ್ತು ಸ್ನಾತಕೋತ್ತರ ಪದವಿಗಳ ಜೊತೆಗೆ ಮೆಡಿಕಲ್, ಇಂಜಿನಿಯರಿAಗ್, ಡೆಂಟಲ್‌ಗಳಲ್ಲಿ ಅಂತಿಮ ಪರೀಕ್ಷೆಯಲ್ಲಿ ಹೆಚ್ಚು ಅಂಕ (೮೦%) ಸಂಪಾದಿಸಿ ತೇರ್ಗಡೆಯಾದ ಮೊದಲ ಮೂರು ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುವುದು. ತಾ. ೧೮ರೊಳಗೆ ಸಂಘಕ್ಕೆ ಅಂಕಪಟ್ಟಿಯನ್ನು ತಲುಪಿಸಬೇಕಾಗಿ ತಿಳಿಸಿದರು.

ಸಂಘದ ಮಹಾಸಭೆ ತಾ. ೨೦ರಂದು ಸಂಘದ ಸಭಾಂಗಣದಲ್ಲಿ ನಡೆಯಲಿದೆ ಎಂದು ತಿಳಿಸಿದರು. ಸಭೆಯಲ್ಲಿ ಸಂಘದ ಉಪಾಧಕ್ಷ್ಷೆ ಚೀಯಕಪೂವಂಡ ವಿ. ರೀನಾ, ನಿರ್ದೇಶಕರುಗಳಾದ ಬದ್ದಂಜೆಟ್ಟಿರ ಎ. ತಿಮ್ಮಯ್ಯ, ಎ.ಜಿ. ಟಿಂಶ, ಚೀಯಕಪೂವಂಡ ಡಿ. ನಾಚಪ್ಪ, ಕರವಂಡ ಜಿ. ಅಪ್ಪಣ್ಣ, ಮಚ್ಚುರ ಎಂ. ರವೀಂದ್ರ, ಮಣವಟ್ಟೀರ ಬಿ. ದೀಪಕ್ ಪೊನ್ನಪ್ಪ, ಮಣವಟ್ಟೀರ ಕೆ. ದಯಾ ಚಿಣ್ಣಪ್ಪ, ಮಣವಟ್ಟೀರ. ಎನ್. ಕುಶಾಲಪ್ಪ, ಚೀಯಕಪೂವಂಡ ಎ. ಸುನಿಲ್, ಅಪ್ಪುಮಣಿಯಂಡ ಬಿ. ಕಾವೇರಮ್ಮ, ಪಿ.ಎಂ. ವಿಜು ಹಾಗೂ ಸಂಘದ ಪ್ರಬಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಮತ್ತು ಕೊಡಗು ಡಿಸಿಸಿ ಬ್ಯಾಂಕ್‌ನ ಮೇಲ್ವಿಚಾರಕರು ಎಂ.ಬಿ. ಅಯ್ಯಪ್ಪ ಹಾಜರಿದ್ದರು.