ವೀರಾಜಪೇಟೆ, ಮಾ. ೯: ಕೊಡಗು ಹಿಂದೂ ಮಲಯಾಳಿ ಮಹಿಳಾ ಅಸೋಸಿಯೇಷನ್ ಹಾಗೂ ಅಮಲಾ ಸ್ಪೆಷಾಲಿಟಿ ಕ್ಲಿನಿಕ್ ವತಿಯಿಂದ ವೀರಾಜಪೇಟೆ ಪುರಭವನದಲ್ಲಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿಂದೂ ಮಲಯಾಳಿ ಮಹಿಳಾ ಅಸೋಸಿಯೇಷನ್ ಅಧ್ಯಕ್ಷೆ ಶೀಭಾ ಪ್ರಥ್ವಿನಾಥ್ ವಹಿಸಿ ಮಾತನಾಡಿ, ಮಹಿಳಾ ಅಸೋಸಿಯೇಷನ್ ಸದಸ್ಯರಿಗೆ ಸ್ವ ಉದ್ಯೋಗ ಸೃಷ್ಟಿ ಮಾಡಲು ಟೈಲರಿಂಗ್, ವಾಹನ ಚಾಲನೆ ತರಬೇತಿ ಹಾಗೂ ಕ್ಯಾಂಟಿನ್ ನಡೆಸುವವರಿಗೆ ಸಹಾಯ ಮಾಡಲಾಗಿದೆ. ಮುಂದಿನ ದಿನದಲ್ಲಿ ಇನ್ನು ಹೆಚ್ಚು ಮಹಿಳೆಯರಿಗೆ ಸ್ವ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃರ್ತ್ತರಾಗುವುದಾಗಿ ತಿಳಿಸಿದರು.

ತಪಸಣಾ ಶಿಬಿರದಲ್ಲಿ ಅಮಲ ಕ್ಲಿನಿಕ್ ವೈದ್ಯರಾದ ಅಮೇಲ್ ನಾಥ್, ಮಲಯಾಳಿ ಅಸೋಸಿಯೇಷನ್ ಗೌರವ ಅಧ್ಯಕ್ಷೆ ರೀತಾ ರಜಾನ್, ಕಾರ್ಯದರ್ಶಿ ಪುಷ್ಪ ಶಿವಪ್ಪ, ಖಜಾಂಚಿ ಶ್ರೀಕಲಾ, ನಿರ್ದೇಶಕರಾದ ಸ್ಮಿತಾ ಸಂತೋಷ್, ಶೀಜಾ ಬಾಬು, ಪ್ರೇಮ ರಾಧಾಕೃಷ್ಣ, ಶೈಲಜಾ ಪೆರುಂಬಾಡಿ, ಪದ್ಮಾವತಿ, ದೇವಿ ಸಂತೋಷ್, ಕ್ಲಿನಿಕ್ ಸಿಬ್ಬಂದಿಗಳು, ಅಸೋಸಿಯೇಷನ್ ಸದಸ್ಯರುಗಳು ಹಾಜರಿದ್ದರು. ತಪಾಸಣಾ ಶಿಬಿರದ ಪ್ರಯೋಜನವನ್ನು ೯೬ ಮಂದಿ ಪಡೆದುಕೊಂಡರು.