ಮಡಿಕೇರಿ, ಮಾ. ೮: ಅಬಕಾರಿ ನಿರೀಕ್ಷಕರು, ಮಡಿಕೇರಿ ವಲಯ ಇವರ ಕಚೇರಿ ಆವರಣದಲ್ಲಿರುವ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿರುವ ೫ ವಾಹನಗಳನ್ನು ತಾ. ೧೦ ರಂದು ಬೆಳಿಗ್ಗೆ ೧೧ ಗಂಟೆಗೆ ಟೆಂಡರ್ ಕಂ ಹರಾಜಿನಲ್ಲಿ ವಿಲೇವಾರಿ ಮಾಡಲಾಗುವುದು. ಅಬಕಾರಿ ನಿರೀಕ್ಷಕರು, ವೀರಾಜಪೇಟೆ ವಲಯ ಇವರ ಕಚೇರಿ ಆವರಣದಲ್ಲಿರುವ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿರುವ ೮ ವಾಹನಗಳನ್ನು ತಾ. ೧೭ ರಂದು ಬೆಳಿಗ್ಗೆ ೧೧ ಗಂಟೆಗೆ ಟೆಂಡರ್ ಕಂ ಹರಾಜಿನಲ್ಲಿ ವಿಲೇವಾರಿ ಮಾಡಲಾಗುವುದು. ವಾಹನಗಳು ಎಲ್ಲಿದೆಯೋ, ಹೇಗಿದೆಯೇ ಹಾಗೆ ಟೆಂಡರ್ ಕಂ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು. ಹೆಚ್ಚಿನ ಮಾಹಿತಿಗೆ ಅಬಕಾರಿ ನಿರೀಕ್ಷಕರು, ಮಡಿಕೇರಿ ವಲಯ ೯೪೪೯೫೯೭೧೩೯, ಅಬಕಾರಿ ನಿರೀಕ್ಷಕರು, ವೀರಾಜಪೇಟೆ ವಲಯ ೯೪೪೯೫೯೭೧೪೧ ನ್ನು ಸಂರ್ಪಕಿಸಬಹುದು ಎಂದು ಮಡಿಕೇರಿ ಅಬಕಾರಿ ಉಪ ಆಯಕ್ತರು ತಿಳಿಸಿದ್ದಾರೆ.