ಮಡಿಕೇರಿ, ಫೆ. ೨೧: ಅಳಿವಿನಂಚಿನಲ್ಲಿರುವ ಅಪರೂಪದ ಮೌಸ್ಡೀರ್ ಸುಂಟಿಕೊಪ್ಪ ಸಮೀಪದ ಹೊರೂರು ಕಾಫಿ ತೋಟವೊಂದರಲ್ಲಿ ಪತ್ತೆಯಾಗಿದೆ.
ಜಿಂಕೆ ಮರಿ ರೂಪದ ಇಲಿ ಮುಖ ಹೊಂದಿರುವ ಈ ಜೀವಿಗೆ ಮೌಸ್ಡೀರ್ ಎಂದು ಇಂಗ್ಲಿಷ್ನಲ್ಲಿ ಕರೆಯುತ್ತಾರೆ. ಆಡು ಭಾಷೆಯಲ್ಲಿ ಬರುಕ ಕೂರ ಎಂದು ಕರೆಯಲಾಗುತ್ತದೆ.
ಹೊರೂರು ಕಾಫಿ ಬೆಳೆಗಾರ ಪಿ.ಸಿ. ಮೋಹನ್ರವರ ಗ್ರೀನ್ ಫೀಲ್ಡ್ ತೋಟದಲ್ಲಿ ಮಂಗಳವಾರ ಬೆಳಿಗ್ಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ಕಣ್ಣಿಗೆ ಬಿದ್ದ ಈ ಜೀವಿಯನ್ನು ಕುಶಾಲನಗರ ಡಿ.ಆರ್.ಎಫ್. ಅನಿಲ್ ಅವರಿಗೆ ಮಂಜುನಾಥ್ ಪೂಜಾರಿ ಹಾಗೂ ಬಾಳೆಕಾಡು ಆಟೋರಿಕ್ಷಾ ಚಾಲಕ ಪ್ರವೀಣ್ ಅವರು ಹಸ್ತಾಂತರಿಸಿದರು.
ಜಿಂಕೆ ತಳಿಯಲ್ಲಿಯೇ ಅತ್ಯಂತ ಚಿಕ್ಕ ಪ್ರಾಣಿ ವರ್ಗವಾಗಿರುವ ಮೌಸ್ಡೀರ್ ಸೌಮ್ಯ ಸ್ವಭಾವದಾಗಿದ್ದು ಹಗಲಿನಲ್ಲಿ ನಿದ್ರಿಸಿ ರಾತ್ರಿ ಎಚ್ಚರವಾಗಿರುತ್ತದೆ. ಅಪರೂಪಕ್ಕೆ ಕಾಣಸಿಗುವ ಈ ಜೀವಿಯ ಸಂತತಿ ಅಳಿವಿನಂಚಿನಲ್ಲಿದೆ ಎಂದು ಹೇಳಲಾಗಿದೆ.
- ರಾಜು ರೈ