ವೀರಾಜಪೇಟೆ, ಮಾ. ೯: ಖಾಸಗಿ ಆ್ಯಂಬ್ಯುಲೆನ್ಸ್ನಲ್ಲಿ ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ಶನಿವಾರ ರಾತ್ರಿ ವೀರಾಜಪೇಟೆ ಹೊರವಲಯದ ಕಂಡAಗಾಲ ಗ್ರಾಮದ ಸಂತೋಷ್ ಎಂಬವರ ತೋಟದ ಲೈನ್‌ಮನೆಯಲ್ಲಿ ಕೆಲಸ ಮಾಡಿಕೊಂಡಿರುವ ಕಲಾಕ್ ಅವರ ಪತ್ನಿ ಶಾರ್ಜಾನ್ ಗರ್ಭಿಣಿಯಾಗಿದ್ದು, ರಾತ್ರಿ ಎಂಟು ಗಂಟೆಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ತಕ್ಷಣವೇ ವೀರಾಜಪೇಟೆ ಖಾಸಗಿ ಆ್ಯಂಬ್ಯುಲೆನ್ಸ್ಗೆ ತೋಟದ ಮಾಲೀಕರು ಕರೆಮಾಡಿ ಕರೆಸಿಕೊಂಡಿದ್ದಾರೆ.

ವೀರಾಜಪೇಟೆ ಆ್ಯಂಬ್ಯುಲೆನ್ಸ್ ಚಾಲಕ ಶೈಜು ಅವರು ತೆರಳಿ ಕಂಡAಗಾಲದಿAದ ವೀರಾಜಪೇಟೆ ಸರಕಾರಿ ಆಸ್ಪತ್ರೆಗೆ ಕರೆತರುವ ಮಾರ್ಗದಲ್ಲ್ಲಿ ಶಾರ್ಜಾನ್ ಆ್ಯಂಬ್ಯುಲೆನ್ಸ್ನಲ್ಲ್ಲಿಯೇ ಹೆರಿಗೆಯಾಗಿದೆ. ತಾಯಿ ಹಾಗೂ ಗಂಡು ಮಗುವಿನ ಸಮೇತ ವೀರಾಜಪೇಟೆ ಸರಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲು ನೆರವಾಗಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದೆ. ಸಮಯ ಪ್ರಜ್ಞೆಯಿಂದ ತನ್ನ ವಾಹನದಲ್ಲ್ಲಿ ಹೆರಿಗೆ ಮಾಡಿಸುವ ಮೂಲಕ ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಸರಕಾರಿ ಆಸ್ಪತ್ರೆಯಲ್ಲಿರುವ ವೈದ್ಯರು ಆ್ಯಂಬ್ಯುಲೆನ್ಸ್ ಚಾಲಕ ಶೈಜು ಕಾರ್ಯವನ್ನು ಶ್ಲಾಘಿಸಿದ್ದಾರೆ.