ಪೊನ್ನAಪೇಟೆ, ಮೇ ೨೫: ಕರ್ನಾಟಕ ಅರಣ್ಯ ಇಲಾಖೆಯು ಹೊಸ ಲಾಂಛನವನ್ನು ಬಿಡುಗಡೆ ಮಾಡಿದೆ. ಅಸ್ತಿತ್ವಕ್ಕೆ ಬಂದು ಹಲವು ದಶಕಗಳ ನಂತರ ಅರಣ್ಯ ಇಲಾಖೆ ತನ್ನದೇ ಆದ ಪ್ರತ್ಯೇಕ ಲಾಂಛನವನ್ನು ವಿನ್ಯಾಸಗೊಳಿಸಿದ್ದು, ಕರ್ನಾಟಕದಲ್ಲಿ ಹೊಸ ಸರ್ಕಾರ ರಚನೆಯಾಗುವು ದರೊಂದಿಗೆ ಅರಣ್ಯ ಇಲಾಖೆ ಹೊಸ ಲಾಂಛನವನ್ನು ಜಾರಿಗೆ ತಂದಿದೆ. ಲಾಂಛನಕ್ಕೆ ರಾಜ್ಯ ಸರ್ಕಾರವು ಔಪಚಾರಿಕ ಅನುಮೋದನೆ ನೀಡಿದೆ.

ಹೊಸ ಲಾಂಛನವು ಕರ್ನಾಟಕದ ಶ್ರೀಮಂತ ಅರಣ್ಯ ಮತ್ತು ವನ್ಯಜೀವಿ ಸಂಪತ್ತನ್ನು ರಾಜ್ಯದ ನಕ್ಷೆಯಂತೆ ತೋರಿಸುತ್ತದೆ. ಈ ಲಾಂಛನದಲ್ಲಿ ರಾಜ್ಯದ ಶ್ರೀಮಂತ ಅರಣ್ಯ ಮತ್ತು ವನ್ಯಜೀವಿ ಸಂಪತ್ತನ್ನು ಬಿಂಬಿಸುವ ಕರ್ನಾಟಕದ ನಕ್ಷೆಯಕಾರವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಲಾಂಛನವು ರಾಜ್ಯ ಪಕ್ಷಿಯಾದ ನೀಲಕಂಠ, ರಾಜ್ಯ ಪ್ರಾಣಿಯಾದ ಆನೆ, ರಾಷ್ಟಿçÃಯ ವನ್ಯಪ್ರಾಣಿ ಹುಲಿ ಸೇರಿದಂತೆ ಚಿಟ್ಟೆ ಹಾಗೂ ಶ್ರೀಗಂಧದ ಮರದ ಚಿತ್ರವನ್ನು ಒಳಗೊಂಡಿದೆ. ಇವುಗಳಿಗೆಲ್ಲ ಮೂಲ ಆಧಾರವಾಗಿರುವ ಲಾಂಛನದ ನೀಲಿ ಬಣ್ಣದಲ್ಲಿರುವ ಅಂಶವು ನದಿಗಳು ಮತ್ತು ಸಮುದ್ರವನ್ನು ಬಿಂಬಿಸುತ್ತದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.