ಗೋಣಿಕೊಪ್ಪಲು, ಸೆ. ೧೬ : ಅಮ್ಮತ್ತಿಯ ಇತಿಹಾಸ ಪ್ರಸಿದ್ದ ಬಸವೇಶ್ವರ ದೇವಸ್ಥಾನ ಸಮಿತಿಯ ವತಿಯಿಂದ ದೇವಾಲಯ ಆವರಣದಲ್ಲಿ ತಜ್ಞ ವೈದ್ಯರುಗಳಿಂದ ಉಚಿತ ಆರೋಗ್ಯ ಶಿಬಿರ ಯಶಸ್ವಿಯಾಗಿ ಜರುಗಿತು. ದೇವಸ್ಥಾನ ಸಮಿತಿಯ ನೂತನ ಅಧ್ಯಕ್ಷರಾದ ಕೆ. ಪ್ರಿನ್ಸ್ ಗಣಪತಿ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಗ್ರಾಮದ ನೂರಾರು ನಾಗರಿಕರು ಶಿಬಿರದ ಪ್ರಯೋಜನ ಪಡೆದರು.

ದೇವಾಲಯ ಸಮಿತಿಯ ಅಧ್ಯಕ್ಷರಾಗಿದ್ದ ಮಾಚಿಮಂಡ ಮಧು ಮಾದಪ್ಪ ಅವರು ಇತ್ತೀಚೆಗೆ ನಿಧನ ಹೊಂದಿದ ಹಿನ್ನಲೆಯಲ್ಲಿ ಇವರ ನೆನಪಿನಲ್ಲಿ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿತ್ತು. ಶ್ರೀ ಬಸವೇಶ್ವರ ದೇವಸ್ಥಾನ, ಸೇವಾ ಭಾರತಿ ಕೊಡಗು ಜಿಲ್ಲೆ ಹಾಗೂ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಶ್ರಯದಲ್ಲಿ ಆರೋಗ್ಯ ತಪಾಸಣೆ ನಡೆಯಿತು. ನುರಿತ ತಜ್ಞ ವೈದ್ಯರ ತಂಡ ಭಾಗವಹಿಸುವ ಮೂಲಕ ಶಿಬಿರದಲ್ಲಿ ಪಾಲ್ಗೊಂಡ ನಾಗರಿಕರಿಗೆ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.

ಉಚಿತ ಆರೋಗ್ಯ ಶಿಬಿರ ಉದ್ಘಾಟನೆ ವೇಳೆ ಗ್ರಾಮದ ಅಭಿಷೇಕ್ ಮುತ್ತಪ್ಪ, ಮುಕ್ಕಾಟಿರ ಬೋಪಣ್ಣ, ಶ್ಯಾಂ ಚಿಣ್ಣಪ್ಪ, ಹರೀಶ್ ಕಾವೇರಪ್ಪ, ಜಯ ಉತ್ತಪ್ಪ, ಸೋಮೇಶ್ ಚಂಗಪ್ಪ, ರಾಜು, ಸುಗುಣ, ಯು.ಚಂಗಪ್ಪ, ಗಗನ್, ಪೂವಯ್ಯ, ರಮೇಶ್, ನಿರನ್, ರವಿ ತಮ್ಮಯ್ಯ, ಅಜಿತ್, ಅನೀಲ್, ಪ್ರಥಮ್, ಮಹೇಶ್, ಟಿ.ಸಿ.ಚಂದ್ರನ್, ಪಳೆಯತಂಡ ಹರಿ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

ಸAಜೆಯ ವೇಳೆ ಎಂದಿನAತೆ ಅಲಂಕೃತ ಮಂಟಪದಲ್ಲಿ ಗೌರಿ ಗಣೇಶ ಕುಳ್ಳಿರಿಸಿ, ನಗರದಲ್ಲಿ ಇನ್ನುಳಿದ ಚೌಡೇಶ್ವರಿ ಗಣಪತಿ ಸೇವಾ ಸಮಿತಿ ಗಜಾನನ, ಸೇವಾ ಸಮಿತಿಯ ಮಂಟಪಗಳೊAದಿಗೆ ತೆರಳಿ ಮುಂಜಾನೆಯ ವೇಳೆ ಮದ್ರಿರ ಗಣೇಶ್‌ರವರ ಕೆರೆಯಲ್ಲಿ ಗೌರಿ ಗಣೇಶ ವಿಸರ್ಜನೆ ಮಾಡಲಾಯಿತು.

ಈ ವೇಳೆ ಸಮಿತಿಯ ಅಧ್ಯಕ್ಷರಾದ ಪ್ರಿನ್ಸ್ ಗಣಪತಿ, ಸಮಿತಿಯ ಕಾರ್ಯದರ್ಶಿ ಪಿ.ಬಿ.ಹರಿ, ಖಜಾಂಚಿ ಎಂ.ಎA. ಉತ್ತಪ್ಪ, ಜಂಟಿ ಕಾರ್ಯದರ್ಶಿ ಪಿ. ಸೋಮೇಶ್, ನಿರ್ದೇಶಕರಾದ ಅಯ್ಯಪ್ಪ ಶ್ಯಾಮ್ ಚಿಣ್ಣಪ್ಪ, ಮುಕ್ಕಾಟೀರ ಬೋಪಣ್ಣ, ಅರ್ಚಕರಾದ ಜಿ. ಮಹೇಶ್ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.