ಮಡಿಕೇರಿ, ನ. ೩೦: ಕೃಷ್ಣಮೃಗದ ಚರ್ಮವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಸಿಐಡಿ ಪೊಲೀಸ್ ಅರಣ್ಯ ಘಟಕ ಯಶಸ್ವಿಯಾಗಿದೆ.

ನಾಗರಾಜ್ (೨೭) ಹಾಗೂ ನರಸಿಂಹ ಮೂರ್ತಿ (೨೭) ಬಂಧಿತ ಆರೋಪಿಗಳು. ಹೊರಜಿಲ್ಲೆಯಲ್ಲಿ ದೊರೆತ ಚರ್ಮವನ್ನು ತಾ. ೩೦ ರಂದು ಕುಶಾಲನಗರದ ಅಯ್ಯಪ್ಪ ಸ್ವಾಮಿ ದೇವಾಲಯದ ರಸ್ತೆ ಬಳಿ ಮಾರಾಟ ಮಾಡಲು ಯತ್ನಿಸಿದ ಸಂದರ್ಭ ದಾಳಿ ನಡೆಸಿದ ಅರಣ್ಯ ಘಟಕ ಸಿಬ್ಬಂದಿಗಳು ಮಾಲು ಸಹಿತ ಆರೋಪಿಗಳನ್ನು ಬಂಧಿಸಿದ್ದಾರೆ.

ಸಿಐಡಿ ಪೊಲೀಸ್ ಅರಣ್ಯ ಘಟಕದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕೆ.ವಿ. ಶರತ್ ಚಂದ್ರ ನಿರ್ದೇಶನ, ಘಟಕದ ಪೊಲೀಸ್ ಅಧೀಕ್ಷಕ ಕೆ.ಬಿ. ವಿಶ್ವನಾಥ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅರಣ್ಯ ಸಂಚಾರಿ ದಳದ ಉಪನಿರೀಕ್ಷಕಿ ಸಿ.ಯು. ಸವಿ, ಮುಖ್ಯಪೇದೆಗಳಾದ ಶೇಖರ್, ರಾಘವೇಂದ್ರ, ಯೋಗೇಶ್, ಮೋಹನ್, ಸ್ವಾಮಿ, ಮಂಜುನಾಥ್ ಇದ್ದರು.