ಮಡಿಕೇರಿ, ಮಾ. ೮: ಸ್ಕೌಟ್ ಮತ್ತು ಗೈಡ್ ಸಂಸ್ಥಾಪಕರಾದ ಲಾರ್ಡ್ ಸ್ಟಿಫನ್ ಸನ್‌ಸ್ಮಿತ್ ಬೆಗನ್ ಹಾಗೂ ಓಲೆವ್ ಬೆಡನ್ ಪೊವೆಲ್ ಅವರ ಜನ್ಮ ದಿನದ ಅಂಗವಾಗಿ ಶ್ರೀಮಂಗಲ ಜೆ.ಸಿ. ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಅಕ್ಕಿ ಗಿರಣಿಗೆ ಭೇಟಿ ನೀಡಿ ಅಧ್ಯಯನ ನಡೆಸಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ಕೆ.ಕೆ. ಸಿಂಧು, ಸಹಶಿಕ್ಷಕಿ ಬಿ.ಯು. ಯಶೋಧ ಹಾಗೂ ದೈಹಿಕ ಹಾಗೂ ಸ್ಕೌಟ್ ಗೈಡ್ ಶಿಕ್ಷಕಿ ಕೆ.ಆರ್. ಪ್ರಮೀಳ ಅವರ ಮುಂದಾಳತ್ವದಲ್ಲಿ ಶ್ರೀಮಂಗಲದ ಆಧುನಿಕ ಭಿನ್ನಿ ಅಕ್ಕಿ ಗಿರಣಿಗೆ ಭೇಟಿ ನೀಡಲಾಯಿತು.

ರೈತರು ಗದ್ದೆಯಲ್ಲಿ ಬೆಳೆದ ಭತ್ತವನ್ನು ಅಕ್ಕಿಯಾಗಿ ಪರಿವರ್ತಿಸುವ ಬಗ್ಗೆ ಅಲ್ಲಿಯ ಸಿಬ್ಬಂದಿ ದೇಯಂಡ ಸುಭಾಷ್ ಮತ್ತು ಇತರ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಮಾಹಿತಿ ನೀಡಿದರು.

ಅಕ್ಕಿ ಗಿರಣಿಯ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ಹಂಚಿ ಅವರನ್ನು ಬೀಳ್ಕೊಟ್ಟರು.