ವೀರಾಜಪೇಟೆ, ಮಾ. ೯: ಭಾರತ ದೇಶ ಹಬ್ಬಗಳ ನಾಡು ಅದರಲ್ಲಿಯೂ ಶಿವರಾತ್ರಿ ಹಬ್ಬ ಬಹಳ ಶ್ರೇಷ್ಠ ವಿಶಿಷ್ಠವಾದ ಹಬ್ಬವಾಗಿದೆ ಎಂದು ವೀರಾಜಪೇಟೆ ಬ್ರಹ್ಮಾಕುಮಾರಿ ಸೇವಾ ಕೇಂದ್ರದ ಸಂಚಾಲಕರಾದ ಕೋಮಲ ಅವರು ಅಭಿಪ್ರಾಯಪಟ್ಟರು
ಶಿವರಾತ್ರಿ ಹಬ್ಬದ ಪ್ರಯುಕ್ತ ವೀರಾಜಪೇಟೆ ಅಪ್ಪಯ್ಯಸ್ವಾಮಿ ರಸ್ತೆಯಲ್ಲಿರುವ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ೮೯ನೇ ತ್ರಿಮೂರ್ತಿ ಶಿವಜಯಂತಿ ಮಹೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿದ ಕೋಮಲ ಅವರು ಅಧ್ಯಾತ್ಮಿಕದ ಬಗ್ಗೆ ಮಾತನಾಡಿ, ಮನುಷ್ಯನಿಗೆ ಜೀವನದಲ್ಲಿ ಬದುಕಲು ಎಲ್ಲವೂ ಇದ್ದು ಶಾಂತಿ ನೆಮ್ಮದಿ ಇಲ್ಲವಾದಲ್ಲಿ ಪರಮಾತ್ಮನ ಧ್ಯಾನ ಅಗತ್ಯವಿದೆ.
ಮನಸ್ಸಿಗೆ ಬೇಕಾಗಿರುವ ಆನಂದ, ಸುಖ ಶಾಂತಿ ನೆಮ್ಮದಿಯನ್ನು ನೀಡುವವನು ಶ್ರೀಪರಮಾತ್ಮನಿಂದ ಮಾತ್ರ ಸಾಧ್ಯ ಎಂದ ಕೋಮಲ ಅವರು, ಜೀವನವನ್ನು ಶ್ರೇಷ್ಠಮಾಡಿಕೊಳ್ಳಲು ಸಾಧನೆಯೊಂದಿಗೆ ದೇವರ ದÀಯೆ ಕೂಡ ಅಗತ್ಯವಾಗಿದೆ ಎಂದರು.
ಬ್ರಹ್ಮಾಕುಮಾರಿ ವಿಶ್ವವಿದ್ಯಾಲಯ ವೀರಾಜಪೇಟೆ ಸೇವಾಕೇಂದ್ರದ ಡಾ. ರೋಷನ್, ಕರ್ನಲ್ ಕುಂಬಯ್ಯ, ಎನ್.ಎಂ. ಚಂಗಪ್ಪ, ರೂಪ ದೇವಯ್ಯ, ಎಂ.ಎA. ದೇವಮ್ಮ, ಬ್ರಹ್ಮಾಕುಮಾರಿಯರು ಹಾಗೂ ಪಟ್ಟಣ ಮತ್ತು ಇತರೆಡೆಗಳಿಂದಲೂ ಭಾಗವಹಿಸಿದ್ದರು.