ವೀರಾಜಪೇಟೆ, ಜು. ೧೧: ಕೆದಮುಳ್ಳೂರಿನ ಕ್ರೆöÊಸ್ಟ್ ಕಾಲೋನಿಗೆ ಬರುತ್ತಿದ್ದ ಸರಕಾರಿ ಬಸ್ ಕಳೆದ ೫ ವರ್ಷಗಳ ಹಿಂದೆ ಕೋವಿಡ್ ಸಮಯದಲ್ಲಿ ನಿಂತು ಹೋಗಿ, ಇದೀಗ ಸರಕಾರಿ ಬಸ್‌ಗೆ ಮರುಚಾಲನೆ ದೊರಕಿದ್ದು ಅದೇ ಮಾರ್ಗದಲ್ಲಿ ಬಸ್ ಬಂದಿದ್ದನ್ನು ಗ್ರಾಮಸ್ಥರು ಸಂತೋಷದಿAದ ಸ್ವಾಗತಿಸಿದರು. ಬಸ್ ಕೆದಮುಳ್ಳೂರಿನ ಕ್ರೆöÊಸ್ಟ್ ಕಾಲೋನಿಗೆ ಆಗಮಿಸುತ್ತಿದ್ದÀಂತೆ ಅಲ್ಲಿನ ನಿವಾಸಿಗಳು ಬಸ್‌ಗೆ ಪೂಜೆ ಸಲ್ಲಿಸಿ ಸಿಹಿ ವಿತರಣೆ ಮಾಡಿದರು.
ಮಡಿಕೇರಿಯಿಂದ ಬೆಳಿಗ್ಗೆ ಏಳು ಗಂಟೆಗೆ ಹೊರಟು ನಾಪೋಕ್ಲು, ಎಡಪಾಲ, ಕೆದಮುಳ್ಳೂರು, ವೀರಾಜಪೇಟೆ, ಮೈಸೂರಿಗೆ ತೆರಳಿ ಮತ್ತೆ ಅದೇ ಮಾರ್ಗವಾಗಿ ಮರಳುತ್ತಿತ್ತು. ಕೋವಿಡ್ ಸಮಯದಲ್ಲಿ ಈ ಬಸ್ ಸಂಚಾರ ಸ್ಥಗಿತಗೊಂಡಿತು. ನಂತರ ಸಂಬAಧಿಸಿದ ಇಲಾಖೆಗೆ ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ, ಇದರಿಂದ ಶಾಲಾ-ಕಾಲೇಜು, ನಗರ ಪ್ರದೇಶದಲ್ಲಿ ಕೆಲಸಕ್ಕೆ ಹೋಗುವವರಿಗೆ ತೊಂದರೆ ಆಗಿತ್ತು. ಬಸ್ ಸಮಸ್ಯೆ ಬಗ್ಗೆ ಕೆದಮುಳ್ಳೂರಿನ ಪಂಚಾಯಿತಿ ಸದಸ್ಯರು, ಹಾಗೂ ಗ್ರಾಮಸ್ಥರು ಶಾಸಕ ಪೊನ್ನಣ್ಣ ಅವರ ಗಮನಕ್ಕೆ ತಂದಿದ್ದರು.
ಇದಕ್ಕೆ ತಕ್ಷಣ ಸ್ಪಂದಿಸಿದ ಶಾಸಕ ಪೊನ್ನಣ್ಣ ಅವರು ಮಡಿಕೇರಿಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ವ್ಯವಸ್ಥಾಪಕ ಲಿಂಗಯ್ಯ, ಡಿಪೋ ವ್ಯವಸ್ಥಾಪಕ ಶಾಂತಕುಮಾರ್ ಹಾಗೂ ಅಧಿಕಾರಿ ಎಂ. ಮಹಬೂಬ್ ಆಲಿ ಅವರ ಜೊತೆಯಲ್ಲಿ ಚರ್ಚೆ ನಡೆಸಿ ಬಸ್ ಸಂಚಾರವನ್ನು ಪುನಃ ಆರಂಭಿಸುವAತೆ ತಿಳಿಸಿದರು. ಅದರಂತೆ ಬಸ್‌ಸಂಚಾರವನ್ನು ಪುನರ್ ಆರಂಭಿಸಲಾಗಿ ಶಾಸಕರು ಚಾಲನೆ ನೀಡಿದರು. ಇದರಿಂದ ಅನೇಕ ವರ್ಷದ ಸಾರ್ವಜನಿಕರ ಬೇಡಿಕೆ ಇಂದು ಈಡೇರಿದಂತಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರಾದ ಮಾಳೇಟಿರ ಪ್ರಶಾಂತ್ ಉತ್ತಪ್ಪ ಮಾತನಾಡಿ ಬಸ್ ಸಂಚಾರವಿಲ್ಲದೆ ಇಲ್ಲಿನ ನಿವಾಸಿಗಳಿಗೆ ಬಹಳ ಸಮಸ್ಯೆ ಆಗಿತ್ತು. ಬಹಳಷ್ಟು ಸಾರಿ ಸಮಸ್ಯೆ ಬಗ್ಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಇದೀಗ ಶಾಸಕರ ವಿಶೇಷ ಪ್ರಯತ್ನದಿಂದ ಬï್ಸ್ಸ ಸಂಚಾರ ಪ್ರಾರಂಭವಾಗಿ ಗ್ರಾಮಸ್ಥರಿಗೆ ಅನುಕೂಲವಾಗಿದೆ ಎಂದರು.
ಸ್ಥಳೀಯ ನಿವಾಸಿ ಕುಮಾರಿ ಮಾತನಾಡಿ, ಈ ಬಸ್ ಸಂಚಾರದಿAದ ತುಂಬಾ ಅನುಕೂಲವಾಗಿದೆ ಶಾಸಕ ಪೊನ್ನಣ್ಣ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಸ್ಥಳೀಯ ದೀಪಕ್ ಮಾತನಾಡಿ, ಬೆಳಿಗ್ಗೆ ಮತ್ತು ಸಂಜೆ ಶಾಲಾ ಮಕ್ಕಳಿಗೆ ಹಾಗೂ ನಗರದ ಪ್ರದೇಶದಲ್ಲಿ ಕೆಲಸಕ್ಕೆ ಹೋಗಿಬರಲು ಈ ಬಸ್ ಸಂಚಾರವಿಲ್ಲದೆ ತೊಂದರೆಯಾಗಿತ್ತು. ಶಾಸಕರು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾಳೇಟಿರ ಜಫ್ರಿ ಉತ್ತಪ್ಪ, ಸದಸ್ಯ ಮಾಳೇಟಿರ ಪ್ರಶಾಂತ್ ಉತ್ತಪ್ಪ, ಶುಭಾ, ಇಸ್ಮಾಯಿಲ್, ಎನ್. ಮಹೇಶ್, ಸ್ಥಳೀಯ ಗ್ರಾಮಸ್ಥರು ಹಾಜರಿದ್ದರು.