ಗೋಣಿಕೊಪ್ಪಲು, ಅ. ೩: ಕಳೆದ ಕೆಲವು ವರ್ಷಗಳಿಂದ ಯಾವುದೇ ಮನೋರಂಜನ ಕಾರ್ಯಕ್ರಮವಿಲ್ಲದೆ ಕಳೆಗುಂದಿದ್ದ ವಾಣಿಜ್ಯ ನಗರ ಗೋಣಿಕೊಪ್ಪ ಇದೀಗ ವಿದ್ಯುತ್ ದೀಪಾಲಂಕಾರದಿAದ ಕಂಗೊಳಿ ಸುತ್ತಿದ್ದು ನಗರಕ್ಕೆ ಆಗಮಿಸುವ ಹಲವು ದಿಕ್ಕುಗಳಲ್ಲಿ ದಸರಾ ಕಾರ್ಯಕ್ರಮಕ್ಕೆ ಸ್ವಾಗತ ಕೋರುವ ಕಮಾನುಗಳು ಪ್ರವಾಸಿಗರನ್ನು ಸ್ವಾಗತಿಸುತ್ತಿವೆ. ನಗರದ ಎರಡು ಬದಿಯಲ್ಲಿ ಲೈಟಿಂಗ್ಸ್ಗಳು ಅಳವಡಿಸಿರುವುದರಿಂದ ನಗರವು ಸಂಜೆಯ ವೇಳೆಯಲ್ಲಿ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಈ ಬಾರಿ ವಿಜಯದಶಮಿ ವೈಭವಯುತ ವಾಗಿ ನಡೆಯುವುದು ನಿಶ್ಚಿತವಾಗಿದೆ.

ನವರಾತ್ರಿ ಅಂಗವಾಗಿ ಪ್ರತಿ ದಿನ ನಡೆದ ವಿವಿಧ ಕಾರ್ಯಕ್ರಮಗಳಿಗೆ ಉತ್ತಮ ವೇದಿಕೆ ನಿರ್ಮಾಣ ಗೊಂಡಿದ್ದು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಜನಸಾಗರವೇ ಹರಿದು ಬರುತ್ತಿದೆ. ಶಾಲಾ ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಿಸಿರುವ ಕಾವೇರಿ ದಸರಾ ಸಮಿತಿಯು ನಾಗರಿಕರಿಗೆ ಆಸೀನರಾಗಲು ಎರಡು ಸಾವಿರ ಕುರ್ಚಿಗಳನ್ನು ವ್ಯವಸ್ಥೆ ಮಾಡಲಾಗಿದೆ. ಮೈದಾನದ

(ಮೊದಲ ಪುಟದಿಂದ) ಸುತ್ತಲು ವಿದ್ಯುತ್ ದೀಪ ಅಳವಡಿಸಲಾಗಿದೆ. ವಿಜಯ ದಶಮಿಯಂದು ಮತ್ತಷ್ಟು ಆಸನ ಕಲ್ಪಿಸಲಾಗುತ್ತದೆ.

ನಗರದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದ್ದು ಗೋಣಿಕೊಪ್ಪಲುವಿನ ಶ್ರೀ ಕಾವೇರಿ ದಸರಾ ಸಮಿತಿಯ ೪೪ನೇ ವರ್ಷದ ಅಧ್ಯಕ್ಷರಾಗಿ ಮೊದಲ ಬಾರಿಗೆ ಆಯ್ಕೆಯಾಗಿರುವ ಬಿ.ಎನ್. ಪ್ರಕಾಶ್ ತಂಡ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದೆ. ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಕಾರ್ಯಕ್ರಮದ ಯಶಸ್ವಿಗೆ ಸಮಿತಿಯ ಕಾರ್ಯಾಧ್ಯಕ್ಷ ಸಿ.ಕೆ. ಬೋಪಣ್ಣ ಈಗಾಗಲೇ ಶಾಸಕರ ಸಮ್ಮುಖದಲ್ಲಿ ರಾಜ್ಯಮಂತ್ರಿ ಮಂಡಲದ ಸಚಿವರನ್ನು ದಸರಾ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು ಬಹುತೇಕ ರಾಜ್ಯ ಸಚಿವರು ಗೋಣಿಕೊಪ್ಪ ದಸರಾ ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆ ಇದೆ. ಜೊತೆಗೆ ಲಕ್ಷಾಂತರ ಜನ ಈ ಬಾರಿ ದಸರೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ.

ನಗರದಲ್ಲಿ ವಾಣಿಜ್ಯ ಮಳಿಗೆಗಳು ವಿದ್ಯುತ್ ದೀಪಾಲಾಂಕೃತಗಳಿAದ ಕಂಗೊಳಿಸುತ್ತಿದೆ. ಉತ್ತಮ ಲೈಟಿಂಗ್ಸ್ಗಾಗಿ ವರ್ತಕರಿಗೆ ಬಹುಮಾನಗಳನ್ನು ಸಮಿತಿ ವತಿಯಿಂದ ನೀಡಲು ನಿರ್ಧಾರ ಕೈಗೊಂಡಿದ್ದು ಆಯುಧ ಪೂಜಾ ದಿನದಂದು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಸುನೀಲ್ ಮಾದಪ್ಪ ಸಮ್ಮುಖದಲ್ಲಿ ದಸರಾ ಸಮಿತಿಯ ಪದಾಧಿಕಾರಿಗಳು ನಗರ ಪ್ರದಕ್ಷಿಣೆ ನಡೆಸಿ ಉತ್ತಮ ಲೈಟಿಂಗ್ಸ್ಗೆ ಬಹುಮಾನ ನೀಡುವ ನಿರ್ಧಾರ ಪ್ರಕಟಿಸಲಿದ್ದಾರೆ. ನವರಾತ್ರಿಯಂದು ಪ್ರಮುಖ ಆಕರ್ಷಣೆಯಾದ ಸ್ತಬ್ಧಚಿತ್ರ ಮೆರವಣಿಗೆಯನ್ನು ದಸರಾ ನಾಡ ಹಬ್ಬ ಸಮಿತಿಯೊಂದಿಗೆ ಆರ್‌ಎಂಸಿಯಿAದ ಮುಂಜಾನೆ ೧೦ ಗಂಟೆಗೆ ಆರಂಭ ಮಾಡಲು ಸಮಿತಿಯು ಈಗಾಗಲೇ ನಿರ್ಧಾರ ಕೈಗೊಂಡಿದೆ.

ಸಂಜೆ ೮ ಗಂಟೆಯ ವೇಳೆ ದಶಮಂಟಪಗಳು ಉಮಾಮಹೇಶ್ವರಿ ದೇವಾಲಯದಿಂದ ಶೋಭಾಯಾತ್ರೆ ಆರಂಭಿಸಲು ತಯಾರಿ ನಡೆಸಿವೆ. ನಗರದಲ್ಲಿ ಹೂವಿನ ವ್ಯಾಪಾರ ಸೇರಿದಂತೆ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಚೇತರಿಕೆ ಕಂಡಿದ್ದು ಜನರು ಹೆಚ್ಚಾಗಿ ನಗರಕ್ಕೆ ಆಗಮಿಸುತ್ತಿದ್ದಾರೆ. ಪಟ್ಟಣದಲ್ಲಿ ವಿದ್ಯುತ್ ಕಂಬಗಳಲ್ಲಿರುವ ಲೈನ್‌ಗಳನ್ನು ಮುಂಜಾಗ್ರತ ಕ್ರಮವಾಗಿ ಎತ್ತರಿಸಲಾಗಿದೆ. ನಗರದ ಶುಚಿತ್ವ ಕಾಪಾಡಲು ಪಂಚಾಯಿತಿ ಪೌರಕಾರ್ಮಿಕರು ಹಗಲಿರುಳು ಶ್ರಮಿಸುತ್ತಿದ್ದಾರೆ. ಆಯುಧ ಪೂಜಾ ದಿನದಂದು (ಇಂದು) ಆಟೋಚಾಲಕರ ಮಾಲೀಕರ ಹಾಗೂ ವಾಹನ ಚಾಲಕರ ಮಾಲೀಕರ ಸಂಘದ ವತಿಯಿಂದ ಬಸ್‌ನಿಲ್ದಾಣದಲ್ಲಿ ಗ್ರೀಸ್ ಕಂಬ ಹತ್ತುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ನಾಗರಹೊಳೆ ಅಮ್ಮಾಳಮ್ಮ ಬುಡಕಟ್ಟು ನೃತ್ಯ ತಂಡದಿAದ ನಗರದ ಬಸ್ ನಿಲ್ದಾಣದಲ್ಲಿ ನೃತ್ಯ ಪ್ರದರ್ಶನ ಏರ್ಪಡಿಸಲಾಗಿದೆ.

ರಾತ್ರಿ ೯ ಗಂಟೆಗೆ ಬಸ್ ನಿಲ್ದಾಣವನ್ನು ರಸಮಂಜರಿ ಕಾರ್ಯಕ್ರಮವು ನಡೆಯಲಿದೆ. ಮಾರ್ಕೆಟ್ ಬಳಿಯ ನವಚೇತನ ದಸರಾ ಸಮಿತಿಯ ಆಯುಧ ಪೂಜಾ ಅಂಗವಾಗಿ ಬೃಹತ್ ಪ್ರಮಾಣದಲ್ಲಿ ಅನ್ನ ಸಂತರ್ಪಣೆಯನ್ನು ಹಮ್ಮಿಕೊಂಡಿದೆ. ಟ್ರಾಫಿಕ್ ವ್ಯವಸ್ಥೆಯನ್ನು ಸುಧಾರಿಸಲು ಡಿವೈಎಸ್ಪಿ ನೇತೃತ್ವದಲ್ಲಿ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ನಗರಕ್ಕೆ ಆಗಮಿಸಿದ್ದಾರೆ. ಪಟ್ಟಣದ ಮುಖ್ಯ ರಸ್ತೆ ಸೇರಿದಂತೆ ಇನ್ನಿತರ ರಸ್ತೆಗಳಲ್ಲಿಯೂ ಅಲಂಕಾರಿಕಾ ವಿದ್ಯುತ್ ದೀಪಗಳನ್ನು ಅಳವಡಿಸಿ ಶೃಂಗಾರ ಮಾಡಲಾಗಿದೆ. -ಹೆಚ್.ಕೆ. ಜಗದೀಶ್