*ಗೋಣಿಕೊಪ್ಪ, ಅ. ೩: ಪೌರಾಣಿಕ ಹಿನ್ನೆಲೆ, ನವದುರ್ಗಿಯ ಅವತಾರಗಳ ನೃತ್ಯ, ಸ್ಯಾಂಡಲ್‌ವುಡ್, ಹಾಲಿವುಡ್ ಗೀತೆಗಳಿಗೆ ಹೆಜ್ಜೆ, ಡಿಜೆ ನೈಟ್ಸ್, ಫ್ಯಾಷನ್ ಶೋ ಯುವ ದಸರಾದಲ್ಲಿ ಯುವ ಪಡೆಯನ್ನು ಆಕರ್ಷಿಸಿತು.

ಪ್ರಾಥಮಿಕ ಶಾಲಾ ಮೈದಾನದಲ್ಲಿ ನಿರ್ಮಾಣವಾಗಿರುವ ಕಾವೇರಿ ಕಲಾ ವೇದಿಕೆಯಲ್ಲಿ ೪೪ನೇ ದಸರಾ ಹಿನ್ನೆಲೆ ಯುವ ದಸರಾ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ನೃತ್ಯ ಸ್ಪರ್ಧೆಯಾಗಿ ನಾಟ್ಯಾಂಜಲಿ ವೀರಾಜಪೇಟೆ, ರಿಫ್ಲೆಕ್ಷನ್ ಡ್ಯಾನ್ಸ್ ಟೀಮ್, ಟೀಮ್ ಗಾಡ್, ರಾಕಿಂಗ್ ಸ್ಟಾರ್, ರಾಕೇಶ್ ಟೀಮ್, ನೋಟಿ ಕಿಡ್ಸ್, ಕಿಂಗ್ ಆಫ್ ಕೂರ್ಗ್, ಚಾಮುಂಡೇಶ್ವರಿ ನಾಟಕ ಕಲಾಸಂಘ, ಶ್ಯಾಮಿಲಿ ಐಂಡ್ ಟೀಮ್, ಸರ್ವದೈವತಾ ಕಂಸಾಳೆ, ಶಿವಾನಿ ಟೀಮ್, ಲಯನ್ಸ್ ಪಿ.ಯು. ಕಾಲೇಜು, ಟೀಮ್ ಪಿಂಟೋಪಿಕ್, ಸ್ಟಾರ್ ಆನ್ ಗೇರ್ಲ್ಸ್, ಎಸ್.ಸಿ.ಎಂ.ಎಸ್ ಬಾಯ್ಸ್, ಜನನಿ ಟೀಮ್, ಪವನ್ ಟೀಮ್, ಮಡಿಕೇರಿ

(ಮೊದಲ ಪುಟದಿಂದ) ನೃತ್ಯ ಕಲಾ ಸ್ಟುಡಿಯೋ, ದೇಶಿಕ ರಕ್ಷಿತಾ ತಂಡಗಳು ಸೇರಿದಂತೆ ಸುಮಾರು ೧೯ ತಂಡಗಳು ನೃತ್ಯ ಪ್ರದರ್ಶಿಸಿದವು.

ಸಂಜೆ ೬ ಗಂಟೆಯ ಕಾರ್ಯಕ್ರಮದಲ್ಲಿ ಚಂದ್ರಶೇಖರ್ ಮತ್ತು ಕಲಾತಂಡದ ಸಂಗೀತ ಕಾರ್ಯಕ್ರಮ, ವೀರಾಜಪೇಟೆ ನಾಟ್ಯಮಯೂರಿ ನೃತ್ಯ ಶಾಲೆಯ ವಿದ್ಯಾರ್ಥಿನಿ ಶ್ರೀದೇವಿಯ ಭರತನಾಟ್ಯ, ಲಕ್ಷ, ಸಾನ್ವಿ, ಆಕಾಂಕ್ಷ, ಹಂಸಿನಿ, ವರ್ಷಿತ, ಶ್ರೇಯಾ ಸೋಮಣ್ಣ, ಆದಿತ್ಯ, ಸಿಂಚನ, ವಿಸ್ಮಿತ, ಪೂಣಚ್ಚ ಅವರುಗಳು ಸಾಂಪ್ರ‍್ರದಾಯಿಕ ನೃತ್ಯ, ವೀರಾಜಪೇಟೆ ಇಂಟೋಫೀಸ್À ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮಗಳು ನಡೆದವು.

ಕಾವೇರಿ ದಸರಾ ಸಮಿತಿಯ ಅಧ್ಯಕ್ಷ ಬಿ.ಎನ್. ಪ್ರಕಾಶ್ ಅಧ್ಯಕ್ಷತೆಯಲ್ಲಿ ೬ನೇ ದಿನದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಸಮಿತಿ ಕಾರ್ಯಾಧ್ಯಕ್ಷ ಸಿ.ಕೆ. ಬೋಪಣ್ಣ, ರಾಜ್ಯ ಮುಖ್ಯ ವಿದ್ಯುತ್ ಪರಿವೀಕ್ಷಕ ಇಂಧನ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ತೀತಿರ ಅಪ್ಪಚ್ಚು, ಜೆಸಿಐ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಸಿದ್ದಲಿಂಗಪ್ಪ, ಲೋಪಮುದ್ರ ಆಸ್ಪತ್ರೆಯ ವೈಧ್ಯಾಧಿಕಾರಿ ಡಾಕ್ಟರ್ ಅಮೃತ್ ನಾಣಯ್ಯ, ವೀರಾಜಪೇಟೆ ತಾಲೂಕು ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಸೋಮೆಯಂಡ ಕವನ್ ಕಾರ್ಯಪ್ಪ, ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ತಾಲೂಕು ಪೊಲೀಸ್ ಉಪಾಧೀಕ್ಷಕ ನಿರಂಜನ್ ದಾಸ್ ಅರಸ್, ಕಾವೇರಿ ದಸರಾ ಸಮಿತಿ ಉಪಾಧ್ಯಕ್ಷರಾದ ಕೆ. ರಾಜೇಶ್, ಪಿ.ಎಂ. ಹಕೀಮ್, ಗ್ರಾ.ಪಂ. ಸದಸ್ಯರಾದ ಅಫ್ಝಲ್, ರತಿ ಅಚ್ಚಪ್ಪ, ಮಾಜಿ ಜಿ.ಪಂ. ಸದಸ್ಯ ಬಾನಂಡ ಪ್ರಥ್ಯು, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಪರಶುರಾಮ್ ಇದ್ದರು.