ಮಡಿಕೇರಿ: ಮಡಿಕೇರಿಯ ರಾಜರಾಜೇಶ್ವರಿ ವಿದ್ಯಾಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆ ಸಮಾರಂಭ ವನ್ನು ಏರ್ಪಡಿಸಲಾಗಿತ್ತು. ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಅಧ್ಯಕ್ಷ ಗೋವಿಂದರಾಜ್ ಅವರು ವಹಿಸಿದ್ದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಉಪಾಧ್ಯಕ್ಷೆ ದಾಕ್ಷಾಯಿಣಿ ವಾಸುದೇವ್, ಸಂಸ್ಥೆಯ ಕಾರ್ಯದರ್ಶಿ ಸಚಿನ್ ವಾಸುದೇವ್ ಮತ್ತು ಪ್ರಾಂಶುಪಾಲೆ ಲಕ್ಷಿö್ಮ ಸಚಿನ್ ಅವರು ಭಾಗವಹಿಸಿದ್ದರು.

ಮಕ್ಕಳ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ಛದ್ಮವೇಷ ಸ್ಪರ್ಧೆ ಹಾಡು ಹೇಳುವ ಸ್ಪರ್ಧೆ, ಇಂಧನ ಬಳಸದೆ ಅಡುಗೆ ತಯಾರಿಸುವ ಸ್ಪರ್ಧೆ ಮತ್ತು ತ್ಯಾಜ್ಯದಿಂದ ವಸ್ತುಗಳ ಉತ್ಪನ್ನ ಸ್ಪರ್ಧೆ ಇತ್ಯಾದಿ ಸ್ಪರ್ಧೆ ಗಳನ್ನು ಏರ್ಪಡಿಸಲಾಗಿತ್ತು.

ನಂತರ ಶಿಕ್ಷಕರು ವಿದ್ಯಾರ್ಥಿ ಗಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ ವನ್ನು ಏರ್ಪಡಿಸಿದ್ದರು. ವಿದ್ಯಾರ್ಥಿ ಗಳಿಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಯಿತು.

ಕಾರ್ಯಕ್ರಮವನ್ನು ಉಪನ್ಯಾಸಕಿ ಅನಿಷತ್ತ್ ನಿರೂಪಿಸಿ ದರು. ಕಾರ್ಯಕ್ರಮದಲ್ಲಿ ಆಂಗ್ಲ ಮಾಧ್ಯಮ ಮುಖ್ಯೋಪಾಧ್ಯಾಯಿನಿ ದಿವ್ಯಾ ಆರೋರಾ ಮತ್ತು ಕನ್ನಡ ಮಾಧ್ಯಮ ಮುಖ್ಯ ಶಿಕ್ಷಕ ವೆಂಕಟೇಶ್ ಪೂಜಾರ್ ಅವರು ಹಾಜರಿದ್ದರು.ಮುಳ್ಳೂರು: ಇಲ್ಲಿಗೆ ಸಮೀಪದ ದುಂಡಳ್ಳಿ ಗ್ರಾ.ಪಂ.ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಮಕ್ಕಳಿಗೆ ಪತ್ರ ಬರೆಯುವ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಅಭಿಯಾನದಲ್ಲಿ ಸುತ್ತಮುತ್ತಲಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ಈ ಪೈಕಿ ಪ್ರೌಢ ಶಾಲೆ ವಿಬಾಗದಿಂದ ೧೫ ಮತ್ತು ಪ್ರಾಥಮಿಕ ಶಾಲಾ ವಿಭಾಗದಿಂದ ೨೫ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ೩೫ ಮಕ್ಕಳು ‘ಅಮ್ಮನಿಗೊಂದು ಪತ್ರ’ ಶೀರ್ಷಿಕೆಯಡಿಯಲ್ಲಿ ಪತ್ರ ಬರೆದರು.

ದುಂಡಳ್ಳಿ ಗ್ರಾ.ಪಂ.ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕಿ ಎಸ್.ಪಿ.ದಿವ್ಯ ಅಭಿಯಾನದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ-ಮಕ್ಕಳು ಓದುವುದರ ಜೊತೆಯಲ್ಲಿ ಬರೆಯುವ ಅಭ್ಯಾಸವನ್ನು ಕಲಿಯುವುದು, ಸ್ವಂತ ವಾಕ್ಯ ರಚನೆ ಮಾಡುವ ಕೌಶಲ್ಯತೆ ಮತ್ತು ಜ್ಞಾನ ಹೆಚ್ಚಿಸುವ ಉದ್ದೇಶದಿಂದ ಮಕ್ಕಳಿಗೆ ಪತ್ರ ಬರೆಯುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಮಕ್ಕಳಿಗೆ ಪತ್ರ ಬರೆಯುವ ಅಭಿಯಾನದಲ್ಲಿ ಭಾಗವಹಿಸಿದ ಮಕ್ಕಳಲ್ಲಿ ಮೌಖಿಕ ಮತ್ತು ಲಿಖಿತ ಕೌಶಲ್ಯ ಹೆಚ್ಚಾಗುವುದರ ಜೊತೆಗೆ ಮಕ್ಕಳಲ್ಲಿ ಸೃಜನಶೀಲ ಬರವಣಿಗೆಗಳ ಬಗ್ಗೆ ಅಭ್ಯಾಸ ಮತ್ತು ಅನುಭವ ಪಡೆದಂತಾಗುತ್ತದೆ ಎಂದರು.

ಅಮ್ಮನಿಗೊAದು ಪತ್ರ ಬರೆಯುವ ಅಭಿಯಾನ ಕಾರ್ಯಕ್ರಮದಲ್ಲಿ ದುಂಡಳ್ಳಿ ಗ್ರಾ.ಪಂ.ಅಧ್ಯಕ್ಷೆ ಪೂರ್ಣಿಮಾ ಕಿರಣ್, ಸದಸ್ಯೆ ಎಸ್.ಪಿ.ಭಾಗ್ಯ, ತ್ಯಾಗರಾಜ ಕಾಲೋನಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಪುಟ್ಟಸ್ವಾಮಿ, ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆ ಪ್ರಾಂಶುಪಾಲೆ ಡಿ.ಸುಜಲಾದೇವಿ, ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಪೂರ್ಣಿಮ ಪ್ರಮುಖರಾದ ಚಂದ್ರಶೇಖರ್, ಪುಟ್ಟರಾಜು, ಮಲ್ಲೇಶ್, ರಾಜಪ್ಪ, ಅಶ್ವಿನಿ, ಪೂರ್ಣಿಮಾ, ಶ್ರೀದೇವಿ, ಭಾರತಿ, ವೀಣಾ, ಜಯಮ್ಮ, ತಮ್ಮೇಗೌಡ ಮುಂತಾದವರು ಇದ್ದರು. ಮಡಿಕೇರಿ: ಕಾರ್ಮಿಕರ ಮಕ್ಕಳಿಗೆ ಮೀಸಲಿರುವ ಮುಂಬೈನ ಎಂಪೈರ್ ಫೌಂಡೇಷನ್ ನಡೆಸುತ್ತಿರುವ ಶಿಶುಪಾಲನಾ ಕೇಂದ್ರದಲ್ಲಿ ಇನ್ನರ್ ವೀಲ್ ಸಂಸ್ಥೆಯ ವತಿಯಿಂದ ಮಕ್ಕಳ ದಿನಾಚರಣೆ ಆಚರಿಸಲಾಯಿತು. ೩೧ ಮಕ್ಕಳಿಗೆ ಇನ್ನರ್ ವೀಲ್ ಕ್ಲಬ್ ವತಿಯಿಂದ ಉಡುಗೊರೆ, ತಿಂಡಿತಿನಿಸು ವಿತರಿಸಿ ಮಕ್ಕಳ ದಿನಾಚರಣೆಯ ಶುಭಹಾರೈಸಲಾಯಿತು.

ಮಡಿಕೇರಿ: ಕಾರ್ಮಿಕರ ಮಕ್ಕಳಿಗೆ ಮೀಸಲಿರುವ ಮುಂಬೈನ ಎಂಪೈರ್ ಫೌಂಡೇಷನ್ ನಡೆಸುತ್ತಿರುವ ಶಿಶುಪಾಲನಾ ಕೇಂದ್ರದಲ್ಲಿ ಇನ್ನರ್ ವೀಲ್ ಸಂಸ್ಥೆಯ ವತಿಯಿಂದ ಮಕ್ಕಳ ದಿನಾಚರಣೆ ಆಚರಿಸಲಾಯಿತು. ೩೧ ಮಕ್ಕಳಿಗೆ ಇನ್ನರ್ ವೀಲ್ ಕ್ಲಬ್ ವತಿಯಿಂದ ಉಡುಗೊರೆ, ತಿಂಡಿತಿನಿಸು ವಿತರಿಸಿ ಮಕ್ಕಳ ದಿನಾಚರಣೆಯ ಶುಭಹಾರೈಸಲಾಯಿತು.