ಕರಿಕೆ, ಮಾ. ೯: ಇಲ್ಲಿಗೆ ಸಮೀಪದ ಕರಿಕೆ ಮಙನಡ್ಕದ ಇತಿಹಾಸ ಪ್ರಸಿದ್ಧ ತುಳೂರು ವನದ ಭಗವತಿ ಕ್ಷೇತ್ರದ ವಾರ್ಷಿಕ ಜಾತ್ರೆ ಏಳು ದಿನಗಳ ಕಾಲ ನಡೆದು ಗುರುವಾರ ಸಂಪನ್ನಗೊAಡಿತು. ಕಾಟೂರು ಮನೆತನದ ಆಡಳಿತಕ್ಕೆ ಒಳಪಟ್ಟ ದೇವಾಲಯದ ಆಚರಣೆ ಕೊಡಗು, ದಕ್ಷಿಣ ಕನ್ನಡ, ಕೇರಳ ರಾಜ್ಯಕ್ಕೆ ವ್ಯಾಪಿಸಿದ್ದು ಕಾಸರಗೋಡು, ಕಣ್ಣನೂರು, ಸುಳ್ಯ, ಭಾಗಮಂಡಲ ಸೇರಿದಂತೆ ವಿವಿಧ ಕಡೆಗಳಿಂದ ದಿನನಿತ್ಯ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು. ಒಟ್ಟು ನೂರ ಒಂದು ದೈವಗಳ ಕೋಲ ನಡೆಯಿತು. ಪ್ರಮುಖವಾಗಿ ಮುನ್ನಾಯರ್ ಹಾಗೂ ಭಗವತಿ, ಕ್ಷೇತ್ರಪಾಲ ದೈವಗಳ ಕೋಲ ನಡೆಯಿತು. ಕಳೆದ ಐದು ದಿನಗಳ ಕಾಲ ದೇವಾಲಯದ ವತಿಯಿಂದ ಭಕ್ತರಿಗೆ ಹಗಲು - ರಾತ್ರಿ ಅನ್ನದಾನ ವ್ಯವಸ್ಥೆ ಕಲ್ಲಿಸಲಾಗಿತ್ತು. ಸೇವಾ ಭಾರತಿ ತಂಡ ಸ್ವಯಂ ಸೇವಕರಾಗಿ ಅನ್ನದಾನ ವ್ಯವಸ್ಥೆಗೆ ಸಹಕರಿಸಿದರು. ಕೇರಳ ಹಾಗೂ ಕರ್ನಾಟಕ ಪೊಲೀಸರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.