ಚೆಟ್ಟಳ್ಳಿ, ನ. ೨೩: ಗೋಣಿಕೊಪ್ಪಲು ಕಾವೇರಿ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನಾ ಘಟಕದ ವತಿಯಿಂದ ಗೋಣಿಕೊಪ್ಪಲು ಸಮೀಪದ ಕುಂದ ಬೆಟ್ಟಕ್ಕೆ ಚಾರಣವನ್ನು ಹಮ್ಮಿಕೊಳ್ಳಲಾಗಿತ್ತು.

ಚಾರಣ ಮಾಡುತ್ತ ದಟ್ಟ ಅರಣ್ಯಪ್ರದೇಶ ಪ್ರವೇಶ ಮಾಡಿದ ವಿದ್ಯಾರ್ಥಿಗಳು ಪರಿಸರದ ಅಂದವನ್ನು ಸವಿಯುವುದರೊಂದಿಗೆ ಕಾನನಗಳಲ್ಲಿ ಬೆಳೆದುನಿಂತ ಗಿಡಮರಗಳ ಹೆಸರು ತಿಳಿದುಕೊಂಡರು. ಸುಮಾರು ೩ ಕಿಲೋ ಮೀಟರ್ ಎತ್ತರದ ಪ್ರದೇಶ ಸಾಗಿದ ನಂತರ ಅಲ್ಲಿ ಇರುವ ಪುರಾತನ ಇತಿಹಾಸ ಸಾರುವ ಪಾಂಡವ ನಿರ್ಮಿತ ಕಲ್ಲಿನ ಈಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬೆಟ್ಟದ ಮೇಲಿನಿಂದ ಸುತ್ತಲಿನ ಸೌಂದರ್ಯವನ್ನು ವಿದ್ಯಾರ್ಥಿಗಳು ನೋಡಿ ಸಂಭ್ರಮಿಸಿದರು. ಎನ್.ಎಸ್.ಎಸ್ ಅಧಿಕಾರಿ ವನಿತ್ ಕುಮಾರ್ ಎಂ.ಎನ್ ಮತ್ತು ರೀತಾ ಎನ್.ಪಿ ರವರ ಮಾರ್ಗದರ್ಶನದಲ್ಲಿ ನಡೆದ ಚಾರಣ ಶಿಬಿರದಲ್ಲಿ ಕಾವೇರಿ ಕಾಲೇಜಿನ ಸಿಬ್ಬಂದಿ ಚನ್ನನಾಯಕ ಹಾಗೂ ಸುಮಾರು ೩೦ ವಿದ್ಯಾರ್ಥಿ ಗಳು ಭಾಗವಹಿಸಿದ್ದರು.