ಕೂಡಿಗೆ, ಮಾ. ೯: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಕಾಳಿಕಾಂಬಾ ಯುವಕ ಸಂಘದ ವತಿಯಿಂದ ನಡೆದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಉತ್ಸವ ೨೦೨೫ರ ಪಂದ್ಯಾವಳಿಯಲ್ಲಿ ಕುಶಾಲನಗರದ ರಾಯಲ್ ಫ್ರೆಂಡ್ಸ್ ತಂಡ ಪ್ರಥಮ ಸ್ಥಾನವನ್ನು ಪಡೆದು ನಗದು ಹಾಗೂ ಟ್ರೋಫಿಯನ್ನು ತನ್ನಾದಾಗಿಸಿಕೊಂಡಿತು.
ದ್ವಿತೀಯ ಸ್ಥಾನವನ್ನು ಬಿ. ವೈ. ಸಿ. ತಂಡ ಮದಲಾಪುರ, ತೃತೀಯ ಸ್ಥಾನ ಕೂಡುಮಂಗಳೂರು ಶಿವಾಜಿ ಫ್ರೆಂಡ್ಸ್, ನಾಲ್ಕನೇ ಸ್ಥಾನವನ್ನು ಹೆಬ್ಬಾಲೆಯ ಬನಶಂಕರಿ ತಂಡವು ನಗದು ಹಾಗೂ ಟ್ರೋಫಿಯನ್ನು ಪಡೆದುಕೊಂಡಿತು.
ಕಬ್ಬಡಿ ಪಂದ್ಯಾವಳಿಯಲ್ಲಿ ಬ್ಯಾಡಗೊಟ್ಟ ಫ್ರೆಂಡ್ಸ್ ತಂಡ ಪ್ರಥಮ, ಹುದುಗೂರು ಕಾಳಿಕಾಂಬಾ ದ್ವಿತೀಯ ಸ್ಥಾನ ಪಡೆಯಿತು. ಮಹಿಳೆಯರ ವಿಭಾಗದ ಥ್ರೋಬಾಲ್ ಪಂದ್ಯಾಟದಲ್ಲಿ ಕರಾಟೆ ಕಿಡ್ಸ್ ತಂಡ ಪ್ರಥಮ, ಹುದುಗೂರು ಕಾಳಿಕಾಂಬಾ ದ್ವಿತೀಯ ಸ್ಥಾನ ಪಡೆದವು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಳಿಕಾಂಬಾ ಯುವಕ ಸಂಘದ ಅಧ್ಯಕ್ಷ ಐ.ಜಿ. ಶರತ್ ವಹಿಸಿ ಬಹುಮಾನ ವಿತರಣೆ ಮಾಡಿದರು.
ಈ ಸಂದರ್ಭ ವರ್ಷಂಪ್ರತಿಯAತೆ ಈ ಸಾಲಿನಲ್ಲಿ ವಿಶೇಷ ಆಹ್ವಾನಿತರಾಗಿದ್ದ ೨೦೨೩ರ ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ ವಿಜೇತ ಪುರುಷೋತ್ತಮ್ ರೈ, ಕರಾಟೆ ವಿಶ್ವ ಚಾಂಪಿಯನ್ ಕುಮಾರಿ ಆಜ್ಞಾ ಅಮಿತೆ, ಅರಣ್ಯ ಇಲಾಖೆಯ ಕ್ರೀಡಾಕೂಟದಲ್ಲಿ ಚಿನ್ನದ ವಿಜೇತ ಭೀಮಣ್ಣ ಗುರಣ್ಣ ಲಕ್ಕುಂಡಿ ಇವರುಗಳನ್ನು ಸಂಘದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸರ್ವೋತ್ತಮ ಸೇವಾ ಪ್ರಶಸ್ತಿ ವಿಜೇತ ಬಿ.ಎಲ್. ಸುರೇಶ್, ಅಭಿಮನ್ಯು ಆನೆ ಮಾವುತ ಐ.ಎಸ್ ವಸಂತ, ಭೀಮ್ ಹನುಮ ಸೇವಾ ಸಮಿತಿ ಅಧ್ಯಕ್ಷ ಸಜನ್ ಕಿಸೋರ್, ಹುದುಗೂರು ಗ್ರಾಮದ ಹಿರಿಯರಾದ ಟಿ.ಪಿ. ಪೂವಯ್ಯ, ಉಮಾಮಹೇಶ್ವರ ದೇವಾಲಯ ಸಮಿತಿ ಉಪಾಧ್ಯಕ್ಷ ಎನ್. ಎಸ್. ಮುತ್ತಪ್ಪ, ಕಾಳಿಕಾಂಬಾ ಯುವಕ ಸಂಘದ ಮಾಜಿ ಅಧ್ಯಕ್ಷರಾದ. ರಾಜಶೇಖರ್, ಕೆ.ಎಸ್. ಧನಂಜಯ್ ಎಸ್.ಸಿ. ಪ್ರವೀಣ್, ಟಿ.ಎಂ. ಚಿಣ್ಣಪ್ಪ, ಕೆ.ಪಿ. ಗಿರೀಶ್, ಕೂಡಿಗೆ ಪಂಚಾಯತಿ ಸದಸ್ಯ ಹೆಚ್.ಎಸ್. ರವಿ ಸೇರಿದಂತೆ ಸಂಘದ ಸದಸ್ಯರು ಹಾಜರಿದ್ದರು.
ನಂತರ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ವಿವಿಧ ತಂಡದವರು ಅತ್ಯಾಕರ್ಷಕ ಉಡುಗೆ ತೊಡುಗೆಯ ನೃತ್ಯ ಹಾಗೂ ಹಾಡುಗಾರಿಗೆ ನಡೆದವು ಗ್ರಾಮಸ್ಥರಿಗೆ, ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ, ಮತ್ತು ಅಂಗನವಾಡಿ ಮಕ್ಕಳಿಗೆ ನಡೆದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಸಂಘದ ವತಿಯಿಂದ ಬಹುಮಾನ ವಿತರಣೆ ಮಾಡಲಾಯಿತು. ಈ ಉತ್ಸವ ಕಾರ್ಯಕ್ರಮದಲ್ಲಿ ಹುದುಗೂರು ಕೂಡಿಗೆ, ಕೂಡುಮಂಗಳೂರು ಕಾಳಿದೇವನ ಹೊಸೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸಿದ್ದರು.