ವೀರಾಜಪೇಟೆ, ನ. ೩೦: ಕೊಡವರ ವಿಶೇಷ ಕೋವಿ ವಿನಾಯಿತಿ ಪರವಾನಗಿ ವಿಷಯದಲ್ಲಿ ಹಾಗೂ ಜನಾಂಗಕ್ಕೆ ಸಂಬAಧಿಸಿದ ಇತರೆ ವಿಷಯದಲ್ಲಿ ಅಧಿಕಾರಿಗಳು ಪದೇಪದೇ ಒಂದಿಲ್ಲೊAದು ಗೊಂದಲ ಕ್ಕೀಡಾಗಿದ್ದು, ಜನಾಂಗ ಹಾಗೂ ಸರಕಾರವನ್ನು ಹಾದಿ ತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ಅಧಿಕಾರಿಗಳು ಎಚ್ಚೆತ್ತುಕೊಂಡು ಸರಿಪಡಿಸಿಕೊಳ್ಳದಿದ್ದರೆ ಹೋರಾಟದ ಮೂಲಕ ಉತ್ತರ ನೀಡಬೇಕಾಗುತ್ತದೆ ಎಂದು ಅಖಿಲ ಕೊಡವ ಸಮಾಜ ಎಚ್ಚರಿಸಿದೆ.

ಈ ಕುರಿತು ಬುಧವಾರ ವೀರಾಜಪೇಟೆಯಲ್ಲಿರುವ ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಅಧಿಕಾರಿಗಳು ಕೊಡವರ ಕೋವಿ ಹಕ್ಕಿನ ಐತಿಹಾಸಿಕ ಹಿನ್ನೆಲೆಯನ್ನು ಅರಿಯದೆ ಸರಕಾರ ಗೌರವಿಸುತ್ತಿರುವ ಜನಾಂಗದ ವಿಶೇಷ ಸಂಸ್ಕöÈತಿಯನ್ನು ಮರೆತು ಕೈಗೊಳ್ಳುತ್ತಿರುವ ನಿರ್ಧಾರ ಗಳನ್ನು ಸಭೆಯಲ್ಲಿ ಖಂಡಿಸಲಾಯಿತು. ಕಾನೂನಿನಡಿಯಲ್ಲಿ ಸಾಮಾನ್ಯ ಕೋವಿ ಪರವಾನಗಿ ಹಾಗೂ ಕೊಡವ ಜನಾಂಗದ ವಿಶೇಷ ಕೋವಿ ವಿನಾಯಿತಿಯನ್ನು ಒಂದೇ ತಕ್ಕಡಿಯಲ್ಲಿ ಹಾಕಿ ಅಧಿಕಾರಿಗಳು ತುಲನೆ ಮಾಡಿ ಮಾಡುತ್ತಿರುವುದನ್ನು ಹಾಗೂ ಎಲ್ಲಾ ವಿಷಯಗಳಲ್ಲೂ ಕೂಡ ಪದೇಪದೇ ಗೊಂದಲಗಳನ್ನು ಸೃಷ್ಟಿಸುತ್ತಿದ್ದು ಜನಾಂಗದಲ್ಲಿ ಆತಂಕವನ್ನು ಮೂಡಿಸುತ್ತಿರುವುದನ್ನು ಸಭೆ ಖಂಡಿಸಿದೆ.

ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಮಾತನಾಡಿ ಕೊಡವ ಜನಾಂಗದಲ್ಲಿ ಹುಟ್ಟಿದ ಪ್ರತಿಯೊಬ್ಬರು ಕೂಡ ಈ ವಿಶೇಷ ಕೋವಿ ಹಕ್ಕಿನ ಅನುಮತಿ ಪತ್ರ ಪಡೆಯಲು ಅರ್ಹರು. ಕೂಡಲೇ ಜನಾಂಗದಲ್ಲಿ ಯಾವುದೇ ಲಿಂಗಭೇದÀವಿಲ್ಲದೆ ಜಾತಿ ಪ್ರಮಾಣ ಪತ್ರದೊಂದಿಗೆ ಸಂಬAಧಿಸಿದ ಮೂಲ ದಾಖಲಾತಿಯನ್ನು ನೀಡಿ ಎಲ್ಲರು ಕೋವಿ ವಿನಾಯಿತಿ ಪತ್ರವನ್ನು ಹೊಂದಬೇಕಿದೆ. ಅಧಿಕಾರಿಗಳು ಕೂಡ ಇದಕ್ಕೆ ಸ್ಪಂದಿಸಬೇಕಿದೆ ಎಂದು ಮನವಿ ಮಾಡಿಕೊಂಡಿದ್ದರು. ಈ ಕುರಿತು ಮುಂದಿನ ದಿನಗಳಲ್ಲಿ ಅಖಿಲ ಕೊಡವ ಸಮಾಜದಲ್ಲಿ ತಿಳುವಳಿಕೆ ಕಾರ್ಯಾಗಾರ ಹಾಗೂ ಜನಾಂಗಕ್ಕೆ ಕೋವಿ ವಿನಾಯಿತಿ ಪತ್ರವನ್ನು ಹೊಂದಲು ಸಹಾಯ ಮಾಡುವುದಾಗಿ ತಿಳಿಸಿದರು.

ಅಖಿಲ ಕೊಡವ ಸಮಾಜ ಉಪಾಧ್ಯಕ್ಷ ಅಜ್ಜಿಕುಟ್ಟಿರ ಸುಬ್ರಮಣಿ ಮಾದಯ್ಯ, ಕಾನೂನು ಸಲಹೆಗಾರ ಬಲ್ಯಮಾಡ ಮದು ಮಾದಪ್ಪ, ಪ್ರಧಾನ ಕಾರ್ಯದರ್ಶಿ ಅಮ್ಮಣಿಚಂಡ ರಾಜ ನಂಜಪ್ಪ, ಖಜಾಂಚಿ ಮಂಡೇಪAಡ ಸುಗುಣ ಮುತ್ತಣ್ಣ, ಸಹ ಕಾರ್ಯದರ್ಶಿ ನಂದೇಟೀರ ರಾಜ ಮಾದಪ್ಪ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಉಪಸ್ಥಿತರಿದ್ದರು.