ಮಡಿಕೇರಿ, ಆ. ೧೬: ಪೌರಾಣಿಕ ಪ್ರಸಿದ್ಧ ತಲಕಾವೇರಿ - ಭಾಗಮಂಡಲ ಹಾಗೂ ಐತಿಹಾಸಿಕ ಹಿನ್ನೆಲೆಯ ಶ್ರೀ ಓಂಕಾರೇಶ್ವರ ದೇವಾಲಯ ಸೇರಿದಂತೆ ಜಿಲ್ಲೆಯ ೬ ಮುಜರಾಯಿ ದೇವಸ್ಥಾನಗಳು ಅರಾಜಕ ಸ್ಥಿತಿಯಲ್ಲಿದೆ. ಮುಜರಾಯಿ ಇಲಾಖೆ ಈ ದೇವಸ್ಥಾನಗಳು ಅಸ್ತಿತ್ವದಲ್ಲಿರುವುದನ್ನು ಮರೆತಂತಿದೆ.

ಕೋಟ್ಯAತರ ಜನರ ಬಾಳಿನ ನಂದಾದೀಪದAತಿರುವ ಕಾವೇರಿ ಜನ್ಮಸ್ಥಳದ ಮೂಲ ಕ್ಷೇತ್ರ ರಾಜ್ಯ ಸರಕಾರಕ್ಕೆ ಬೇಡವಾಗಿದೆಯೇ? ಮುಜರಾಯಿ ಸಚಿವೆ ಒಂದು ಬಾರಿಯೂ ಜಿಲ್ಲೆಗೆ ಬಾರದಿರುವುದೇ ಇದಕ್ಕೆ ಸಾಕ್ಷಿ. ಜೊತೆಗೆ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಕೊಡಗಿನತ್ತ ಸುಳಿಯದಿರುವುದು ಮತ್ತೊಂದು ದ್ಯೋತಕ.

ತಲಕಾವೇರಿ - ಭಾಗಮಂಡಲ ದೇವಸ್ಥಾನ ವ್ಯವಸ್ಥಾಪನಾ ಸಮಿತಿ, ಓಂಕಾರೇಶ್ವರ ಹಳೆಯ ಸಮಿತಿಗಳು ವಿಸರ್ಜನೆಗೊಂಡು, ಒಂದು ವರ್ಷವಾದರೂ ಹೊಸ ಸಮಿತಿ ರಚನೆಯಾಗದೆ ಕೇಳುವವರು ಇಲ್ಲವಾಗಿದ್ದಾರೆ. ಜೊತೆಗೆ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಯ ನಿರ್ವಾಹಣಾಧಿಕಾರಿ ಕೃಷ್ಣಪ್ಪ ಅವರನ್ನು ವರ್ಗಾಯಿಸಲಾಗಿದೆ. ಅವರ ಬದಲಿಗೆ ಮತ್ತೊಬ್ಬ ಅಧಿಕಾರಿಯನ್ನು ನೇಮಿಸದೇ ಸರಕಾರ ನಿರ್ಲಕ್ಷö್ಯ ತೋರಿದೆ.

ಮುಂದಿನ ಅಕ್ಟೋಬರ್‌ನಲ್ಲಿ ಕಾವೇರಿ ಜಾತ್ರೆ ಸಂದರ್ಭವೂ ಆಡಳಿತ ನಡೆಸುವ ಜವಾಬ್ದಾರಿಕೆ ಹೊರುವವರೆ ಇಲ್ಲದಂತೆ ಇಲಾಖೆ ಅಸಡ್ಡೆ ತೋರಿದೆ. ಓಂಕಾರೇಶ್ವರ ದೇವಾಲಯದಲ್ಲಿಯೂ ಇದೇ ಸ್ಥಿತಿ ಉಂಟಾಗಿದೆ. ಉಳಿದಂತೆ ಪಾಡಿಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ಯಾದರೂ ಅಲ್ಲಿನ ಭಕ್ತ ಜನಸಂಘ ಜವಾಬ್ದಾರಿಕೆ ಹೊತ್ತು ಕೆಲಸ ನಿರ್ವಹಿಸುತ್ತಿರುವದರಿಂದ ಅಷ್ಟೊಂದು

(ಮೊದಲ ಪುಟದಿಂದ) ತೊಡಕು ಉಂಟಾಗಿಲ್ಲ. ಅದೇ ರೀತಿ ಇರ್ಪು ಶ್ರೀ ರಾಮೇಶ್ವರ ದೇಗುಲದಲ್ಲಿಯೂ ಸಾರ್ವಜನಿಕ ಭಕ್ತರ ಸಮಿತಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇನ್ನುಳಿದಂತೆ ಪಾಲೂರು ಶ್ರೀ ಮಹಾಲಿಂಗೇಶ್ವರ ಹಾಗೂ ಪಾಲೂರು ಹರಿಶ್ಚಂದ್ರ ದೇವಾಲಯಗಳ ಆಡಳಿತ ವ್ಯವಸ್ಥೆಯ ಬಗ್ಗೆ ಯಾರು ತಲೆಕೆಡಿಸಿಕೊಂಡAತಿಲ್ಲ.

ಜಿಲ್ಲೆಯಲ್ಲಿ ತಲಕಾವೇರಿ - ಭಾಗಮಂಡಲ ಹಾಗೂ ಓಂಕಾರೇಶ್ವರ ಎರಡು ಕೂಡ ‘ಎ’ ದರ್ಜೆಯ ದೇವಸ್ಥಾನಗಳಾಗಿವೆ. ಸದ್ಯಕ್ಕೆ ಆಡಳಿತಾಧಿಕಾರಿಯಾಗಿ ಹೆಚ್ಚುವರಿ ಜಿಲ್ಲಾಧಿಕಾರಿಯವರು ಕಾರ್ಯನಿರ್ವಹಿಸುತ್ತಿದ್ದಾರೆ. ಓಂಕಾರೇಶ್ವರಕ್ಕೆ ನೂತನ ಸಮಿತಿ ರಚನೆ ಮಾಡಬೇಕೆಂದು ಆಡಳಿತಾಧಿಕಾರಿಯವರು ಸರಕಾರಕ್ಕೆ ಪತ್ರ ಬರೆದು ಹಲವು ತಿಂಗಳೇ ಕಳೆದಿದೆ. ತಲಕಾವೇರಿ - ಭಾಗಮಂಡಲ ಸಮಿತಿಗೆ ಮುಜರಾಯಿ ಇಲಾಖೆ ಇತ್ತೀಚೆಗೆ ಸಮಿತಿಯೊಂದನ್ನು ರಚಿಸಿತ್ತು. ತಲೆ ಬುಡವಿಲ್ಲದೇ ಸಮಿತಿ ರಚನೆ ಸಂದರ್ಭ ತೋರಿದ ಅಸಂಬದ್ಧತೆಯಿAದಾಗಿ ಕೆಲವರು ಇದರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದರು. ಅರ್ಚಕರನ್ನು ನೇಮಿಸುವಾಗ ಮುಜರಾಯಿ ಇಲಾಖೆ ಕಾನೂನಿನ್ವಯ ಯಾವುದೇ ಅರ್ಚಕರ ಹೆಸರನ್ನು ಸೂಚಿಸಬಾರದು. ಓರ್ವ ಅರ್ಚಕರ ನೇಮಕವೆಂದಷ್ಟೇ ತೋರಿಸಬೇಕು. ಹೊಸ ಸಮಿತಿಯೇ ಬಳಿಕ ಅರ್ಚಕರನ್ನು ಆಯ್ಕೆ ಮಾಡಿಕೊಳ್ಳುತ್ತದೆ.

ಆದರೆ, ಧಾರ್ಮಿಕ ದತ್ತಿ ಇಲಾಖೆ ಬಾಲಿಶವಾಗಿ ಆದೇಶ ಹೊರಡಿಸಿತ್ತು. ಅದರಲ್ಲಿ ಅರ್ಚಕರೊಬ್ಬರ ಹೆಸರನ್ನು ಪ್ರಸ್ತಾಪಿಸಿತು; ಆದರೆ, ಆ ವ್ಯಕ್ತಿ ಅರ್ಚಕನೆ ಅಲ್ಲ. ಒಬ್ಬ ಆಟೋ ಚಾಲಕ. ಮಾತ್ರವಲ್ಲ ಯಾವುದೇ ಧಾರ್ಮಿಕ ವಿಚಾರಗಳಲ್ಲಿ ನಿರಾಸಕ್ತನಾದ ವ್ಯಕ್ತಿ ಈತ! ಇಂತಹವರನ್ನು ಮುಜರಾಯಿ ಇಲಾಖೆ ನೇಮಕ ಮಾಡಿದೆ ಎಂದರೆ, ಆ ಇಲಾಖೆಯ ಆಡಳಿತ ಹೇಗಿರಬಹುದು ಎಂದು ಭಕ್ತಾದಿಗಳೇ ಊಹಿಸಿಕೊಳ್ಳಬಹುದು.

ಸಮಿತಿ ನೇಮಿಸುವಾಗ ಮತ್ತೊಂದು ಅಪಚಾರವಾಗಿದೆ; ಧಾರ್ಮಿಕ ದತ್ತಿ ಕಾಯ್ದೆಯನ್ವಯ ೯ ಜನ ಸಮಿತಿಯಲ್ಲಿ ಇಬ್ಬರು ಮಹಿಳೆಯರು ಇರಬೇಕು. ಆದರೆ, ಒಬ್ಬರೇ ಮಹಿಳೆಯನ್ನು ನೇಮಿಸಲಾಗಿದೆ. ಈ ಧಾರ್ಮಿಕ ದತ್ತಿ ಇಲಾಖೆಯಲ್ಲಿ ಇರುವವರು ತಲಕಾವೇರಿ ಕ್ಷೇತ್ರವನ್ನು ಯಾವುದೋ ಒಂದು ದಿಕ್ಕಿಲ್ಲದ ಕೇಂದ್ರವೆAದು ಭಾವಿಸಿದಂತಿದೆ. ಇನ್ನೊಂದೆಡೆ ಮುಜರಾಯಿ ದೇವಾಲಯಗಳನ್ನು ನಿರ್ವಹಿಸಲು ಸಂದರ್ಭಾನುಸಾರ ಸಮಸ್ಯೆಗಳನ್ನು ಬಗೆಹರಿಸಲು ಆಡಳಿತ ಸಮಿತಿಗಳನ್ನು ರಚಿಸಲು ರಾಜ್ಯಮಟ್ಟದಲ್ಲಿ ಸರಕಾರ ಒಂದು ಧಾರ್ಮಿಕ ಪರಿಷತ್‌ಅನ್ನು ರಚಿಸಿದೆ. ಈ ಪರಿಷತ್‌ನಲ್ಲಿ ಕೆಲವರನ್ನು ಕೊಡಗಿನ ದೇವಾಲಯಗಳ ಸಂಪೂರ್ಣ ಉಸ್ತುವಾರಿ ನಡೆಸಲು ನಿಯೋಜಿಸಿದೆ.

ಇವರೆಲ್ಲ ಈ ಸಮಸ್ಯೆಗಳ ಅರಿವು ಇದ್ದರೂ ಕೂಡ ಅದನ್ನು ಬಗೆಹರಿಸಲು ಪ್ರಯತ್ನ ನಡೆಸದೇ ಇರುವುದು ಸ್ಪಷ್ಟ ಗೋಚರವಾಗಿದೆ. ಇಷ್ಟೆಲ್ಲ ಸಮಸ್ಯೆಗಳು ಇದ್ದರೂ ಪರಿಹಾರ ಏನು ಎಂದು ಪ್ರಶ್ನಿಸಿದಾಗ ಅವರಲ್ಲಿ ಇದುವರೆಗೂ ನಿರ್ದಿಷ್ಟ ಉತ್ತರ ಕೇಳಿ ಬಂದಿಲ್ಲ. ಈ ನಡುವೆ ಜಿಲ್ಲೆಯ ಅಧಿಕಾರಿಗಳನ್ನು ಈ ಕುರಿತು ಪ್ರಶ್ನಿಸಿದಾಗ, ಕೆಲವೊಂದು ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿವೆ. ಇನ್ನಿತರ ಮಾಹಿತಿಗಳನ್ನು ಸರಕಾರಕ್ಕೆ ಮುಜರಾಯಿ ಇಲಾಖೆಗೆ ಬರೆದು ಗಮನಕ್ಕೆ ತರಲಾಗಿದೆ ಎಂಬ ವಿವರಣೆ ಕೇಳಿ ಬಂದಿತು.

ಇನ್ನಾದರೂ ಜಿಲ್ಲೆಯ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಕೊಡಗಿನ ಮಾತ್ರವಲ್ಲ ರಾಜ್ಯ, ರಾಷ್ಟçದ ಪುಣ್ಯಕ್ಷೇತ್ರವಾದ ತಲಕಾವೇರಿ - ಭಾಗಮಂಡಲ ಹಾಗೂ ಐತಿಹಾಸಿಕ ಕ್ಷೇತ್ರವಾದ ಓಂಕಾರೇಶ್ವರ ದೇವಾಲಯಗಳ ಕುರಿತು ಮುತುವರ್ಜಿ ವಹಿಸಲಿ. ಜಿಲ್ಲಾಡಳಿತ ಕೂಡ ಈ ಕ್ಷೇತ್ರದ ಕುರಿತು ಆದ್ಯ ಗಮನ ಕೊಡಲಿ. ನೂರಾರು ಮಂದಿ ಯಾತ್ರಾರ್ಥಿಗಳು ಈ ಕ್ಷೇತ್ರಗಳಿಗೆ ಬರುವಂತಹ ಸಂದರ್ಭಗಳಲ್ಲಿ ಕ್ಷೇತ್ರಗಳ ಪಾವಿತ್ರö್ಯತೆಯನ್ನು ಉಳಿಸುವ ಬಗ್ಗೆ ಆಸಕ್ತಿ ವಹಿಸಲಿ. ರಾಜ್ಯದ ಮುಖ್ಯಮಂತ್ರಿಗಳು ಕೂಡ ಕಾವೇರಿ ವಿವಾದದ ಕುರಿತು ಮಾತ್ರ ಮಾತನಾಡದೆ ಮೂಲಕ್ಷೇತ್ರವಾದ ತಲಕಾವೇರಿಯತ್ತ ತಿರುಗಿ ನೋಡಲಿ. ಮುಜರಾಯಿ ಸಚಿವರು ಎಲ್ಲಾ ಕಡೆ ಪ್ರವಾಸ ಕೈಗೊಳ್ಳುತ್ತಿದ್ದು, ಕೊಡಗು ಜಿಲ್ಲೆ ಇದೆ ಎಂಬುದನ್ನು ಕಣ್ಣು ಬಿಟ್ಟು ನೋಡಲಿ. ಮುಜರಾಯಿ ಆಯುಕ್ತರು ಒಮ್ಮೆಯಾದರೂ ಇತ್ತ ಪಯಣಿಸಲಿ ಎಂದು ಈ ಮೂಲಕ ಜಾಗೃತಿಗೊಳಿಸಲಾಗುತ್ತಿದೆ.

-ಜಿ. ರಾಜೇಂದ್ರ