‘ಪೇ ಸಿಎಂ' ಪೋಸ್ಟರ್ ಹಾಕಿದವರ ವಿರುದ್ಧ ಎಫ್‌ಐಆರ್

ಬೆಂಗಳೂರು, ಸೆ. ೨೧: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮುಖವನ್ನು ಹೊಂದಿರುವ ಪೇ ಸಿಎಂ ಪೋಸ್ಟರ್‌ಗಳನ್ನು ನಗರದ ಹಲವು ಕಡೆ ಅಂಟಿಸಲಾಗಿದ್ದು, ಇದರಿಂದ ಸಿಎಂ ಬೊಮ್ಮಾಯಿ ತೀವ್ರ ಆಕ್ರೋಶಗೊಂಡಿದ್ದು, ಇದರ ಹಿಂದೆ ಇರುವವರ ವಿರುದ್ಧ ಕೇಸ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಪೇ ಸಿಎಂ ಪೋಸ್ಟರ್ ಅಂಟಿಸಿದವರ ಪತ್ತೆಗೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಕೇಂದ್ರ ವಿಭಾಗದ ಪೊಲೀಸರು ಈಗಾಗಲೇ ಸಾರ್ವಜನಿಕ ಸ್ಥಳಗಳ ವಿರೂಪ ಕಾಯಿದೆಯಡಿ ಒಂದು ಪ್ರಕರಣ ದಾಖಲಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸಿ.ಹೆಚ್. ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ. ಎಲ್ಲಾ ಡಿಸಿಪಿಗಳು ತಮ್ಮ ವಿಭಾಗಗಳಲ್ಲಿ ಇಂತಹ ಪೋಸ್ಟರ್ ಗಳನ್ನು ಪರಿಶೀಲಿಸಿ ಪ್ರಕರಣ ದಾಖಲಿಸುವಂತೆ ಆಯುಕ್ತರು ಸೂಚನೆ ನೀಡಿದ್ದಾರೆ. ಪೋಸ್ಟರ್‌ಗಳಿಗೆ ಸಂಬAಧಿಸಿದAತೆ ಹೈಗ್ರೌಂಡ್ಸ್ ಪೊಲೀಸರು ಒಂದು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಮತ್ತು ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತರು (ಡಿಸಿಪಿ) ಈ ವಿಷಯವನ್ನು ಖುದ್ದಾಗಿ ಪರಿಶೀಲಿಸುತ್ತಿದ್ದಾರೆ. ಬೇರೆಡೆ ಪೋಸ್ಟರ್‌ಗಳು ಕಂಡುಬAದರೆ ಸಂಬAಧಪಟ್ಟ ಪೊಲೀಸರು ಪ್ರಕರಣ ದಾಖಲಿಸುತ್ತಾರೆ. ಪೋಸ್ಟರ್‌ಗಳು ಪತ್ತೆಯಾಗಿರುವ ಹೊಟೇಲ್‌ನ ಸಿಸಿಟಿವಿ ದೃಶ್ಯಾವಳಿಗಳನ್ನೂ ಪೊಲೀಸರು ಪರಿಶೀಲಿಸಿದ್ದಾರೆ' ಎಂದು ಆಯುಕ್ತರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಪೋಸ್ಟರ್‌ಗಳನ್ನು ಬಸ್ ನಿಲ್ದಾಣಗಳಲ್ಲಿ ಮತ್ತು ನಿರ್ಮಾಣ ಸ್ಥಳದಲ್ಲಿ ಅಂಟಿಸಲಾಗಿದೆ. ಮೇಖ್ರಿ ವೃತ್ತ, ಅರಮನೆ ರಸ್ತೆ, ಬಾಳೇಕುಂದ್ರಿ ವೃತ್ತ ಮತ್ತಿತರ ಕಡೆ ಹಾಕಲಾಗಿದ್ದ ಬಹುತೇಕ ಪೋಸ್ಟರ್‌ಗಳನ್ನು ಪೌರಕಾರ್ಮಿಕರು ಈಗಾಗಲೇ ತೆರವುಗೊಳಿಸಿದ್ದಾರೆ.

ಪೇ ಸಿಎಂ ಅಭಿಯಾನದಿಂದ ಹೆಸರು ಕೆಡಿಸಲು ಷಡ್ಯಂತ್ರ : ಸಿಎಂ ಬೊಮ್ಮಾಯಿ

ಬೆಂಗಳೂರು, ಸೆ. ೨೧: ಕಾಂಗ್ರೆಸ್ ಪೇ ಸಿಎಂ ಅಭಿಯಾನ ನನ್ನ ಮತ್ತು ರಾಜ್ಯದ ಹೆಸರು ಕೆಡಿಸಲು ನಡೆಸಿರುವ ಷಡ್ಯಂತ್ರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಪಕ್ಷ ಕಾಂಗ್ರೆಸ್ ಪೇ ಸಿಎಂ ಅಭಿಯಾನ ಕೈಗೊಂಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ ಅವರು, ಇದು ವ್ಯವಸ್ಥಿತವಾಗಿ ಕರ್ನಾಟಕ ರಾಜ್ಯ ಮತ್ತು ನನ್ನ ಹೆಸರು ಕೆಡಿಸಲು ನಡೆಸಿರುವ ಷಡ್ಯಂತ್ರ ಎಂದಿದ್ದಾರೆ. ಈ ಸಂಬAಧ ಸಂಬAಧಪಟ್ಟ ಅಧಿಕಾರಿಗಳಿಗೆ ಪ್ರಕರಣ ದಾಖಲು ಮಾಡಲು ಸೂಚಿಸಿದ್ದೇನೆ. ಆಧಾರ ರಹಿತವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನ ಮಾಡಲು ಎಲ್ಲರಿಗೂ ಬರುತ್ತದೆ. ಆದರೆ ಇದು ಸುಳ್ಳು ಎಂದು ಜನಕ್ಕೆ ತಿಳಿಯುತ್ತದೆ. ಇದಕ್ಕೆ ಯಾವ ಬೆಲೆಯೂ ಇಲ್ಲ. ಆದರೆ ರಾಜ್ಯದ ಹೆಸರು ಕೆಡಿಸುವ ಪ್ರಯತ್ನಕ್ಕೆ ಕಡಿವಾಣ ಹಾಕುವ ಪ್ರಯತ್ನ ನಮ್ಮದು ಎಂದು ಹೇಳಿದರು.

ಯುವತಿ ಜೊತೆ ಹೋಗುತ್ತಿದ್ದ ಯುವಕನ ಮೇಲೆ ಹಲ್ಲೆ

ಬೆಂಗಳೂರು, ಸೆ. ೨೧: ನಗರದ ಬಾಳೇಕುಂದ್ರಿ ವೃತ್ತದ ಬಳಿ ಮೊನ್ನೆ ಸೋಮವಾರ ತಡರಾತ್ರಿ ಹುಡುಗಿಯೊಬ್ಬಳ ಜೊತೆ ಹೋಗುತ್ತಿದ್ದ ಯುವಕನ ಮೇಲೆ ನಾಲ್ವರು ಯುವಕರ ಗುಂಪು ಹಲ್ಲೆ ನಡೆಸಿದ್ದು, ಮಹಾವೀರ್ ಜೈನ್ ರಸ್ತೆಯ (ಇನ್‌ಫೆಂಟ್ರಿ ರಸ್ತೆ) ಪೊಲೀಸ್ ಕಮಿಷನರ್ ಕಚೇರಿಯ ೩೦೦ ಮೀಟರ್ ಅಂತರದಲ್ಲಿ ಮತ್ತು ವಿಧಾನಸೌಧದಿಂದ ೧ ಕಿ.ಮೀ.ಗಿಂತಲೂ ಕಡಿಮೆ ಅಂತರದಲ್ಲಿ ಘಟನೆ ಸಂಭವಿಸಿದೆ. ದಾಳಿಕೋರರಿಂದ ಯುವಕ ಹಲ್ಲೆಗೊಳಗಾಗಿ ಗಾಯಗೊಂಡಿದ್ದಾನೆ. ಹಲ್ಲೆ ಮಾಡಲು ಮಾರಕಾಸ್ತçಗಳೊಂದಿಗೆ ಬಂದಿದ್ದ ಯುವಕರ ಪೈಕಿ ಓರ್ವ ಯುವತಿಯನ್ನು ಪ್ರೀತಿಸುತ್ತಿದ್ದ. ಆಕೆ ಮತ್ತೊಬ್ಬನನ್ನು ಪ್ರೀತಿಸುತ್ತಿರುವುದು ಕಂಡು ಬೇಸರಗೊಂಡಿದ್ದ ಹಿನ್ನೆಲೆ ನಾಲ್ವರು ಸೇರಿ ಪ್ರೇಮಿಗಳನ್ನು ಹಿಂಬಾಲಿಸಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಲ್ವರ ಬರ್ಬರ ಹತ್ಯೆ: ೮ ವರ್ಷದ ಬಳಿಕ ಆರೋಪಿ ಸೆರೆ

ಹೂಸ್ಟನ್, ಸೆ. ೨೧: ಎಂಟು ವರ್ಷಗಳ ಹಿಂದೆ ಯುನೈಟೆಡ್ ಸ್ಟೇಟ್ಸ್ನ ಹೂಸ್ಟನ್‌ನಲ್ಲಿ ತನ್ನ ಮಾಲೀಕನ ಇಡೀ ಕುಟುಂಬವನ್ನು ಕೊಂದ ವ್ಯಕ್ತಿಯನ್ನು ಬಂಧಿಸಲಾಗಿದೆ. ಹೂಸ್ಟನ್ ಕ್ರಾನಿಕಲ್ ಪ್ರಕಾರ ಚೀನಾದಿಂದ ಬಂದ ಕೆಲವೇ ಕ್ಷಣಗಳಲ್ಲಿ ಆರೋಪಿ ಫಾಂಗ್ ಲು ನನ್ನು ಸೆಪ್ಟೆಂಬರ್ ೧೧ ರಂದು ಬಂಧಿಸಲಾಯಿತು. ಪ್ರಕರಣದ ಹತ್ಯಾಕಾಂಡವು ೨೦೧೪ರ ಜನವರಿ ೩೦ರಂದು ನಡೆದಿತ್ತು. ಮಾಯೋ ಸನ್, (೫೦), ಮೆಕ್ಸಿ ಸನ (೪೯) ತಿಮೋತಿ ಸನ್ (೯) ಮತ್ತು ಟೈಟಸ್ ಸನ್ (೭) ಇವರುಗಳಿಗೆ ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು. ಬುಲೆಟ್ ಹೊಕ್ಕಿದ್ದ ನಾಲ್ವರ ಶವಗಳು ಪ್ರತ್ಯೇಕವಾಗಿ ಮಲಗುವ ಕೋಣೆಯಲ್ಲಿ ಪತ್ತೆಯಾಗಿದ್ದವು. ಈ ಪ್ರಕರಣದ ಹಿನ್ನೆಲೆಯನ್ನು ಹಾಗೂ ಹತ್ಯೆಯ ಹಿಂದಿನ ಉದ್ದೇಶವನ್ನು ಪೊಲೀಸರು ಬಹಿರಂಗಪಡಿಸಿದ್ದು, ತನ್ನ ಮಾಲೀಕ ಮಾಯೋ ಸನ್ ತನ್ನನ್ನು ಕೆಲಸದಲ್ಲಿ ಬಡ್ತಿಗೆ ಶಿಫಾರಸು ಮಾಡಲಿಲ್ಲ ಎಂದು ಆರೋಪಿ ಮಾಲೀಕನ ಇಡೀ ಕುಟುಂಬವನ್ನೇ ಹತ್ಯೆ ಮಾಡಿರುವುದು ಬಯಲಾಗಿದೆ. ಪೊಲೀಸರು ಸಲ್ಲಿಸಿದ ನ್ಯಾಯಾಲಯದ ದಾಖಲೆಗಳ ಪ್ರಕಾರ, ಫಾಂಗ್ ಕೆಲಸ ಮಾಡುತ್ತಿದ್ದ ಕಂಪನಿಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗಕ್ಕೆ ವರ್ಗಾಯಿಸಲು ಬಯಸಿದ್ದ. ಇದಕ್ಕಾಗಿ ಮಾಯೊಗೆ ತಮ್ಮ ಬಗ್ಗೆ ಉತ್ತಮ ಅಭಿಪ್ರಾಯದೊಂದಿಗೆ ಶಿಫಾರಸು ಮಾಡಲು ಕೇಳಿಕೊಂಡಿದ್ದ. ಆದರೆ ಮಯೊ ಪ್ರಮೋಷನ್ ನೀಡಲಿಲ್ಲ. ಇದೇ ಕೊಲೆಗೆ ಕಾರಣ ಎನ್ನಲಾಗಿದೆ.

ಆಂಧ್ರಪ್ರದೇಶಕ್ಕೆ ತೆರಳಿದ್ದ ಟೆಕ್ಕಿ ಸೇರಿ ಮೂವರು ಸಾವು

ಅಮರಾವತಿ, ಸೆ. ೨೧: ಆಂಧ್ರಪ್ರದೇಶದ ಚಿತ್ತೂರಿನಲ್ಲಿರುವ ಪೇಪರ್ ಪ್ಲೇಟ್ ಕಾರ್ಖಾನೆಯ ತಯಾರಿಕಾ ಘಟಕದಲ್ಲಿ ಬುಧವಾರ ನಸುಕಿನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಕಾರ್ಖಾನೆಯ ಉತ್ಪಾದನಾ ಘಟಕದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಕಾರ್ಖಾನೆಯೊಳಗೆ ಸಿಲುಕಿ ಉಸಿರುಗಟ್ಟಿ ಮೂವರು ಮೃತಪಟ್ಟಿದ್ದಾರೆ. ಮೃತರನ್ನು ಭಾಸ್ಕರ್, ದಿಲ್ಲಿ ಬಾಬು ಮತ್ತು ಬಾಲಾಜಿ ಎಂದು ಗುರುತಿಸಲಾಗಿದೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಯತ್ನಿಸಿದರು. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯ ನಂತರ ಪೊಲೀಸರು ತಿಳಿಸಿದ್ದಾರೆ. ಕಟ್ಟಡದ ಮೊದಲ ಮಹಡಿಯಲ್ಲಿ ಉತ್ಪಾದನಾ ಘಟಕವಿದ್ದರೆ, ಅದೇ ಕಟ್ಟಡದ ಎರಡನೇ ಮಹಡಿಯಲ್ಲಿ ಮಾಲೀಕ ಭಾಸ್ಕರ್ ವಾಸವಾಗಿದ್ದರು. ಮಂಗಳವಾರ ತನ್ನ ಮಗ ದಿಲ್ಲಿ ಬಾಬು ಹುಟ್ಟುಹಬ್ಬವನ್ನು ಆಚರಿಸಲೆಂದು ಮನೆಯಲ್ಲಿದ್ದ ಭಾಸ್ಕರ್, ದಿಲ್ಲಿ ಬಾಬು ಮತ್ತು ಬಾಲಾಜಿ ಬೆಂಕಿಯಲ್ಲಿ ಸಿಲುಕಿಕೊಂಡರು. ವರದಿಗಳ ಪ್ರಕಾರ, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ದಿಲ್ಲಿ ಬಾಲು ಅವರು ಮಂಗಳವಾರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲೆಂದು ಸೋಮವಾರವಷ್ಟೇ ತಮ್ಮ ಊರಾದ ಚಿತ್ತೂರಿಗೆ ತೆರಳಿದ್ದರು.