ಮುಳ್ಳೂರು, ನ. ೨೩: ಸಮೀಪದ ಶನಿವಾರಸಂತೆ ಬ್ರೆöÊಟ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಕ್ಕಳ ಸಂತೆ ಆಯೋಜನೆ ಮಾಡಲಾಯಿತು. ಮಕ್ಕಳ ಸಂತೆಯಲ್ಲಿ ಚಿಣ್ಣರು ತಮ್ಮ ತಮ್ಮ ಮನೆಯಲ್ಲಿ ಬೆಳೆದ ತರಕಾರಿ, ಸೊಪ್ಪು, ಹಣ್ಣು ಹಂಪಲನ್ನು ತಂದು ಮಾರಾಟ ಮಾಡಿದರೆ ಮತ್ತೆ ಕೆಲವು ಮಕ್ಕಳು ಪೋಷಕರ ಸಹಾಯದಿಂದ ಬೇರೆ ಕಡೆಯಿಂದ ತಂದ ತರಕಾರಿ, ಹಣ್ಣು ಹಂಪಲು,ತಿAಡಿ ತಿನಿಸು, ಆಹಾರ ಪದಾರ್ಥಗಳನ್ನು ತಂದು ಮಾರಾಟ ಮಾಡಿದರು. ಚಿಣ್ಣರ ಸಂತೆಯಲ್ಲಿ ತರಕಾರಿ, ಸೊಪ್ಪು, ಗೆಡ್ಡೆ ಗೆಣಸು, ಹಣ್ಣು ಹಂಪಲು, ತಿಂಡಿ ತಿನಿಸು ಸೇರಿದಂತೆ ಜ್ಯೂಸ್, ಪಾನಿಪೂರಿ, ಗೋಬಿ ಮಂಚೂರಿ ಮಳಿಗೆ ಮಾಡಿಕೊಂಡು ವ್ಯಾಪಾರ ಮಾಡಲಾಯಿತು. ಸಂತೆಯಲ್ಲಿ ಮಾರಾಟ ಮಾಡುವ ಬೆಲೆಗೆ ಚಿಣ್ಣರು ತಾವು ತಂದ ವಸ್ತುಗಳನ್ನು ಮಾರಾಟ ಮಾಡಿದರು. ಶಾಲೆಯ ೧ ರಿಂದ ೪ನೇ ತರಗತಿಯ ಚಿಣ್ಣರು ಸಂತೆಯಲ್ಲಿ ಪಾಲ್ಗೊಂಡು ಬೆಳಗ್ಗೆ ೧೧ ರಿಂದ ಮಧ್ಯಾಹ್ನ ೩ ಗಂಟೆ ತನಕ ಯಾವುದೇ ಧಣಿವಿಲ್ಲದೆ ಮಕ್ಕಳ ಸಂತೆಯಲ್ಲಿ ಪಾಲ್ಗೊಂಡರು.

ಮಕ್ಕಳ ಸಂತೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶನಿವಾರಸಂತೆಯ ಪತ್ರಕರ್ತೆ ನಯನತಾರ ಪ್ರಕಾಶ್ಚಂದ್ರ- ಚಿಕ್ಕಂದಿರಲ್ಲೆ ಮಕ್ಕಳಲ್ಲಿ ವ್ಯವಹಾರದ ಜ್ಞಾನ ಇದ್ದರೆ ಭವಿಷ್ಯದಲ್ಲಿ ವ್ಯಾಪಾರ, ವ್ಯವಹಾರ ನಡೆಸಲು ದಾರಿ ಸುಲಭವಾಗುತ್ತದೆ. ಈ ನಿಟ್ಟಿನಲ್ಲಿ ಬ್ರೆöÊಟ್ ಶಾಲೆಯ ಪುಟ್ಟ ವಿದ್ಯಾರ್ಥಿಗಳಿಗೆ ಮಕ್ಕಳ ಸಂತೆ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದರು.

ಶನಿವಾರಸAತೆ ಕ್ಲಸ್ಟರ್ ಸಿಆರ್‌ಪಿ ಸಿ.ಕೆ.ದಿನೇಶ್ ಮಾತನಾಡಿ-ವಿದ್ಯಾರ್ಥಿಗಳ ವ್ಯವಹಾರ ಜ್ಞಾನ ಮತ್ತು ಅನುಭವಕ್ಕೆ ಶಾಲೆಗಳಲ್ಲಿ ಆಯೋಜಿಸುವ ಮಕ್ಕಳ ಸಂತೆ ಪೂರಕ ವೇದಿಕೆಯಾಗುತ್ತದೆ. ಈ ದಿಸೆಯಲ್ಲಿ ವಿದ್ಯಾರ್ಥಿಗಳು ಪಠ್ಯ, ಕ್ರೀಡೆ ಚಟುವಟಿಕೆಯ ಜೊತೆಯಲ್ಲಿ ವ್ಯಾವಹಾರಿಕ ಅನುಭವಗಳನ್ನು ಪಡೆದುಕೊಂಡು ವ್ಯವಹಾರ ಜ್ಞಾನ ಹೊಂದುವAತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಬ್ರೆöÊಟ್ ವಿದ್ಯಾಸಂಸ್ಥೆ ಪ್ರಾಂಶುಪಾಲೆ ಚೈತ್ರ, ಕಾರ್ಯದರ್ಶಿ ಹೇಮ, ಪ್ರಮುಖರಾದ ಪ್ರಕಾಶ್‌ಚಂದ್ರ ಹಾಜರಿದ್ದರು.