ಸೋಮವಾರಪೇಟೆ, ಮಾ. ೮: ಸಮೀಪದ ಗೌಡಳ್ಳಿ ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯ ಸಮಿತಿ ಮತ್ತು ಕ್ರೀಡಾ ಸಮಿತಿ ವತಿಯಿಂದ ಜಾತ್ರೋತ್ಸವದ ಅಂಗವಾಗಿ ನಡೆದ ಮುಕ್ತ ಫುಟ್ಬಾಲ್ ಪಂದ್ಯಾಟದ ಮೊದಲ ಸ್ಥಾನವನ್ನು ಫ್ರೆಂಡ್ಸ್ ಎಫ್ಸಿ ಗೌಡಳ್ಳಿ ತಂಡ ಪಡೆಯುವ ಮೂಲಕ ನಗದು ೧ ಲಕ್ಷ ಹಾಗೂ ಆಕರ್ಷಕ ಟ್ರೋಫಿಗೆ ಭಾಜನವಾಯಿತು.
ಟೀಮ್ ಶುಂಠಿ ದ್ವಿತೀಯ ಸ್ಥಾನವನ್ನು ಗಳಿಸಿತು. ಮಹಿಳೆಯರ ಥ್ರೋಬಾಲ್ ಪಂದ್ಯಾಟದಲ್ಲಿ ಭಾಗ್ಯ ಫ್ರೆಂಡ್ಸ್ ಶಾಂತಳ್ಳಿ ತಂಡ ಪ್ರಥಮ, ಪಿವೈಸಿ ಕೂಗೂರು ತಂಡ ದ್ವಿತೀಯ ಸ್ಥಾನ ಗಳಿಸಿತು. ವಿಜೇತ ತಂಡಗಳು ನಗದು ಹಾಗೂ ಆಕರ್ಷಕ ಟ್ರೋಫಿ ಪಡೆದವು. ಫುಟ್ಬಾಲ್ ರೋಚಕ ಫೈನಲ್ ಪಂದ್ಯಾಟದಲ್ಲಿ ೧-೦ ಗೋಲಿನ ಮೂಲಕ ಎಫ್ಸಿ ಗೌಡಳ್ಳಿ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಮೊದಲ ಸೆಮಿಫೈನಲ್ನಲ್ಲಿ ಎಫ್ಸಿ ಗೌಡಳ್ಳಿ, ಪ್ಲಾಂರ್ಸ್ ಕ್ಲಬ್ ಬೀಟಿಕಟ್ಟೆ ತಂಡದ ವಿರುದ್ಧ ೪-೨ ಗೋಲುಗಳಿಂದ ಗೆಲವು ಸಾಧಿಸಿ ಫೈನಲ್ ಪ್ರವೇಶಿಸಿತ್ತು. ೨ ನೇ ಸೆಮಿಫೈನಲ್ನಲ್ಲಿ ಟೀಮ್ ಶುಂಠಿ ತಂಡ, ಹಾನಗಲ್ ಬಾಯ್ಸ್ ತಂಡದ ವಿರುದ್ಧ ೪-೩ ಗೋಲುಗಳ ಅಂತರದಲ್ಲಿ ಗೆಲುವಿನ ನಗೆ ಬೀರಿತ್ತು.
ಶಾಸಕ ಮಂತರ್ಗೌಡ ಸೆಮಿಫೈನಲ್ ಪಂದ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಕ್ರೀಡೆಗೂ ಕೊಡಗಿನ ಜನರಿಗೂ ಅವಿನಾಭಾವ ಸಂಬAಧವಿದೆ. ಪ್ರತಿಯೊಬ್ಬರ ಶರೀರದಲ್ಲಿ ಕ್ರೀಡಾರಕ್ತ ಹರಿಯುತ್ತಿದೆ. ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು. ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯದ ಜಾತ್ರೋತ್ಸವದಲ್ಲಿ ಕೀಡಾಕೂಟಗಳನ್ನು ಹಮ್ಮಿಕೊಂಡು ಗ್ರಾಮೀಣ ಜನರಿಗೆ ಮನೋರಂಜನೆ ನೀಡುತ್ತಿರುವುದು ಶ್ಲಾಘನೀಯ ಎಂದರು.
ಪAದ್ಯಾವಳಿಯ ತೀರ್ಪು ಗಾರರಾಗಿ ಗೌಡಳ್ಳಿ ಪ್ರವೀಣ್, ವಿನೋದ್, ಕರುಣನ್, ಅವಿನಾಶ್, ಸಂಜೀವ್, ಮಿಲ್ಡಿನ್ ಕಾರ್ಯ ನಿರ್ವಹಿಸಿದರು. ಸಕಲೇಶಪುರ ಶಾಸಕ ಸಿಮೆಂಟ್ ಮಂಜುನಾಥ್ ಸಮಾ ರೋಪ ಸಮಾರಂಭದಲ್ಲಿ ಭಾಗವಹಿಸಿ ಬಹುಮಾನ ವಿತರಿಸಿದರು.
ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಬಿ.ಪಿ. ಮೊಗಪ್ಪ, ಕ್ರೀಡಾಸಮಿತಿ ಅಧ್ಯಕ್ಷ ಎಸ್.ಬಿ. ಗುರುಪ್ರಸಾದ್, ಉಪಾಧ್ಯಕ್ಷ ಸುಮಂತ್ ಕೂಗೂರು, ಪ್ರಮುಖರಾದ ಎಸ್.ಬಿ. ಭರತ್ ಕುಮಾರ್, ಜಿ.ಎಂ. ಹೂವಯ್ಯ, ಜಿ.ಎ. ಮಹೇಶ್, ಎಚ್.ಎನ್. ಚಂದ್ರಶೇಖರ್, ಟಿ.ಎಸ್. ರಾಮಚಂದ್ರ ಮತ್ತಿತರರು ಇದ್ದರು. ಇದೇ ಸಂದರ್ಭ ಭೂ ಮತ್ತು ಗಣಿ ವಿಜ್ಞಾನಿ ರೋಜಾ ಧರ್ಮಪ್ಪ ಹಿರಿಕರ, ಪಿಡಿಒ ಲಿಖಿತಾ ಅವರುಗಳನ್ನು ಸನ್ಮಾನಿಸಲಾಯಿತು.