ವೀರಾಜಪೇಟೆ, ನ. ೨೩: ವೀರಾಜಪೇಟೆಯಲ್ಲಿ ಖಾಸಗಿ ಬಸ್ ನಿಲ್ದಾಣ ಸಮೀಪ ಹಾಟ್ ಚಿಪ್ಸ್ ಅಂಗಡಿ ಮಾಲೀಕ ಕಾರ್ತಿಕ್ ಮೇಲೆ ಹಲ್ಲೆ ನಡೆಸಿ, ಬೆದರಿಕೆ ಒಡ್ಡಿದ ಪುರಸಭೆಯ ನೌಕರ ಸನ್ನುಕುಮಾರ್ ಎಂಬಾತನನ್ನು ವಜಾಗೊಳಿಸುವಂತೆ ಬುಧವಾರ ಪುರಸಭಾ ಅಧ್ಯಕ್ಷೆ ಶುಸ್ಮೀತಾ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ತುರ್ತುಸಭೆ ನಿರ್ಣಯ ಮಾಡಿದೆ. ನಿರ್ಣಯವನ್ನು ಜಿಲ್ಲಾಧಿಕಾರಿಗೆ ಕಳುಹಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಾಧಿಕಾರಿ ಎ. ಚಂದ್ರಕುಮಾರ್ ತಿಳಿಸಿದ್ದಾರೆ.

ತಾ. ೨೧ರ ಸಂಜೆ ಖಾಸಗಿ ಬಸ್ ನಿಲ್ದಾಣ ಸಮೀಪ ಇರುವ ಹಾಟ್ ಚಿಪ್ಸ್ ಅಂಗಡಿ ಮಾಲೀಕನ ಮೇಲೆ ಪುರಸಭೆ ಸಿಬ್ಬಂದಿ ಸನ್ನು ಕುಮಾರ್ ಪರವಾನಿಗೆ ಇಲ್ಲ ಎಂಬ ವಿಚಾರದಲ್ಲಿ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಪುರಸಭೆಯ ವಿಶೇಷ ತುರ್ತು ಸಭೆ ಕರೆಯಲಾಗಿತ್ತು.

ವೀರಾಜಪೇಟೆ, ನ. ೨೩: ವೀರಾಜಪೇಟೆಯಲ್ಲಿ ಖಾಸಗಿ ಬಸ್ ನಿಲ್ದಾಣ ಸಮೀಪ ಹಾಟ್ ಚಿಪ್ಸ್ ಅಂಗಡಿ ಮಾಲೀಕ ಕಾರ್ತಿಕ್ ಮೇಲೆ ಹಲ್ಲೆ ನಡೆಸಿ, ಬೆದರಿಕೆ ಒಡ್ಡಿದ ಪುರಸಭೆಯ ನೌಕರ ಸನ್ನುಕುಮಾರ್ ಎಂಬಾತನನ್ನು ವಜಾಗೊಳಿಸುವಂತೆ ಬುಧವಾರ ಪುರಸಭಾ ಅಧ್ಯಕ್ಷೆ ಶುಸ್ಮೀತಾ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ತುರ್ತುಸಭೆ ನಿರ್ಣಯ ಮಾಡಿದೆ. ನಿರ್ಣಯವನ್ನು ಜಿಲ್ಲಾಧಿಕಾರಿಗೆ ಕಳುಹಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಾಧಿಕಾರಿ ಎ. ಚಂದ್ರಕುಮಾರ್ ತಿಳಿಸಿದ್ದಾರೆ.

ತಾ. ೨೧ರ ಸಂಜೆ ಖಾಸಗಿ ಬಸ್ ನಿಲ್ದಾಣ ಸಮೀಪ ಇರುವ ಹಾಟ್ ಚಿಪ್ಸ್ ಅಂಗಡಿ ಮಾಲೀಕನ ಮೇಲೆ ಪುರಸಭೆ ಸಿಬ್ಬಂದಿ ಸನ್ನು ಕುಮಾರ್ ಪರವಾನಿಗೆ ಇಲ್ಲ ಎಂಬ ವಿಚಾರದಲ್ಲಿ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಪುರಸಭೆಯ ವಿಶೇಷ ತುರ್ತು ಸಭೆ ಕರೆಯಲಾಗಿತ್ತು. ತರಾಟೆಗೆ ತೆಗೆದುಕೊಂಡರು.

ಪಟ್ಟಡ ರಂಜಿ ಪೂಣಚ್ಚ ಮಾತನಾಡಿ ಸನ್ನು ಕುಮಾರ್ ವರ್ತಕನ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ಈ ರೀತಿ ವರ್ತಿಸಲು ಆತನಿಗೆ ಅಧಿಕಾರ ನೀಡಿದ್ದು ಯಾರು, ಈತನ ದುವರ್ತನೆ ಮೇರೆ ಮೀರಿದ್ದು ಹಲವಾರು ಈ ರೀತಿಯ ಪ್ರಸಂಗ ಈತನಿಂದ ನಡೆದಿದೆ. ಈತನನ್ನು ವಜಾಗೊಳಿಸುವುದೇ ಸೂಕ್ತ ಎಂದರು.

ಸದಸ್ಯ ಮಹಮ್ಮದ್ ರಾಫಿ ಮಾತನಾಡಿ, ತಾ. ೨೧ ರಂದು ನಡೆದ ಘಟನೆಯಿಂದ ಪುರಸಭೆಯ ಮಾನ ಹರಾಜಾಗಿದೆ. ಕಾರ್ತಿಕ್ ಮುಗ್ಧ ವರ್ತಕನಾಗಿದ್ದು, ಆತನ ಮೇಲೆ ಹಲ್ಲೆ ಮಾಡಿರುವುದು ನ್ಯಾಯೋಚಿತವಲ್ಲ. ಆತನಿಗೆ ನಾವು ನ್ಯಾಂiÀi ಒದಗಿಸಬೇಕು. ಸನ್ನುರಂತಹ ಸಿಬ್ಬಂದಿ ನಮಗೆ ಅಗತ್ಯವಿಲ್ಲ; ಆತನನ್ನು ತಕ್ಷಣ ವಜಾಗೊಳಿಸಿ ಎಂದರು.

ಇದೇ ವಿಚಾರವಾಗಿ ಸದಸ್ಯ ಮತ್ತೀನ್ ಮಾತನಾಡಿ, ಯಾರೇ ಆಗಿದ್ದರೂ ಈ ರೀತಿ ವರ್ತಿಸದೆ ಇಂತಹ ವಿಚಾರಗಳಲ್ಲಿ ಮುಖ್ಯಾಧಿಕಾರಿಗೆ ಅಥವಾ ಆಹಾರ ಸುರಕ್ಷತಾ ಅಧಿಕಾರಿಗೆ ದೂರು ನೀಡವಂತೆ ಸÀಲಹೆ ನೀಡಿದರು.

ಈ ಸಭೆ ಉದ್ದೇಶದ ಬಗ್ಗೆ ಸ್ಪಷ್ಟೀಕರಣ ನೀಡಿದ ಅಭಿಯಂತರ ಹೇಮಕುಮಾರ್, ಸನ್ನು ಕುಮಾರ್ ಎನ್ನುವ ಸಿಬ್ಬಂದಿಯನ್ನು ಅಂದಿನ ಪ.ಪಂ. ಸಭೆಯ ನಿರ್ಣಯದಂತೆ ನೌಕರಿಗೆ ತೆಗೆದುಕೊಂಡಿದ್ದು, ಇಂದು ಆತನ ಮೇಲೆ ಕ್ರಮಕ್ಕೆ ಇಂದಿನ ಪುರಸಭೆ ಸದಸ್ಯರ ನಿರ್ಣಯ ಅಗತ್ಯ ಇದೆ ಎಂದು ತಿಳಿಸಿದರು.

ಘಟನೆ ಕುರಿತು ಸದಸ್ಯರಾದ ಸಚಿನ್, ರಾಜೇಶ್, ಆಶಾ ಸುಬ್ಬಯ್ಯ, ಸುನೀತಾ, ರಜನಿಕಾಂತ್ ಮತ್ತಿತರರು ಮಾತನಾಡಿ ಸಿಬ್ಬಂದಿಯನ್ನು ತಕ್ಷಣ ವಜಾಗೊಳಿಸಲು ಆಗ್ರಹಿಸಿದರು. ಅಂತಿಮವಾಗಿ ವಜಾಗೊಳಿಸುವಂತೆ ನಿರ್ಣಯ ಕೈಗೊಳ್ಳಲಾಯಿತು.