ಕುಶಾಲನಗರ, ಆ. ೧೬: ಪ್ರಸಕ್ತ ಪರಿಸ್ಥಿತಿಯಲ್ಲಿ ಪತ್ರಕರ್ತರಿಗೆ ನೀತಿ ಸಂಹಿತೆಯ ಅಗತ್ಯತೆ ಕಂಡುಬರುತ್ತಿದೆ ಎಂದು ಹಿರಿಯ ಪತ್ರಕರ್ತ ಬಿ.ಆರ್. ನಾರಾಯಣ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಕಾರ್ಯನಿರತÀ ಪತ್ರಕರ್ತರ ಸಂಘದ ‘ಮನೆಯಂಗಳ ದಲ್ಲಿ ಮನದುಂಬಿ ನಮನ’ ಕಾರ್ಯಕ್ರಮದ ಅಂಗವಾಗಿ ಕುಶಾಲ ನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿದ ಬಿ.ಆರ್. ನಾರಾಯಣ್ ಮಾತನಾಡಿ, ಪತ್ರಕರ್ತರು ಸ್ವತಃ ತಮ್ಮನ್ನು ತಾವು ತಿದ್ದಿಕೊಳ್ಳುವಂತಾಗಬೇಕು. ಸಮಾಜದ ಬದಲಾವಣೆಗೆ ನಿರಂತರ ಪ್ರಯತ್ನ ಸಾಗಬೇಕಿದೆ ಎಂದರು.

ಕಳೆದ ೬೦ ವರ್ಷಗಳ ಕಾಲ ಸುದೀರ್ಘವಾಗಿ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸಿದ ಸಂದರ್ಭದ ನೆನಪುಗಳನ್ನು ನಾರಾಯಣ್ ಮೆಲುಕು ಹಾಕಿದರು. ಕುಶಾಲನಗರ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ನಾರಾಯಣ್ ಅವರ ಮನೆಗೆ ತೆರಳಿ ದಂಪತಿಯನ್ನು ಸನ್ಮಾನಿಸಿ, ಗೌರವಿಸಿದರು. ಈ ಸಂದರ್ಭ ಸಂಘದ ರಾಷ್ಟಿçÃಯ ಸಮಿತಿ ಸದಸ್ಯರಾದ ಸುನೀಲ್ ಪೊನ್ನೆಟ್ಟಿ, ಪ್ರಮುಖರಾದ ರಘು ಹೆಬ್ಬಾಲೆ, ವನಿತಾ ಚಂದ್ರಮೋಹನ್, ಕುಡೆಕಲ್ ಗಣೇಶ್, ನಂಜುAಡ ಸ್ವಾಮಿ, ಟಿ.ಆರ್. ಪ್ರಭುದೇವ್, ಕೆ.ಜೆ. ಶಿವರಾಜ್, ಜಯಪ್ರಕಾಶ್, ಕೆ.ಎಸ್. ನಾಗೇಶ್, ಪ್ರದೀಪ್‌ಕುಮಾರ್ ಇದ್ದರು.