ಸಿದ್ದಾಪುರ, ಜ. ೩೦: ಮಿಲನ್ಸ್ ಫುಟ್ಬಾಲ್ ಕಪ್ ಪಂದ್ಯಾವಳಿಯಲ್ಲಿ ಮಂಗಳೂರಿನ ಯೆನಪೊಯ ಎಫ್.ಸಿ. ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಅಮ್ಮತ್ತಿ ಮಿಲನ್ಸ್ ಫುಟ್ಬಾಲ್ ಅಸೋಸಿಯೇಷನ್ ವತಿಯಿಂದ ಕಳೆದ ಹತ್ತು ದಿನಗಳಿಂದ ಅಮ್ಮತ್ತಿ ಪ್ರೌಢಶಾಲಾ ಮೈದಾನದಲ್ಲಿ ನಡೆದ ರಾಷ್ಟç ಮಟ್ಟದ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾಟದ ರೋಚಕ ಫೈನಲ್ ಪಂದ್ಯಾಟದಲ್ಲಿ ಪಾಲಿಬೆಟ್ಟ ನೆಹರು ಎಫ್.ಸಿ. ತಂಡವನ್ನು ಮಣಿಸಿ, ಯೆನಪೊಯ ಟ್ರೋಫಿಯನ್ನು ತನ್ನದಾಗಿಸಿದೆ.

ಯೆನಪೊಯ ಎಫ್.ಸಿ ಪರವಾಗಿ ಮೊದಲಾರ್ಧದಲ್ಲಿ ಎಡ್ವಿನ್ ಪ್ರಥಮ ಗೋಲ್ ಬಾರಿಸಿದರು. ಕೆಲ ನಿಮಿಷಗಳ ಅಂತರದಲ್ಲಿ ಯೆನಪೊಯ ತಂಡಕ್ಕಾಗಿ ಎಡ್ವಿನ್ ಎರಡನೇ ಗೋಲ್ ಬಾರಿಸಿ ತಂಡದ ಮೊತ್ತ ಹೆಚ್ಚಿಸಿದರು. ನೆಹರು ಎಫ್.ಸಿ. ಪಾಲಿಬೆಟ್ಟ ತಂಡಕ್ಕೆ ಮೊದಲಾರ್ಧದಲ್ಲಿ ಹಲವು ಅವಕಾಶಗಳು ದೊರೆತರೂ ಸದುಪಯೋಗ ಪಡೆಯುವಲ್ಲಿ ವಿಫಲರಾದರು.

ದ್ವಿತೀಯಾರ್ಧದ ಪಂದ್ಯಾಟ ಆರಂಭವಾದ ಕೆಲವೇ ನಿಮಿಷಗಳಲ್ಲಿ ನೆಹರು ಎಫ್.ಸಿ ತಂಡದ ಪರವಾಗಿ ಜುನೈದ್ ಪ್ರಥಮ ಗೋಲ್ ಬಾರಿಸಿದರು. ಪ್ರಥಮ ಗೋಲ್ ಬೆನ್ನಲ್ಲೇ ಪಾಲಿಬೆಟ್ಟ ಪರ ಕಿರಣ್ ಎರಡನೇ ಗೋಲ್ ಬಾರಿಸಿದರು. ನಿಗದಿತ ಸಮಯದಲ್ಲಿ ಎರಡೂ ತಂಡ ೨-೨ ಗೋಲ್ ಬಾರಿಸಿದ್ದು, ಬಳಿಕ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಅಂತಿಮವಾಗಿ ಯೆನಪೊಯ ೫, ನೆಹರು ಎಫ್.ಸಿ. ೪ ಗೋಲ್ ದಾಖಲಿಸಿತು.

ಪಂದ್ಯಾವಳಿಯ ಬೆಸ್ಟ್ ಗೋಲ್ ಕೀಪರ್ ಯೆನಪೊಯ ತಂಡದ ನಿಯಾಸ್, ಹೆಚ್ಚು ಗೋಲ್ ದಾಖಲಿಸಿದ ಆಟಗಾರ ಆಕ್ಸ್÷್ಫರ್ಡ್ ತಂಡದ ಕಣ್ಣನ್, ಉತ್ತಮ ಆಟಗಾರ ಬಹುಮಾನವನ್ನು ನೆಹರು ಎಫ್.ಸಿ ತಂಡದ ಅಣ್ಣಪ್ಪ ಪಡೆದರು.

‘ಹೈಟೆಕ್ ಕ್ರೀಡಾಂಗಣ ನಿರ್ಮಾಣ’

ಜಿಲ್ಲೆಯಲ್ಲಿ ಫುಟ್ಬಾಲ್ ಕ್ರೀಡಾಂಗಣಕ್ಕೆ ಜಾಗ ಒದಗಿಸಿದ್ದಲ್ಲಿ, ರಾಜ್ಯ ಫುಟ್ಬಾಲ್ ಅಸೋಸಿಯೇಷನ್ ಮೂಲಕ ಹೈಟೆಕ್ ಕ್ರೀಡಾಂಗಣ ನಿರ್ಮಿಸಲಾಗುವುದು ಎಂದು ಅಖಿಲ ಭಾರತ ಫುಟ್ಬಾಲ್ ಅಸೋಸಿಯೇಷನ್ ಉಪಾಧ್ಯಕ್ಷ ಎನ್.ಎ ಹ್ಯಾರಿಸ್ ಹೇಳಿದರು.

ಫೈನಲ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರತಿಭಾನ್ವಿತ ಯುವ ಆಟಗಾರರಿದ್ದು, ಕ್ರೀಡಾಂಗಣದ ಕೊರತೆ ಇದೆ. ಜಿಲ್ಲೆಯಲ್ಲಿ ಕರ್ನಾಟಕ ಫುಟ್ಬಾಲ್ ಅಸೋಸಿಯೇಷನ್‌ಗೆ ಜಾಗ ನೀಡಿದ್ದಲ್ಲಿ ಉತ್ತಮ ಫುಟ್ಬಾಲ್ ಕ್ರೀಡಾಂಗಣ ನಿರ್ಮಿಸಲಾಗುವುದು. ಸರ್ಕಾರ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಮುತುವರ್ಜಿ ವಹಿಸಿ ಜಾಗ ಒದಗಿಸಿದರೆ, ಜಿಲ್ಲೆಯ ಆಟಗಾರರಿಗೆ ಪ್ರೋತ್ಸಾಹ ನೀಡಿದಂತಾಗುತ್ತÀದೆ ಎಂದರು. ಸ್ವಯಂ ಪ್ರಯತ್ನ ಪಟ್ಟರೆ ಮಾತ್ರ ಫುಟ್ಬಾಲ್ ಬೆಳೆಯಲು ಸಾಧ್ಯ. ರಾಷ್ಟçಮಟ್ಟದ ಪಂದ್ಯಾವಳಿ ಆಯೋಜಿಸಿದ ಮಿಲನ್ಸ್ ತಂಡದ ಕೆಲಸ ಶ್ಲಾಘನೀಯ ಎಂದರು.

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಮೂರು ಟರ್ಫ್ ಮೈದಾನ ಇದೆ. ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ಕೆಲವರು ಅಡೆತಡೆ ಮಾಡುತ್ತಿದ್ದಾರೆ. ಮತ್ತಷ್ಟು ಕ್ರೀಡಾಂಗಣದ ಅಗತ್ಯವಿದೆ. ಆದರೆ ಜಾಗದ ಕೊರತೆ ಇದ್ದು, ಮುಂದಿನ ದಿನಗಳಲ್ಲಿ ಹೈಟೆಕ್ ಫುಟ್ಬಾಲ್ ಕ್ರೀಡಾಂಗಣ ನಿರ್ಮಿಸಲು ಶ್ರಮಿಸಲಾಗುವುದು ಎಂದರು.

ಅಧ್ಯಕ್ಷತೆಯನ್ನು ಮಿಲನ್ಸ್ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಲಿಜೇಶ್, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ, ಕೆ.ಪಿ.ಸಿ.ಸಿ. ಕಾನೂನು ಘಟಕದ ಅಧ್ಯಕ್ಷ ಎ.ಎಸ್. ಪೊನ್ನಣ್ಣ, ಉದ್ಯಮಿಗಳಾದ ರಾಜಾ ವಿಜಯ ಕುಮಾರ್, ಸಂಪತ್ ಕುಮಾರ್, ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ, ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಜಗದೀಶ್, ಪ್ರಮುಖರಾದ ತೇಲಪಂಡ ಶಿವಕುಮಾರ್ ನಾಣಯ್ಯ, ಕಂಡ್ರತAಡ ಸುಬ್ಬಯ್ಯ, ಅಂತರರಾಷ್ಟಿçÃಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ, ಟೋಮಿ ರೆಜೋರಿಯೋ, ಯಾಕೂಬ್, ಸುವಿನ್ ಗಣಪತಿ ಸೇರಿದಂತೆ ಇನ್ನಿತರರು ಇದ್ದರು.