ಮಡಿಕೇರಿ, ಫೆ. ೨೨: ಈಗಾಗಲೇ ೨೯ನೇ ಕೊಲ್ಕತ್ತಾ ಅಂತರ ರಾಷ್ಟಿçÃಯ ಚಲನಚಿತ್ರೋತ್ಸವದಲ್ಲಿ ಇಂಡಿಯನ್ ಕಾಂಪಿಟೀಷನ್ ವಿಭಾಗದಲ್ಲಿ ಅಧಿಕೃತವಾಗಿ ಆಯ್ಕೆಗೊಂಡು ಹೆಸರು ಮಾಡಿರುವ ಸ್ವಸ್ತಿಕ್ ಎಂರ‍್ಟೆöÊನ್ಮೆAಟ್‌ನ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರ ನಿರ್ದೇಶನದ ``ಕಂದೀಲು'' ಕನ್ನಡ ಸಿನಿಮಾ ೧೫ನೇ ಬೆಂಗಳೂರು ಅಂತರರಾಷ್ಟಿçÃಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.
ತಾ. ೨೯ ರಿಂದ ಮಾರ್ಚ್ ೭ರವರೆಗೆ ಬೆಂಗಳೂರಿನ ಒರಿಯಾನ್ ಮಾಲ್‌ನಲ್ಲಿ ನಡೆಯುವ ಚಲನಚಿತ್ರೋತ್ಸವದ ಕನ್ನಡ ಸ್ಪರ್ಧಾತ್ಮಕ ವಿಭಾಗದಲ್ಲಿ ಪ್ರದರ್ಶನಗೊಳ್ಳಲಿದೆ. ಮೊದಲನೆಯ ನಿರ್ದೇಶನದ "ರಂಗ ಪ್ರವೇಶ" ಕೊಡಗಿನ ಕನ್ನಡ ಸಿನಿಮಾದ ಮೊದಲನೆಯ ನಿರ್ದೇಶಕಿ ಎಂಬ ಹೆಗ್ಗಳಿಕೆ ಪಡೆದಿರುವ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರ ನಿರ್ದೇಶನ ಮತ್ತು ನಿರ್ಮಾಣದಲ್ಲಿ ಮೂಡಿ ಬಂದಿರುವ ೨ನೇ ಚಿತ್ರ ``ಕಂದೀಲು'' ಈಗಾಗಲೇ ಮಾನ್ಯತೆ ಪಡೆದಿರುವ ಎರಡು ಫೆಸ್ಟಿವಲ್‌ಗೆ ಆಯ್ಕೆಯಾಗಿರುವುದು ಕೊಡಗಿಗೆ ಹೆಮ್ಮೆ. ಅಲ್ಲದೇ ಈ ಬಾರಿಯ ಚಿತ್ರೋತ್ಸವದ ಕರ್ನಾಟಕದಿಂದ ಸುಮಾರು ೧೫ ಚಿತ್ರಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದು, ಯಶೋಧ ಪ್ರಕಾಶ್ ಕೊಟ್ಟುಕತ್ತಿರ ಅವರು ಒಬ್ಬರೇ ಮಹಿಳಾ ನಿರ್ದೇಶಕಿಯಾಗಿರುವುದು ವಿಶೇಷವಾಗಿದೆ.