ಗೋಣಿಕೊಪ್ಪಲು, ನ.೨೩: ನಾಗರಿಕರು, ಕೃಷಿಕರು ಕೇಂದ್ರ ಸರ್ಕಾರದ ಬಹುದೊಡ್ಡ ಯೋಜನೆಯಾದ ಮುದ್ರಾ ಸಾಲ ಯೋಜನೆಯಿಂದ ತಮ್ಮ ಆರ್ಥಿಕ ಅಭಿವೃದ್ಧಿಯನ್ನು ಕಂಡುಕೊಳ್ಳುವAತೆ ಭಾರತೀಯ ಸ್ಪೇಟ್‌ಬ್ಯಾಂಕ್‌ನ ಕೊಡಗು ಪ್ರಾದೇಶಿಕ ವ್ಯವಸ್ಥಾಪಕ ಮೂಗಿಲಿ ಎಡುಕೊಂಡಲು ಜನತೆಗೆ ಕರೆ ನೀಡಿದರು.

ಪೊನ್ನಂಪೇಟೆಯ ಕೊಡವ ಸಮಾಜದಲ್ಲಿ ಪೊನ್ನಂಪೇಟೆ, ಟಿ.ಶೆಟ್ಟಿಗೇರಿ ಹಾಗೂ ಗೋಣಿಕೊಪ್ಪ ಭಾರತೀಯ ಸ್ಟೇಟ್ ಬ್ಯಾಂಕ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮುದ್ರಾ ಸಾಲ ಯೋಜನೆಯ ಸದ್ಬಳಕೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಗ್ರಾಹಕರೊಂದಿಗೆ ಬ್ಯಾಂಕ್ ಉತ್ತಮ ಬಾಂಧವ್ಯ ರೂಪಿಸುವ ಮೂಲಕ ಸರ್ಕಾರದ ಯೋಜನೆಗಳನ್ನು ಸಕಾಲದಲ್ಲಿ ಗ್ರಾಹಕರು ಹೆಚ್ಚಾಗಿ ಪಡೆಯುವ ಸಲುವಾಗಿ ಇಂತಹ ಬೃಹತ್ ಕಾರ್ಯಕ್ರಮವನ್ನು ಜಿಲ್ಲೆಯ ೫ ತಾಲೂಕು ಕೇಂದ್ರಗಳಲ್ಲಿ ಆಯೋಜಿಸಲಾಗುತ್ತಿದೆ.

ನಾಗರಿಕರಿಗೆ ಬ್ಯಾಂಕ್ ವತಿಯಿಂದ ೧ ಲಕ್ಷದಿಂದ ೧೦ ಲಕ್ಷದವರೆಗೆ ಯಾವುದೇ ಜಾಮೀನುದಾರರಿಲ್ಲದೆ ಸಾಲವನ್ನು ಮಂಜೂರು ಮಾಡಿಕೊಡಲಾಗುತ್ತದೆ. ಕೆಲವೇ ದಾಖಲಾತಿಗಳನ್ನು ಪಡೆದು ಗ್ರಾಹಕರಿಗೆ ನಿಗದಿತ ದಿನಾಂಕದ ಒಳಗೆ ಸಾಲ ಮಂಜೂರು ಮಾಡಲು ಬ್ಯಾಂಕ್‌ನ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಲಾಗಿದೆ. ಸಾಲ ಪಡೆಯುವ ಫಲಾನುಭವಿಗಳು ನಿಗಧಿತ ಸಮಯದಲ್ಲಿ ಸಾಲವನ್ನು ಮರುಪಾವತಿಸಿ ತಮ್ಮ ಆರ್ಥಿಕ ಅಭಿವೃದ್ಧಿಯನ್ನು ಕಂಡುಕೊಳ್ಳಬೇಕು. ಈ ನಿಟ್ಟಿನಲ್ಲಿ ಬ್ಯಾಂಕ್ ಗ್ರಾಹಕರ ಬಳಿಗೆ ತೆರಳುತ್ತಿದೆ. ಬಡ ಜನತೆ ಈ ಸಾಲ ಯೋಜನೆಯ ಪ್ರಯೋಜನ ಹೆಚ್ಚಾಗಿ ಪಡೆಯಬೇಕು. ಆರ್ಥಿಕವಾಗಿ ಸದೃಢವಾಗಬೇಕು ಎಂಬ ಮೂಲ ಪಡೆಯುವ ಸಲುವಾಗಿ ಇಂತಹ ಬೃಹತ್ ಕಾರ್ಯಕ್ರಮವನ್ನು ಜಿಲ್ಲೆಯ ೫ ತಾಲೂಕು ಕೇಂದ್ರಗಳಲ್ಲಿ ಆಯೋಜಿಸಲಾಗುತ್ತಿದೆ.

ನಾಗರಿಕರಿಗೆ ಬ್ಯಾಂಕ್ ವತಿಯಿಂದ ೧ ಲಕ್ಷದಿಂದ ೧೦ ಲಕ್ಷದವರೆಗೆ ಯಾವುದೇ ಜಾಮೀನುದಾರರಿಲ್ಲದೆ ಸಾಲವನ್ನು ಮಂಜೂರು ಮಾಡಿಕೊಡಲಾಗುತ್ತದೆ. ಕೆಲವೇ ದಾಖಲಾತಿಗಳನ್ನು ಪಡೆದು ಗ್ರಾಹಕರಿಗೆ ನಿಗದಿತ ದಿನಾಂಕದ ಒಳಗೆ ಸಾಲ ಮಂಜೂರು ಮಾಡಲು ಬ್ಯಾಂಕ್‌ನ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಲಾಗಿದೆ. ಸಾಲ ಪಡೆಯುವ ಫಲಾನುಭವಿಗಳು ನಿಗಧಿತ ಸಮಯದಲ್ಲಿ ಸಾಲವನ್ನು ಮರುಪಾವತಿಸಿ ತಮ್ಮ ಆರ್ಥಿಕ ಅಭಿವೃದ್ಧಿಯನ್ನು ಕಂಡುಕೊಳ್ಳಬೇಕು. ಈ ನಿಟ್ಟಿನಲ್ಲಿ ಬ್ಯಾಂಕ್ ಗ್ರಾಹಕರ ಬಳಿಗೆ ತೆರಳುತ್ತಿದೆ. ಬಡ ಜನತೆ ಈ ಸಾಲ ಯೋಜನೆಯ ಪ್ರಯೋಜನ ಹೆಚ್ಚಾಗಿ ಪಡೆಯಬೇಕು. ಆರ್ಥಿಕವಾಗಿ ಸದೃಢವಾಗಬೇಕು ಎಂಬ ಮೂಲ ಸಾಲ ಪಡೆಯುವ ಗ್ರಾಹಕರು ಸಾಲ ಪಡೆಯುವ ವೇಳೆ ಇರುವ ಆಸಕ್ತಿಯನ್ನು ಸಾಲ ಮರುಪಾವತಿಸುವ ಸಮಯದವರೆಗೂ ಕಾಪಾಡಿಕೊಳ್ಳಬೇಕು ನಿಗದಿತ ಯೋಜನೆಗಷ್ಟೆ ಸಾಲವನ್ನು ಪಡೆಯಬೇಕು. ಇದರಿಂದ ಆರ್ಥಿಕ ಅಭಿವೃದ್ದಿ ಖಂಡಿತಾ ಸಾಧ್ಯವಿದೆ ಎಂದರು. ಈ ವೇಳೆ ಬ್ಯಾಂಕ್ ವತಿಯಿಂದ ಇವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಿ, ಗೌರವಿಸಲಾಯಿತು.

ಮಡಿಕೇರಿ ಸಹಾಯಕ ವ್ಯವಸ್ಥಾಪಕ ಹೆಚ್.ಎಂ.ಮನು ಪ್ರಾಸ್ತವಿಕವಾಗಿ ಮಾತನಾಡಿ ಮುದ್ರಾ ಸಾಲ ಯೋಜನೆಯ ವಿವರಗಳನ್ನು ಹಾಗೂ ನಿಯಮಗಳನ್ನು ಗ್ರಾಹಕರಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಶಾಖಾ ವ್ಯವಸ್ಥಾಪಕ ಲೋಹಿತ್ ಹೆಚ್.ಕೆ. ಗೋಣಿಕೊಪ್ಪ ಶಾಖಾ ವ್ಯವಸ್ಥಾಪಕ ಬಿ.ವಿ.ಸಚೀನ್,ಬಿ.ಶೆಟ್ಟಿಗೇರಿ ಶಾಖಾ ವ್ಯವಸ್ಥಾಪಕ ಹರೀಶ್ ಮಡಿಕೇರಿ ಸಹಾಯಕ ವ್ಯವಸ್ಥಾಪಕ ರಾಜೇಶ್ ಸೇರಿದಂತೆ ಬ್ಯಾಂಕಿನ ಪ್ರಮುಖರಾದ ಸಜಿತ್, ದೀಕ್ಷಿತ್, ಮಂಜುಳ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು. ತಾಲೂಕಿನ ವಿವಿಧ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು. ಗ್ರಾಹಕರಿಗೆ ಸ್ಥಳದಲ್ಲಿಯೇ ಖಾತೆ ತೆರೆಯುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಾಲದ ಅರ್ಜಿಗಳನ್ನು ಗ್ರಾಹಕರಿಂದ ಪಡೆಯಲಾಯಿತು.ಸಾಯಿ ಶಂಕರ್ ಶಾಲೆಯ ಪ್ರಾಂಶುಪಾಲೆÀ ಗೀತಾನಾಯ್ಡು ಸ್ವಾಗತಿಸಿ, ವಂದಿಸಿದರು.