ಮಡಿಕೇರಿ, ಅ. ೩೦: ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘ (ಎಂ.ಸಿ.ಪಿ.ಸಿ.ಎಸ್)ನ ಆಡಳಿತ ಮಂಡಳಿಗೆ ಮಹಿಳಾ ನಿರ್ದೇಶಕರ ಸ್ಥಾನಕ್ಕೆ ಇಂದು ಚುನಾವಣೆ ನಡೆದಿದ್ದು, ಇಬ್ಬರು ನಿರ್ದೇಶಕರು ಆಯ್ಕೆಯಾಗಿದ್ದಾರೆ. ಆಡಳಿತ ಮಂಡಳಿಗೆ ಎಸ್.ಸಿ, ಎಸ್.ಟಿ ವಿಭಾಗಕ್ಕೆ ಯಾರು ನಾಮಪತ್ರ ಸಲ್ಲಿಸಿರದ ಕಾರಣ ಇದನ್ನು ಹೊರತುಪಡಿಸಿ ಉಳಿದ ನಿರ್ದೇಶಕ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿತ್ತು. ಮಾತುಕತೆಯ ಮೂಲಕ ಈ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದರೂ ಮಹಿಳಾ ಸ್ಥಾನಕ್ಕೆ ಚುನಾವಣೆ ಅನಿವಾರ್ಯವಾಗಿತ್ತು. ಎರಡು ಸ್ಥಾನಕ್ಕೆ ನಾಲ್ವರು ಸ್ಪರ್ಧೆಯಲ್ಲಿದ್ದರು. ಇದಕ್ಕೆ ಇಂದು ಚುನಾವಣೆ ನಡೆದಿದ್ದು, ಇವರಲ್ಲಿ ಸಿ.ಎಂ. ಕಾವೇರಿಯಮ್ಮ ಹಾಗೂ ಬಿ.ಎಸ್. ಲೀಲಾಕುಮಾರಿ ಚುನಾಯಿತರಾಗಿದ್ದಾರೆ. ಎಂ.ಸಿ. ಸೀತವ್ವ ಹಾಗೂ ಸಿ.ಕೆ. ಗೀತಾ ಪರಾಭವಗೊಂಡಿದ್ದಾರೆ.