ಮಡಿಕೇರಿ, ಮೇ ೨೫ : ಎನ್‌ಫೋರ್ಸ್ಮೆಂಟ್ ಡೈರೆಕ್ಟರೇಟ್ (ಜಾರಿ ನಿರ್ದೇಶನಾಲಯ)ನ ಡೆಪ್ಯುಟಿ ಡೈರೆಕ್ಟರ್ ಸ್ಥಾನದಂತಹ ಮಹತ್ವದ ಹುದ್ದೆಗೆ ಕೊಡಗಿನವರಾದ ಯುವ ಅಧಿಕಾರಿ ಡಾ|| ಕೊಟ್ಟಂಗಡ ಡಿ. ಪೆಮ್ಮಯ್ಯ ಅವರು ಆಯ್ಕೆಯಾಗಿದ್ದಾರೆ.

ಇದು ದೇಶದ ಆರ್ಥಿಕ ಅಪರಾಧದ ತನಿಖೆಯ ಮಹತ್ವದ ಜವಾಬ್ದಾರಿಯಾಗಿದೆ. ಜಾರಿ ನಿರ್ದೇಶನಾಲಯದ ಈ ಸ್ಥಾನಕ್ಕೆ ಅಧಿಕಾರಿಗಳ ನೇಮಕಾತಿಗೆ ಸಂಬAಧಿಸಿದAತೆ ನಡೆದಿರುವ ಪ್ರಕ್ರಿಯೆಯಲ್ಲಿ ಡಾ|| ಪೆಮ್ಮಯ್ಯ ಅವರು ಆಯ್ಕೆಯಾಗುವ ಮೂಲಕ ಸಾಧನೆ ತೋರಿದ್ದಾರೆ. ಪ್ರಸ್ತುತ ಗುಜರಾತ್‌ನಲ್ಲಿ ಐಆರ್‌ಎಸ್ ಅಧಿಕಾರಿಯಾಗಿದ್ದು, ಇನ್‌ಕಮ್ ಟ್ಯಾಕ್ಸ್ನ ಡೆಪ್ಯುಟಿ ಡೈರೆಕ್ಟರ್ ಆಗಿ ಪೆಮ್ಮಯ್ಯ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು.

ಜಾರಿ ನಿರ್ದೇಶನಾಲಯ (ಇಆ) ದಲ್ಲಿನ ಕರ್ತವ್ಯಕ್ಕಾಗಿ ಐಪಿಎಸ್, ಐಆರ್‌ಎಸ್, ಕಸ್ಟಮ್ಸ್ನಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಗಳನ್ನು ನೇಮಕಮಾಡಿಕೊಳ್ಳಲಾಗುತ್ತದೆ. ಇದೀಗ ರಾಷ್ಟçದಲ್ಲಿ ೧೭ ಅಧಿಕಾರಿಗಳನ್ನು ಜಾರಿ ನಿರ್ದೇಶನಾಲಯಕ್ಕೆ ಅವರುಗಳ ಸಾಧನೆ - ಅನುಭವದ ಆಧಾರದ ಮೂಲಕ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗಿದೆ. ಕಳೆದ ಒಂದು ತಿಂಗಳ ಹಿಂದೆ ನವದೆಹಲಿಯ ಮುಖ್ಯ ಕಚೇರಿಯ ಮೂಲಕ ನಡೆದಿರುವ ಪ್ರಕ್ರಿಯೆಯ ಫಲಿತಾಂಶವನ್ನು ಇಂದು ಪ್ರಕಟಿಸಲಾಗಿದ್ದು, ಡಾ|| ಪೆಮ್ಮಯ್ಯ ಅವರು ಇದೀಗ ಈ ಸ್ಥಾನಕ್ಕೆ ಆಯ್ಕೆಗೊಂಡಿದ್ದಾರೆ.

ಆಯ್ಕೆಯಾಗಿರುವ ೧೭ ಅಧಿಕಾರಿಗಳ ಪೈಕಿ ಇವರೊಬ್ಬರೇ ಕರ್ನಾಟಕ ಮೂಲದವರಾಗಿದ್ದು, ಕೊಡವ ಜನಾಂಗದ ಪ್ರಥಮ ವ್ಯಕ್ತಿಯಾಗಿದ್ದಾರೆ. ಐಪಿಎಸ್ ಅಧಿಕಾರಿಗಳು ಸೇರಿದಂತೆ ಐಆರ್‌ಎಸ್ ಹಾಗೂ ಕಸ್ಟಮ್ಸ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದವರು ೧೭ ಮಂದಿಯಲ್ಲಿ ಸೇರಿದ್ದಾರೆ. ಇವರಲ್ಲಿ ಕೊಡಗಿನವರಾದ

(ಮೊದಲ ಪುಟದಿಂದ) ಈ ಯುವ ಅಧಿಕಾರಿ ಪೆಮ್ಮಯ್ಯ ಅವರು ಒಬ್ಬರಾಗಿರುವುದು ವಿಶೇಷವಾಗಿದೆ.

ಪೆಮ್ಮಯ್ಯ ಹಿನ್ನೆಲೆ

ಆರಂಭದಲ್ಲಿ ಇವರು ಎಂಬಿಬಿಎಸ್ ಮಾಡಿ ಗೋಣಿಕೊಪ್ಪಲು ಆಸ್ಪತ್ರೆಯಲ್ಲಿ ವೈದ್ಯರಾಗಿದ್ದರು. ೨೦೧೫ರ ಬ್ಯಾಚ್‌ನ ಯುಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಡಾ|| ಕೊಟ್ಟಂಗಡ ಡಿ. ಪೆಮ್ಮಯ್ಯ ಅವರು ೨೪೭ನೇ ರ‍್ಯಾಂಕ್‌ಗಳಿಸಿ ಐಆರ್‌ಎಸ್ ಆಯ್ಕೆ ಮಾಡಿಕೊಂಡಿದ್ದರು.

೨೦೧೬ರಲ್ಲಿ ತರಬೇತಿ ಪೂರ್ಣಗೊಳಿಸಿ, ಇನ್‌ಕಮ್ ಟ್ಯಾಕ್ಸ್ ಅಧಿಕಾರಿಯಾಗಿ ನಿಯೋಜಿತರಾಗಿದ್ದ ಇವರು ಬಳಿಕ ಇನ್‌ಕಮ್ ಟ್ಯಾಕ್ಸ್ ಅಧಿಕಾರಿ ಹುದ್ದೆಯೊಂದಿಗೆ ಇನ್ವೆಸ್ಟಿಗೇಷನ್ ಆಫ್ ಫಾರಿನ್ ಅಸೆಟ್ ಜವಾಬ್ದಾರಿಗೂ ಆಯ್ಕೆಗೊಂಡು ಗುಜರಾತ್‌ನಲ್ಲಿ ಇನ್‌ಕಮ್ ಟ್ಯಾಕ್ಸ್ ಡೆಪ್ಯುಟಿ ಡೈರೆಕ್ಟರ್ ಆಗಿ ಕರ್ತವ್ಯ ನಿಭಾಯಿಸುತ್ತಿದ್ದು, ಇದೀಗ ಹೊಸ ಜವಾಬ್ದಾರಿಗೆ ನಿಯೋಜಿತರಾಗಲಿದ್ದಾರೆ.

ಈ ಬಗ್ಗೆ ‘ಶಕ್ತಿ’’ಯೊಂದಿಗೆ ಪ್ರತಿಕ್ರಿಯಿಸಿದ ಡಾ|| ಪೆಮ್ಮಯ್ಯ ಅವರು ಹೊಸ ಜವಾಬ್ದಾರಿಗೆ ಆಯ್ಕೆಯಾಗುತ್ತಿರುವುದು ಸಂತಸ ತಂದಿದೆ. ದೇಶದ ಆರ್ಥಿಕ ಅಪರಾಧದ ತನಿಖೆಯಂತಹ ಈ ಮಹತ್ವದ ಕೆಲಸ ಭಾರೀ ಸೂಕ್ಷö್ಮ ರೀತಿಯದ್ದಾಗಿದ್ದು, ಗುರುತರ ಜವಾಬ್ದಾರಿ ಇರುತ್ತದೆ. ತಮ್ಮ ಈ ತನಕದ ಕರ್ತವ್ಯ ನಿರ್ವಹಣೆ - ಸಾಧನೆಗೆ ಇದು ಸಂದ ಗೌರವವಾಗಿದೆ ಎಂದು ಹೇಳಿದರು. ಇವರು ಗೋಣಿಕೊಪ್ಪಲುವಿನವರಾದ ಕೊಟ್ಟಂಗಡ ದಿ|| ದೇವಯ್ಯ ಹಾಗೂ ಕಾವೇರಿ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ವಿಜು ದೇವಯ್ಯ ಅವರ ಪುತ್ರರಾಗಿದ್ದಾರೆ. - ಶಶಿ ಸೋಮಯ್ಯ