ಮಡಿಕೇರಿ, ಮಾ. ೧೮ : ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರ ಬಹುಕಾಲದ ಬೇಡಿಕೆಯಲ್ಲಿ ಒಂದಾಗಿರುವ ೧೦ ಹೆಚ್.ಪಿ. ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ಒದಗಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶಿಸಿದ್ದು, ಹಿಂದಿನ ಬಾಕಿಯನ್ನು ಪರಿಗಣಿಸದೆ ಎಲ್ಲಾ ರೈತರಿಗೆ ಉಚಿತ ವಿದ್ಯುತ್ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

೧೦ ಹೆಚ್.ಪಿ. ಉಚಿತ ವಿದ್ಯುತ್ ನೀಡಲು ಆದೇಶ ವಾಗಿದೆ. ಆದರೆ, ಕೆಲ ಗೊಂದಲದಿAದ ಅನುಷ್ಠಾನದಲ್ಲಿ ಸಮಸ್ಯೆಯಾಗಿತ್ತು. ಹಿಂದಿನ ಬಾಕಿಯನ್ನು ಪರಿಗಣಿಸದೆ ಉಚಿತ ವಿದ್ಯುತ್ ನೀಡಬೇಕೆಂದು ಘೋಷಿಸಿದರು.

ನಗರದ ಗಾಂಧಿ ಮೈದಾನದಲ್ಲಿ ನಡೆದ ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಯ ಫಲಾನುಭವಿಗಳ ಸಮ್ಮೇಳನ ಹಾಗೂ ರೂ. ೫೩೯.೮೬ ಕೋಟಿ ವೆಚ್ಚದ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಹಾಗೂ ಫಲಾನುಭವಿಗಳಿಗೆ ಸವಲತ್ತು ವಿತರಿಸಿ ಬಳಿಕ ಮಾತನಾಡಿದ ಅವರು, ಕೊಡಗಿನ ಸಂಸ್ಕೃತಿ ಇಡೀ ಜಗತ್ತಿಗೆ ಮಾದರಿಯಾಗಿದೆ. ಇಲ್ಲಿನ ನೈಸರ್ಗಿಕ ಸಂಪತ್ತು ಇಡೀ ಪ್ರಪಂಚದ ಗಮನ ಸೆಳೆದಿದೆ. ಕರ್ನಾಟಕದ ಸ್ವಿಜರ್‌ಲ್ಯಾಂಡ್ ಆಗಿರುವ ಕೊಡಗಿನ ಸರ್ವತೋಮುಖ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ ಎಂದರು.

ಕರ್ನಾಟಕದ ಪ್ರಗತಿಯಲ್ಲಿ ಶ್ರೀಸಾಮಾನ್ಯನೂ ಭಾಗಿಯಾಗಿದ್ದಾರೆ. ಜಾತಿ, ಮತ ಬೇಧವಿಲ್ಲದೆ ಎಲ್ಲರ ಬದುಕನ್ನು ಉತ್ತಮಗೊಳಿಸುವ ಕಾರ್ಯಕ್ರಮ ಸರಕಾರ ಮಾಡಿದೆ. ಜನರು ಬಲವವರ್ಧನೆಗೊಂಡರೆ ಕರ್ನಾಟಕ ಸಮೃದ್ಧಿಗೊಳ್ಳುತ್ತದೆ. ಈ ನಿಟ್ಟಿನಲ್ಲಿ ವಿವಿಧ ಇಲಾಖೆ ಮೂಲಕ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ. ಪ್ರತಿ ತಾಲೂಕಿನಲ್ಲಿ ೩೦ ರಿಂದ ೫೦ ಸಾವಿರ ಮಂದಿ ಫಲಾನುಭವಿಗಳಿದ್ದಾರೆ. ಯೋಜನೆ ತಲುಪಿಸುವ ಮೂಲಕ ಜನರ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದ್ದೇವೆ. ಸಾಮಾನ್ಯ ರಾಜಕಾರಣಿ ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಳ್ಳುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅಂತಹ ದೂರದೃಷ್ಟಿ ಹೊಂದಿರುವ ನಾಯಕರು ದೇಶದ ಭದ್ರತೆ, ಕಾನೂನು ಸುವ್ಯವಸ್ಥೆ, ಅಭಿವೃದ್ಧಿ ಕಾರ್ಯ, ಸಾಮಾಜಿಕ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಪ್ರತಿ ಮನೆಗೂ ನಲ್ಲಿ ನೀರು

೩ ವರ್ಷದ ಹಿಂದೆ ಪ್ರಧಾನಿ ನರೇಂದ್ರ ಮೋದಿ ದೇಶದ ಪ್ರತಿ ಮನೆ ಮನೆಗೆ ಕುಡಿಯುವ ನೀರು ಒದಗಿಸುವ ಭರವಸೆ ನೀಡಿದ್ದರು. ೧೩೦ ಕೋಟಿ ಜನಸಂಖ್ಯೆಯ ದೇಶದಲ್ಲಿ ಇದು ಸಾಹಸದ ಕೆಲಸವಾಗಿತ್ತು. ೭೦ ವರ್ಷ ಆಗದಿರುವ ಕೆಲಸವನ್ನು ಮಾಡುವಲ್ಲಿ ಮೋದಿ ಸಾಧ್ಯ ಮಾಡಿದ್ದಾರೆ. ೩ ವರ್ಷದಲ್ಲಿ ೧೨ ಕೋಟಿ ಮನೆಗೆ ನೀರು ಸಂಪರ್ಕ ಒದಗಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ೭೨ ವರ್ಷದಲ್ಲಿ ೨೫ ಲಕ್ಷ ಮನೆಗೆ ನೀರು ಸಂಪರ್ಕವಿತ್ತು. ಕಳೆದ ೩ ವರ್ಷದಲ್ಲಿ ೪೦ ಲಕ್ಷ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಒದಗಿಸಿದ್ದೇವೆ. ದೇಶದ ಪ್ರತಿ ಮನೆಗೂ ನಲ್ಲಿ ನೀರು ಒದಗಿಸುವುದು ನಮ್ಮ ಗುರಿ ಎಂದರು.

ರೈತರ ಶ್ರೇಯೋಭಿವೃದ್ಧಿಗೆ ಯೋಜನೆ

ಕೇಂದ್ರ ಸರಕಾರದ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಕರ್ನಾಟಕ ರಾಜ್ಯದಲ್ಲಿ ೧೬ ಸಾವಿರ ಕೋಟಿ ಹಣವನ್ನು ೫೩ ಲಕ್ಷದ ೪೩ ಸಾವಿರ ರೈತರಿಗೆ ತಲಾ ರೂ. ೧೦ ಸಾವಿರದಂತೆ ನೀಡಿದ್ದೇವೆ. ಮಧ್ಯವರ್ತಿಗಳ ನುಸುಳುವಿಕೆ ತಡೆದು ಪಾರದರ್ಶಕ ಆಡಳಿತ ನಡೆಸುವ ಮೂಲಕ ಪೂರ್ಣ ಯೋಜನೆ ತಲುಪಿಸುವ ಕೆಲಸವಾಗಿದೆ. ಕೊಡಗು ಜಿಲ್ಲೆಯಲ್ಲಿ ೫೦,೬೨೩ ರೈತರಿಗೆ ಈ ಯೋಜನೆ ತಲುಪಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ರೈತ ವಿದ್ಯಾನಿಧಿ ಮೂಲಕ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿದ್ದೇವೆ. ಕೊಡಗಿನಲ್ಲಿ ಅತೀ ಸಣ್ಣ ರೈತರು ಹೆಚ್ಚಿದ್ದಾರೆ. ಅವರ ಆದಾಯ ಪ್ರಮಾಣವೂ ಕಡಿಮೆ ಇದೆ. ರೈತರ ಆದಾಯ ಹೆಚ್ಚಾದರೆ ಇಡೀ ನಾಡಿಗೆ ಶಕ್ತಿ ತುಂಬುತ್ತದೆ. ರೈತರಿಗೆ ಶಕ್ತಿ ತುಂಬುವ ಕೆಲಸ ನಮ್ಮ ಸರಕಾರ ಮಾಡಿದೆ. ದೇಶದಲ್ಲಿ ಹಸಿರು ಕ್ರಾಂತಿ ಆಗಿದೆ. ಇಂದು ಆಹಾರ ಸುರಕ್ಷತೆ ದೇಶದಲ್ಲಿದೆ. ರೈತನ ಶ್ರಮದಿಂದ ಇದು ಸಾಧ್ಯವಾಗಿದೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.

ರೈತ ಶಕ್ತಿ ಯೋಜನೆ ಮೂಲಕ ರೈತರಿಗೆ ಡಿಸೇಲ್ ಸಬ್ಸಿಡಿ ನೀಡಿದ್ದೇವೆ. ಬೀಜ, ಗೊಬ್ಬರ ಖರೀದಿಗೆ ರೂ. ೧೦ ಸಾವಿರ ನೀಡುವ ಯೋಜನೆ ರೂಪಿಸಿದ್ದೇವೆ. ಶೂನ್ಯ ಬಡ್ಡಿದರ ಸಾಲವನ್ನು ರೂ. ೩ ಲಕ್ಷದಿಂದ ೫ ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇದರಿಂದ ವಿಶೇಷವಾಗಿ ಕಾಫಿ ಬೆಳೆಗಾರರಿಗೆ ಅನುಕೂಲವಾಗುತ್ತದೆ. ರೂ. ೧೮೦ ಕೋಟಿ ಮೀಸಲಿಟ್ಟು ರೈತರಿಗೆ ಜೀವನಜ್ಯೋತಿ ಯೋಜನೆ ಮೂಲಕ ವಿಮೆ ಸೌಲಭ್ಯ ಕಲ್ಪಿಸಲಾಗಿದೆ. ಯಶಸ್ವಿನಿ ಯೋಜನೆ ಮರುಜಾರಿ ಮಾಡಲಾಗಿದೆ. ಬಿಜೆಪಿ ಸರಕಾರ ರೈತರ ಬವಣೆ ಅರಿತಿದೆ ಎಂದರು.

ಪ್ರವಾಸೋದ್ಯಮ ಬೆಳವಣಿಗೆಗೆ ಒತ್ತು

ಕೊಡಗು ವಿಶೇಷ ಸ್ಥಾನ ಹೊಂದಿದ್ದು, ಕರ್ನಾಟಕದ ಹೆಮ್ಮೆಯಾಗಿದೆ. (ಮೊದಲ ಪುಟದಿಂದ) ದೇಶ ವಿದೇಶದಿಂದ ಕೊಡಗನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಬರುತ್ತಿದ್ದಾರೆ. ‘ಮೈಸೂರು ಸರ್ಕ್ಯೂಟ್’ನಲ್ಲಿ ಕೊಡಗು ಮಹತ್ವದ ಸ್ಥಾನ ಪಡೆದಿದೆ. ಈ ಮೂಲಕ ದೇಶ ವಿದೇಶದಿಂದ ಬರುವ ಪ್ರವಾಸಿಗರು ಟಿಕೆಟ್ ಪಡೆದರೆ ಕೊಡಗನ್ನು ನೋಡಬಹುದಾಗಿದೆ. ಇದರಿಂದ ಜಾಗತಿಕ ಮಟ್ಟದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಸಾಧಿಸುತ್ತದೆ ಎಂದು ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ನಿವೃತ್ತ ಯೋಧರಿಗೆ ನೆರವು

ಭಾರತೀಯ ಸೇನೆಗೆ ಜನರಲ್ ಹಾಗೂ ಫೀಲ್ಡ್ ಮಾರ್ಷಲ್‌ರನ್ನು ಕೊಡಗು ನೀಡಿದೆ. ವಿಶೇಷ ಗುಣಧರ್ಮ ಕೊಡಗಿನ ಮಣ್ಣಿಗಿದೆ. ಕೊಡಗಿನ ನಿವೃತ್ತ ಯೋಧರಿಗೆ ಎಲ್ಲಾ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಆರೋಗ್ಯ, ಅವರ ಮಕ್ಕಳಿಗೆ ಶಿಕ್ಷಣ, ವಸತಿ ನೀಡುವ ನಿಟ್ಟಿನಲ್ಲಿ ವಿಶೇಷ ಅನುದಾನ ನೀಡಲಾಗುತ್ತದೆ ಎಂದರು.

ಸ್ತಿçÃಸಾಮಾರ್ಥ್ಯ ಯೋಜನೆ

ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಪ್ರೋತ್ಸಾಹ ನೀಡುವ ಸಲುವಾಗಿ ‘ಸ್ತಿçÃಸಾಮಾರ್ಥ್ಯ’ ಯೋಜನೆ ಜಾರಿಗೆ ತಂದಿದ್ದೇವೆ. ಈಗಾಗಲೇ ೧೦ ಸಾವಿರ ಸ್ತಿçÃಶಕ್ತಿ ಸಂಘಗಳಿಗೆ ಅನುದಾನ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತೆ ೧೦ ಸಾವಿರ ಸಂಘಗಳಿಗೆ ಹಣ ನೀಡಲಾಗುತ್ತದೆ ಎಂದು ಭರವಸೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಈ ಯೋಜನೆಯ ಮೂಲಕ ನೆರವು ನೀಡಿ ಸ್ವಉದ್ಯೋಗ ಸೃಷ್ಟಿಸಿ ಆರ್ಥಿಕವಾಗಿ ಸಬಲರನ್ನಾಗಿ ಮಾಡಲಾಗುವುದು. ಯುವಶಕ್ತಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗುವುದು. ಎಲ್ಲರಿಗೆ ದುಡಿಮೆ ನೀಡುವ ಗುರಿ ನಮ್ಮ ಸರಕಾರ ಹೊಂದಿದೆ. ಕಾಯಕ ಸಮಾಜಗಳನ್ನು ಮೇಲೆತ್ತುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ವಿದ್ಯಾರ್ಥಿನಿಯರಿಗೆ, ಮಹಿಳೆಯರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಸಾಲಿನಿಂದ ಉಚಿತ ಶಿಕ್ಷಣ ನೀಡುವ ಕಾರ್ಯಯೋಜನೆ ರೂಪಿಸಿದ್ದೇವೆ. ಇದರಿಂದ ೮ ಲಕ್ಷ ವಿದ್ಯಾರ್ಥಿಗಳಿಗೆ ಸಹಕಾರಿಯಾಗುತ್ತದೆ. ಸಾಮಾಜಿಕ ನ್ಯಾಯ ತರುವ ಸಲುವಾಗಿ ಮೀಸಲಾತಿ ಹೆಚ್ಚಳ ಮಾಡಿ ಶೋಷಿತ ಸಮಾಜವನ್ನು ಮುಖ್ಯವಾಹಿನಿಗೆ ತಂದಿದ್ದೇವೆ.

ಗ್ಯಾರೆಂಟಿ ಕಾರ್ಡ್ ನೀಡುವ ಮೂಲಕ ಮೋಸ ಮಾಡಲು ಕಾಂಗ್ರೆಸ್ ಮುಂದಾಗಿದೆ. ೫ ವರ್ಷ ಅವಕಾಶವಿದ್ದಾಗ ಏನೂ ಮಾಡದ ಕಾಂಗ್ರೆಸ್ ಇಂದು ಸುಳ್ಳು ಹೇಳಿ ಯಾಮಾರಿಸುವ ಕೆಲಸ ಮಾಡುತ್ತಿದೆ. ಬೋಗಸ್ ಕಾರ್ಡ್ ಹಂಚುವ ಮೂಲಕ ಜನರ ದಿಕ್ಕುತಪ್ಪಿಸುವ ಕೆಲಸವಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೋಸ ಮಾಡುವ ಕೆಲಸವಾಗಬಾರದು ಎಂದು ಮುಖ್ಯಮಂತ್ರಿ ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ತು ಸದಸ್ಯರುಗಳಾದ ಎಂ.ಪಿ. ಸುಜಾ ಕುಶಾಲಪ್ಪ, ಪ್ರತಾಪ್ ನಾಯಕ್, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆಕಾಶ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಂಜುAಡೇಗೌಡ ಸೇರಿದಂತೆ ಇನ್ನಿತರರು ಹಾಜರಿದ್ದರು.