ವೀರಾಜಪೇಟೆ, ನ. ೩೦: ನಗರ ನೀರು ಸರಬರಾಜು ಮಂಡಳಿ ವತಿಯಿಂದ ಅಮೃತ ಯೋಜನೆ ಅಡಿಯಲ್ಲಿ ಕುಡಿಯುವ ನೀರಿನÀ ಯೋಜನೆಯನ್ನು ಕಾರ್ಯಗತ ಗೊಳಿಸಲು ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲು ವಿಶೇಷ ಸಭೆಯನ್ನು ಕರೆಯುವಂತೆ ಪುರಸಭೆ ಸಭೆಯಲ್ಲಿ ವೀರಾಜಪೇಟೆ, ನ. ೩೦: ನಗರ ನೀರು ಸರಬರಾಜು ಮಂಡಳಿ ವತಿಯಿಂದ ಅಮೃತ ಯೋಜನೆ ಅಡಿಯಲ್ಲಿ ಕುಡಿಯುವ ನೀರಿನÀ ಯೋಜನೆಯನ್ನು ಕಾರ್ಯಗತ ಗೊಳಿಸಲು ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲು ವಿಶೇಷ ಸಭೆಯನ್ನು ಕರೆಯುವಂತೆ ಪುರಸಭೆ ಸಭೆಯಲ್ಲಿ ಸರಬರಾಜು ಮಂಡಳಿ ವತಿಯಿಂದ ಪಟ್ಟಣಕ್ಕೆ ಕುಡಿಯುವ ನೀರಿನ ಯೋಜನೆಗೆ ೬೫ ಕೋಟಿ ರೂ. ಮಂಜೂರಾಗಿದೆ. ೨೦೦೨ ರಲ್ಲಿ ಬೇತ್ರಿಯ ಕಾವೇರಿ ಹೊಳೆÀಗೆ ೪೫ ಹೆಚ್.ಪಿ. ಮೋಟಾರು ಅಳವಡಿಸಿ ೧೫ ಸಾವಿರ ಲೀಟರ್ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಇಂದಿನ ಜನಸಂಖ್ಯೆಗೆ ಅದು ಸಾಕಾಗುವುದಿಲ್ಲ. ೨೦೫೦ ರ ಜನಸಂಖ್ಯೆಯನ್ನು ಆಧರಿಸಿ ೧೨೫ ಹೆಚ್.ಪಿ. ಮೋಟಾರ್ ಹಾಗೂ ೧೮ ಇಂಚಿನ ಪೈಪ್ ಅಳವಡಿಸಿ ನೀರು ಸರಬರಾಜು ಮಾಡುವ ಗುರಿ ಹೊಂದಲಾಗಿದೆ. ಕದನೂರಿನಲ್ಲಿರುವ ೨ ಎಕರೆ ಜಾಗದಲ್ಲಿರುವ ಜಾಕ್‌ವೆಲ್‌ನ್ನು ಬಳಸಿಕೊಳ್ಳಲಾಗುವುದು. ಪಟ್ಟಣದ ಸರ್ಕಾರಿ ಆಸ್ಪತ್ರೆಯ ಬಳಿ ಬೃಹತ್ ಟ್ಯಾಂಕ್ ನಿರ್ಮಿಸಲಾಗುವುದು. ಹಾಗೆಯೆ ಅರಸು ನಗರದ ಟ್ಯಾಂಕ್‌ನ್ನು ನವೀಕರಣ ಮಾಡಿದರೆ ಇಡೀ ಪಟ್ಟಣಕ್ಕೆ ನೀರು ಸರಬರಾಜು ಮಾಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

(ಮೊದಲ ಪುಟದಿಂದ) ಈ ವಿಚಾರದಲ್ಲಿ ಕೆಲಕಾಲ ಚರ್ಚೆ ನಡೆದು ಶಾಸಕರ ನೇತೃತ್ವದಲ್ಲಿ ವಿಶೇಷ ಸಭೆ ನಡೆಸಲು ತಿರ್ಮಾನಿಸಲಾಯಿತು.

ಸದಸ್ಯೆ ದೇಚಮ್ಮ ಮಾತನಾಡಿ, ಯುವಜನ ಮತ್ತು ಕ್ರೀಡಾ ಇಲಾಖೆಯ ಅಧೀನದಲ್ಲಿರುವ ಪಟ್ಟಣದ ಒಳಾಂಗಣ ಕ್ರೀಡಾಂಗಣವನ್ನು ಖಾಸಗಿ ಸೇವಾ ಸಂಸ್ಥೆ ನಿರ್ವಹಣೆ ಮಾಡುತ್ತಿದ್ದು ಕ್ರೀಡಾರ್ಥಿಗಳಿಂದ ದುಬಾರಿ ಹಣ ವಸೂಲಿ ಮಾಡಲಾಗುತ್ತಿದೆ. ಸರ್ಕಾರ ಬಡ ಮಕ್ಕಳು ಸೇರಿದಂತೆ ಪಟ್ಟಣದ ಸುತ್ತಮುತ್ತಲ ಜನರಿಗೆ ಉಪಯೋಗವಾಗಲಿ ಎಂದು ಒಳಾಂಗಣ ಕ್ರೀಡಾಂಗಣವನ್ನು ನಿರ್ಮಾಣ ಮಾಡಿದೆ. ಖಾಸಗಿ ಸೇವಾ ಸಂಸ್ಥೆ ಪ್ರತಿಯೊಬ್ಬರಿಂದ ಮಾಸಿಕ ತಲಾ ೬೦೦ ರೂಪಾಯಿಗಳನ್ನು ವಸೂಲಿ ಮಾಡುತ್ತಿದೆ. ಆದರೆ ಕ್ರೀಡಾಂಗಣದ ಸುತ್ತಮುತ್ತ ೪ ಹೆಣ್ಣುಮಕ್ಕಳ ವಸತಿ ನಿಲಯಗಳಿದ್ದು ಕ್ರೀಡಾರ್ಥಿಗಳಿಗೆ ಒಂದು ಸಮಯ ನಿಗದಿಪಡಿಸಬೇಕು. ಶಾಸಕರು, ಪುರಸಭೆ ಅಧ್ಯಕ್ಷರು ಹಾಗೂ ಸದಸ್ಯರನ್ನೊಳಗೊಂಡ ಮೇಲುಸ್ತುವಾರಿ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಸದಸ್ಯರು ಒಪ್ಪಿಗೆ ಸೂಚಿಸಿದರು.

ಸದಸ್ಯ ಆಶಾ ಸುಬ್ಬಯ್ಯ ಮಾತನಾಡಿ, ಕಳೆದ ಮಾಸಿಕ ಸಭೆಯಲ್ಲಿ ತೆಗದುಕೊಂಡ ನಿರ್ಣಯಗಳು ಯಾವುದು ಕಾರ್ಯಗತಗೊಂಡಿಲ್ಲ. ಛತ್ರಕೆರೆ ಬಳಿ ಇರುವ ಬಯಲು ರಂಗ ಮಂಟಪ ಕೆರೆಯ ಸುತ್ತಲು ಕಲ್ಲು ಬೆಂಚುಗಳ ಅಳವಡಿಕೆ, ಚಿಕ್ಕಪೇಟೆ ಬೋಪಣ್ಣ ಮನೆ ಬಳಿ ಬಾವಿಗೆ ಮೆಶ್ ಅಳವಡಿಕೆ ಇದ್ಯಾವುದು ಆಗಿಲ್ಲ. ಸೀನಿಯರ್ ಕಾಲೇಜು ಬಳಿ ಇರುವ ನೀರಿನ ಟ್ಯಾಂಕ್‌ನ ಪಕ್ಕದಲ್ಲಿಯೆ ಮಣ್ಣು ಕೊರೆದಿರುವದರಿಂದ ಟ್ಯಾಂಕ್ ಯಾವಾಗ ಬೀಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಸದಸ್ಯ ಮತೀನ್ ಮಾತನಾಡಿ, ಪುರಸಭೆಯಲ್ಲಿರುವ ಸಕ್ಕಿಂಗ್ ಯಂತ್ರವನ್ನು ಮೂರು ವರ್ಷ ಖಾಸಗಿಯವರಿಗೆ ನೀಡಿದರೆ ವಾರ್ಷಿಕ ೧೦ ರಿಂದ ೧೫ ಲಕ್ಷ ಆದಾಯ ಬರುತ್ತದೆ ಎಂದು ಹೇಳಿದಾಗ ಚರ್ಚೆ ನಡೆದು ಸದಸ್ಯ ಪ್ರಥ್ವಿನಾಥ್ ಖಾಸಗಿಯವರಿಗೆ ಕೊಡಲು ವಿರೋಧ ವ್ಯಕ್ತಪಡಿಸಿದರು. ಹೊಸ ಸಕ್ಕಿಂಗ್ ಮಿಷನ್ ಬಂದಿದ್ದು ಅದಕ್ಕೆ ದರ ನಿಗದಿ ಮಾಡಿಲ್ಲ. ಖರ್ಚು ವೆಚ್ಚಗಳ ಬಗ್ಗೆ ವಿಶೇಷ ಸಭೆ ಕರೆದು ತೀರ್ಮಾನ ಮಾಡುವಂತೆ ಮುಖ್ಯಾಧಿಕಾರಿ ಚಂದ್ರಕುಮಾರ್ ಹೇಳಿದರು.

ಸದಸ್ಯ ಡಿ.ಪಿ. ರಾಜೇಶ್ ಮಾತನಾಡಿ, ಕಳೆದ ೨ ತಿಂಗಳ ಹಿಂದೆ ಪಟ್ಟಣದಲ್ಲಿ ಗಾಂಜಾ ಮಾರುತ್ತಿದ್ದವನ ಬಂಧನವಾಗಿದೆ. ಆತ ನಡೆಸುತ್ತಿದ್ದ ಫಾಸ್ಟ್ಫುಡ್ ಚಾಟಿಂಗ್ ಸೆಂಟರ್‌ನ ಪರವಾನಗಿಯನ್ನು ರದ್ದು ಮಾಡುವಂತೆ ನಿರ್ಣಯ ಕೈಗೊಳ್ಳಲಾಗಿದೆ. ಆದರೆ ಈವರೆಗೂ ಪರವಾನಗಿ ರದ್ದಾಗಿಲ್ಲ ಎಂದು ಸಭೆ ತಿಳಿಸಿದಾಗ ಮುಖ್ಯಾಧಿಕಾರಿ ಮಾಹಿತಿ ನೀಡಿ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ಆ ನೋಟಿಸ್‌ಗೆ ಉತ್ತರ ನೀಡಿಲ್ಲ ಎಂದಾಗ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಎಲ್ಲಾ ಸದಸ್ಯರು ಆಗ್ರಹಿಸಿದರು.

ಮಹಮದ್ ರಾಫಿ ಮಾತನಾಡಿ, ಸುಭಾಷ್ ನಗರದಲ್ಲಿ ಕಳೆದ ಮಳೆಹಾನಿ ಪರಿಹಾರದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಈಗಾಗಲೇ ಆ ರಸ್ತೆಗಳ ಮೇಲ್ಪದರ ಕಿತ್ತು ಬಂದಿದೆ. ಗುತ್ತಿಗೆದಾರ ಕಳಪೆ ಕಾಮಗಾರಿ ನಡೆಸಿದ್ದಾರೆ. ಅವರ ಇಎಂಡಿ ಹಣವನ್ನು ಮುಟ್ಟುಗೋಲು ಹಾಕಿ ಅವರನ್ನು ಕಪ್ಪು ಪಟ್ಟಿಗೆ ಸೇರಿಸಿ ಕಾಂಕ್ರಿಟ್ ರಸ್ತೆಗಳ ಡಾಂಬರು ಹಾಕಿಸಿ ಕೊಡಿ ಎಂದು ಆಗ್ರಹಿಸಿದರು.

ಸದಸ್ಯ ಸಿ.ಕೆ. ಪ್ರಥ್ವಿನಾಥ್ ಮಾತನಾಡಿ, ನೂತನ ಅಧಿಸೂಚನೆಯಂತೆ ಪುರಸಭೆ ವ್ಯಾಪ್ತಿಗೆ ಸೇರ್ಪಡೆಗೊಳ್ಳುವ ಗಡಿಭಾಗದ ಜಾಗಕ್ಕೆ ಚದರ ಅಡಿಗೆ ೧೫ ರೂಪಾಯಿಗಳನ್ನು ವಸೂಲಿ ಮಾಡುತ್ತಿದ್ದಾರೆ. ಸಿಬ್ಬಂದಿಗಳಿಗೆ ಹಣ ಕೊಡದವರನ್ನು ಪುರಸಭೆ ವ್ಯಾಪ್ತಿಗೆ ಸೇರಿಸುತ್ತಿಲ್ಲ ಎಂದು ಸಭೆಗೆ ತಿಳಿಸಿದಾಗ ಈ ವಿಚಾರದಲ್ಲಿ ವಿಸ್ತçೃತ ಚರ್ಚೆ ನಡೆಯುವ ಕಾರಣ ವಿಶೇಷ ಸಭೆ ಕರೆಯಲಾಗುವುದು ಎಂದು ಮುಖ್ಯಾಧಿಕಾರಿ ಸಭೆಗೆ ತಿಳಿಸಿದರು.

ಸಭೆಯಲ್ಲಿ ಉಪಾಧ್ಯಕ್ಷ ವಿನಾಂಕ್ ಕುಟ್ಟಪ್ಪ, ಸ್ಥಾಯಿ ಸಮಿತಿ ಅಧ್ಯಕೆÀ್ಷ ಯಶೋಧ ಮುಖ್ಯಾಧಿಕಾರಿ ಚಂದ್ರಕುಮಾರ್, ಅಭಿಯಂತರ ಹೇಮಕುಮಾರ್ ಉಪಸ್ಥಿತರಿದ್ದರು.