ಮಡಿಕೇರಿ, ಮಾ. ೮: ವೀರಾಜಪೇಟೆ ತಾಲೂಕಿನ ಪುಲಿಯೇರಿ ಶ್ರೀ ಮಂಗುಯಿಲ್ ಭಗವತಿ ಕ್ಷೇತ್ರದ ೩ನೇ ವಾರ್ಷಿಕ ಮಹೋತ್ಸವ ಕಾರ್ಯಕ್ರಮವು ವಿವಿಧ ಪೂಜಾ ಕೈಂಕರ್ಯಗಳೊAದಿಗೆ ವಿಜೃಂಭಣೆಯಿAದ ನಡೆಯಿತು.
ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ ಅಪಾರ ಸಂಖ್ಯೆಯ ಭಕ್ತರು ಪೂಜೋತ್ಸವದಲ್ಲಿ ಪಾಲ್ಗೊಂಡರು. ಉತ್ಸವದ ಕೊನೆಯ ದಿನದಂದು ಮಹಾ ಗಣಪತಿ ಹೋಮ, ದೇವಿಗೆ ಮಹಾ ಪೊಂಗಾಲ, ಮಹಾಕುರುದಿ, ಮಹಾಪೂಜೆ, ನಂತರ ಚಂಡೆವಾದ್ಯಗಳೊAದಿಗೆ ಅಲಂಕೃತ ಮಂಟಪದಲ್ಲಿ ದೇವಿಯ ವಿಗ್ರಹವನ್ನು ಇರಿಸಿ ಗುಹ್ಯ ಅಗಸ್ತೆö್ಯÃಶ್ವರ ದೇವಾಲಯದ ಸಮೀಪದ ಕಾವೇರಿ ನದಿಯಲ್ಲಿ ದೇವಿ ಆರಾಟ್ ನಡೆದು ಅಗಸ್ತೆö್ಯÃಶ್ವರ ದೇವಸ್ಥಾನದಲ್ಲಿ ಪೂಜಾ ಕಾರ್ಯಗಳು ನಡೆದ ನಂತರ ಮಂಗುಯಿಲ್ ಭಗವತಿ ಕ್ಷೇತ್ರದವರೆಗೆ ಶೋಭಾಯಾತ್ರೆ ನಡೆಯಿತು.
ಸ್ಥಳೀಯ ಭಕ್ತಾದಿಗಳು ದೀಪಗಳನ್ನು ಹಿಡಿದು ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡರು. ನಂತರ ಮಹಾ ಪೂಜೆ ಮತ್ತು ದೇವಿಗೆ ಮಹಾ ಮಂಗಳಾರತಿಯೊAದಿಗೆ ವಾರ್ಷಿಕೋತ್ಸವಕ್ಕೆ ತೆರೆಕಂಡಿತು. ಜಿಲ್ಲೆಯ ನಾನಾ ಭಾಗದಿಂದ ಆಗಮಿಸಿದ ಭಕ್ತರಿಗೆ ಅನ್ನಸಂತರ್ಪಣಾ ಕಾರ್ಯವು ನಡೆಯಿತು. ಕ್ಷೇತ್ರದ ತಂತ್ರಿಗಳಾದ ಎಳಮನ ಶ್ರೀಧರನ್ ನಂಬೂದಿರಿಪಾಡ್ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನಡೆಯಿತು. ವಾರ್ಷಿಕೋತ್ಸವದ ಅಂಗವಾಗಿ ಕ್ಷೇತ್ರ ತಳಿರು ತೋರಣ ದೀಪ ಹಾಗೂ ಹೂವಿನ ಅಲಂಕಾರಗಳಿAದ ಕಂಗೊಳಿಸುತ್ತಿತ್ತು
ಈ ಸಂದರ್ಭ ಮಂಗುಯಿಲ್ ಭಗವತಿ ಕ್ಷೇತ್ರದ ಅಧ್ಯಕ್ಷ ಎಂ.ಟಿ. ಶಶಿ, ಕಾರ್ಯದರ್ಶಿ ಶೀಲಾ, ಖಜಾಂಚಿ ಅಭಿಜಿತ್, ಪ್ರಮುಖರಾದ ಮನು, ಪ್ರದೀಪ್, ಶಿಜಿಲ್, ರತೀಶ್, ಸೀಮಾ, ಶೈಲಾ ಮಿನಿ, ದನೀಶ್, ನಿತೀಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.