ಪಾಲಿಬೆಟ್ಟ, ಮಾ. ೯: ಮಹಿಳೆಯ ಹೊಟ್ಟೆಯಲ್ಲಿದ್ದ ೬ ಕೆ. ಜಿ. ತೂಕದ ಗೆಡ್ಡೆಯನ್ನು ವೀರಾಜಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ವೈದ್ಯರು ಶಸ್ತç ಚಿಕಿತ್ಸೆ ಮೂಲಕ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ವಿರಾಜಪೇಟೆಯ ಮಹಿಳೆ ಚೋಂದಮ್ಮ (೭೭) ಶಸ್ತçಚಿಕಿತ್ಸೆಗೆ ಒಳಗಾದವರು. ೬ ತಿಂಗಳಿನಿAದ ಹೊಟ್ಟೆ ಉಬ್ಬಿಕೊಂಡ ಕಾರಣ ಸ್ಕಾö್ಯನಿಂಗ್ ಮೂಲಕ ಗೆಡ್ಡೆ ಇರುವುದು ಪತ್ತೆಯಾಗಿದೆ. ಇದರಂತೆ ಸ್ತಿçÃರೋಗ ತಜ್ಞ ಡಾ. ರಾಕೇಶ್, ಅರವಳಿಕೆ ತಜ್ಞೆ ಡಾ. ಕಸ್ತೂರಿ ಹಾಗೂ ಶುಶ್ರೂಷಕಿಯರ ತಂಡ ಶನಿವಾರ ಶಸ್ತçಚಿಕಿತ್ಸೆ ನೆರವೇರಿಸಿತು.
ಅಂಡಾಶಯದ ಬಲಭಾಗದಲ್ಲಿ ಇದ್ದ ಗೆಡ್ಡೆಯನ್ನು ಸುಮಾರು ೧.೩೦ ಗಂಟೆ ಅವಧಿಯಲ್ಲಿ ಶಸ್ತçಚಿಕಿತ್ಸೆ ನಡೆಸಿ ಹೊರತೆಗೆಯಲಾಯಿತು. ನಂತರ ಈ ಗೆಡ್ಡೆಯನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಇನ್ನೂ ಸ್ವಲ್ಪ ದಿನ ತಡವಾಗಿ ತಪಾಸಣೆಗೆ ಬಂದಿದ್ದಲ್ಲಿ ಈ ಗೆಡ್ಡಯ ಕ್ಯಾನ್ಸರ್‌ಗೆ ತುತ್ತಾಗುತ್ತಿತ್ತು ಎಂದು ವೈದ್ಯರು ಮಾಹಿತಿ ನೀಡಿದರು. ವೈದ್ಯರಾದ ರಾಕೇಶ್ ಒಂದು ತಿಂಗಳ ಹಿಂದೆ ಮಹಿಳೆಯರೊಬ್ಬರ ಗರ್ಭಕೋಶದಿಂದ ನಾಲ್ಕು ಕೆಜಿ ಗೆಡ್ಡೆಯನ್ನು ತೆಗೆದಿದ್ದರು. - ಪುತ್ತಂ ಪ್ರದೀಪ್