ಗೋಣಿಕೊಪ್ಪಲು, ಸೆ.೨೨ : ಬಾಳೆಲೆ ಹೋಬಳಿಯ ನಿಟ್ಟೂರು ಕಾರ್ಮಾಡು ವ್ಯಾಪ್ತಿಯ ಶ್ರೀ ಕಾಲಬೈರವ ದೇವಸ್ಥಾನದ ಆವರಣದಲ್ಲಿ ಅಳವಡಿಸಲಾದ ೫೦ ಸಾವಿರ ಮೌಲ್ಯದ ನಾಲ್ಕು ಗಂಟೆಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಮುಂಜಾನೆ ಎಂದಿನAತೆ ಅರ್ಚಕರು ದೇವಾಲಯದ ಆವರಣಕ್ಕೆ ಆಗಮಿಸಿದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರು, ಪದಾಧಿಕಾರಿಗಳು ನಿಟ್ಟೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಸ್ಥಳೀಯ ಗ್ರಾಮಸ್ಥರು ದೇವಾಲಯಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ನಂತರ ಪೊನ್ನಂಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಸ್ಥಳಕ್ಕೆ ತೆರಳಿದ ಪೊನ್ನಂಪೇಟೆ ಠಾಣಾಧಿಕಾರಿ ಡಿ.ಕುಮಾರ್ ಹಾಗೂ ತಂಡ ಸ್ಥಳ ಪರಿಶೀಲನೆ ನಡೆಸಿದರು. ಮಡಿಕೇರಿಯಿಂದ ಶ್ವಾನದಳವನ್ನು ಕರೆಸಿ ಪತ್ತೆ ಕಾರ್ಯಕ್ಕೆ ಚುರುಕು ನೀಡಿದ್ದಾರೆ. ಶ್ವಾನವು ದೇವಾಲಯದ ಸುತ್ತಲಿನ ಪ್ರದೇಶಕ್ಕೆ ತೆರಳಿ ಕಳ್ಳರ ಜಾಡಿನ ಬಗ್ಗೆ ಸುಳಿವು ನೀಡಿದೆ. ಜಿಲ್ಲೆಯ ಕೆಲವೆಡೆ ದೇವಸ್ಥಾನಗಳಲ್ಲಿ ಅಳವಡಿಸಿರುವ ಗÀಂಟೆಗಳನ್ನು ರಾತ್ರಿಯ ವೇಳೆ ಕಳ್ಳತನ ಮಾಡುತ್ತಿರುವ ಬಗ್ಗೆ ವರದಿಗಳು ಕೇಳಿ ಬಂದಿವೆ. ಕಳ್ಳರನ್ನು ಬಂಧಿಸುವAತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.