ಮಡಿಕೇರಿ, ಜ. ೩೦; ಕೊಡವಾಮೆರ ಕೊಂಡಾಟ ಸಂಘಟನೆ ವತಿಯಿಂದ ಕೊಡಗಿನ ಕವಿ ಮುಲ್ಲೇರ ಜಿಮ್ಮಿ ಅಯ್ಯಪ್ಪ ಅವರ ಸ್ಮರಣಾರ್ಥ, ಅವರ ಹುಟ್ಟು ಹಬ್ಬದ ನೆನಪಿನಲ್ಲಿ ಕವಿಗೋಷ್ಠಿ ಏರ್ಪಡಿಸಲಾಗಿದೆ. ತಾ.೩೧ರಂದು (ಇಂದು) ಸಂಜೆ ೭ ಗಂಟೆಗೆ ಗೂಗಲ್ ಮೀಟ್ ವೆಬಿನಾರ್ ಮೂಲಕ ನಡೆಯಲಿರುವ ಕವಿಗೋಷ್ಠಿಯಲ್ಲಿ ವಿಶೇಷ ಅತಿಥಿಗಳಾಗಿ ಪದ್ಮಶ್ರೀ ಐಮುಡಿಯಂಡ ರಾಣಿ ಮಾಚಯ್ಯ ಭಾಗವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಕೊಡಗು ಏಕೀಕರಣ ಸಂಚಾಲಕ ಅಜ್ಜಿನಂಡ ತಮ್ಮು ಪೂವಯ್ಯ, ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಕಾರ್ಯದರ್ಶಿ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ, ಮುಲ್ಲೇರ ಜಿಮ್ಮಿ ಅವರ ಪತ್ನಿ ಉಷಾ ಅಯ್ಯಪ್ಪ ಉಪಸ್ಥಿತರಿರುವರು.

ಕೊಡವಾಮೇರ ಕೊಂಡಾಟ ಸಂಘಟನೆಯ ಅಧ್ಯಕ್ಷ ಚಾಮೇರ ದಿನೇಶ್ ಬೆಳ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಗೋಷ್ಠಿಯಲ್ಲಿ ಜಿಲ್ಲೆಯ ಕವಿಗಳಾದ ಬಿದ್ದಂಡ ನಾಣಿ ದೇವಯ್ಯ, ಬಿ.ಜಿ.ಅನಂತಶಯನ, ಉಳುವಂಗಡ ಕಾವೇರಿ ಉದಯ, ಹಾ.ತಿ. ಜಯಪ್ರಕಾಶ್, ಕುಡೆಕಲ್ ಸಂತೋಷ್, ಈರಮಂಡ ಹರಿಣಿ ವಿಜಯ, ಸಿ.ಸಿ.ಚೇತನ್ ಗೌಡ, ಎಂ. ಮಹದೇವಸ್ವಾಮಿ, ಅಜ್ಜಿಕುಟ್ಟಿರ ಭವ್ಯ ಬೋಪಣ್ಣ, ಪುಗ್ಗೇರ ಸುಮಿ ಸನ್ನು, ಪೇರಿಯಂಡ ಯಶೋದ, ಎಂ.ಇ.ಮಹಮ್ಮದ್, ಕೊಟ್ಟಂಗಡ ಕವಿತಾ ವಾಸುದೇವ, ಚಾಮೇರ ನಕ್ಷ ದೇಚಮ್ಮ, ಕರವಂಡ ಸೀಮ ಗಣಪತಿ, ಬೊಟ್ಟೋಳಂಡ ನಿವ್ಯ ದೇವಯ್ಯ, ಪಂದ್ಯAಡ ರೇಣುಕಾ ಸೋಮಯ್ಯ, ಚೆನಿಯಪಂಡ ಮನು ಮಂದಣ್ಣ, ಚೋವಂಡ ಬೋಪಯ್ಯ, ಮಾಳೇಟಿರ ಸೀತಮ್ಮ ವಿವೇಕ್, ಕುಮ್ಮಂಡ ಮೈನಾ ಚಂಗಪ್ಪ, ಮೂವೇರ ರೇಖಾ ಪ್ರಕಾಶ್, ಬೊಟ್ಟಂಗಡ ಸುಮನ್ ಸೀತಮ್ಮ, ಮಾತಂಡ ದೇಚಮ್ಮ ಅಚ್ಚಯ್ಯ, ಅಮ್ಮಂಡ ಅನುಪಮ ತಿಮ್ಮಯ್ಯ ಭಾಗವಹಿಸುವರು. hಣಣಠಿs://meeಣ.googಟe.ಛಿom/ಠಿmu-gಥಿಚಿಞ-ರಿಛಿಣ ಲಿಂಕ್ ಬಳಸಿ ಭಾಗವಹಿಸಬಹುದೆಂದು ಕವಿಗೋಷ್ಠಿ ಸಂಚಾಲಕ ಶಿವಚಾಳಿಯಂಡ ಕಿಶೋರ್ ಬೋಪಣ್ಣ ತಿಳಿಸಿದ್ದಾರೆ.