ಮಡಿಕೇರಿ: ಕೊಡಗು ಗೌಡ ಸಮಾಜಗಳ ಒಕ್ಕೂಟ, ಕೊಡಗು ಗೌಡ ಯುವ ವೇದಿಕೆ ಹಾಗೂ ಸಮಾಜ ಸೇವಕ ಬೆಪ್ಪುರನ ಅವಿನಾಶ್ ಕೇಸರಿ ಅವರ ಸಹಕಾರದೊಂದಿಗೆ ನಗರದ ಹುತಾತ್ಮ ಸ್ವಾತಂತ್ರö್ಯ ಹೋರಾಟಗಾರ, ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡ ಅವರ ಪ್ರತಿಮೆ ಬಳಿ ಭಾರತ ಸ್ವಾತಂತ್ರö್ಯದ ಅಮೃತ ಮಹೋತ್ಸವ ಆಚರಿಸಲಾಯಿತು.

ಫೀ.ಮಾ. ಕಾರ್ಯಪ್ಪ ಹಾಗೂ ಅಪ್ಪಯ್ಯ ಗೌಡ ಅವರುಗಳ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಧ್ವಜಾರೋಹಣ ನೆರವೇರಿಸಲಾಯಿತು. ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಧ್ವಜಾರೋಹಣ ನೆರವೇರಿಸಿದರು. ಲಿಟಲ್ ಫ್ಲವರ್ ವಿದ್ಯಾ ಸಂಸ್ಥೆಯ ಪ್ರಾಂಶುಪಾಲೆ ಪರ್ಲಕೋಟಿ ಸೋನಾ ಪ್ರೀತು ಮಾರ್ಗದರ್ಶನದಲ್ಲಿ ವಿದ್ಯಾಥಿಗಳು ಅಪ್ಪಯ್ಯ ಗೌಡರ ಕುರಿತು ನಮನ ಗೀತೆ ಹಾಡಿದರೆ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯೆ ಚೊಕ್ಕಾಡಿ ಪ್ರೇಮಾ ರಾಘವಯ್ಯ, ಕೋಳಿಬೈಲು ಹರಿಣಿ ದೇಶಭಕ್ತಿಗೀತೆ ಹಾಡಿದರು. ಭಾರತ ಸೇವಾದಳದ ಜಿಲ್ಲಾ ಸಂಯೋಜಕ ರೇವಣ್ಣ, ಜಿಲ್ಲಾ ಸಮಿತಿ ನಿರ್ದೇಶಕಿ ಪುದಿಯನೆರವನ ರೇವತಿ ರಮೇಶ್, ದೈಹಿಕ ಶಿಕ್ಷಣ ಶಿಕ್ಷಕ ಸಂದೇಶ್ ಧ್ವಜಾರೋಹಣ ಕಾರ್ಯದಲ್ಲಿ ಸಹಕರಿಸಿದರು.

ಕೇಂದ್ರ ಮೀಸಲು ಪಡೆ ನಿವೃತ್ತ ಡಿಐಜಿ ಅಮೆ ಸೀತಾರಾಂ, ಸಮಾಜ ಸೇವಕ ಅವಿನಾಶ್ ಕೇಸರಿ, ನಗರ ಸಭಾ ಸದಸ್ಯೆ ಕುಟ್ಟನ ಶ್ವೇತಾ ಪ್ರಶಾಂತ್, ಗೌಡ ಸಮಾಜಗಳ ಒಕ್ಕೂಟದ ಕಾರ್ಯದರ್ಶಿ ಪೇರಿಯನ ಉದಯ, ಸಹ ಕಾರ್ಯದರ್ಶಿ ಅಂಬೆಕಲ್ ನವೀನ್ ಕುಶಾಲಪ್ಪ, ಕೊಡಗು ಗೌಡ ಸಮಾಜದ ಕಾರ್ಯದರ್ಶಿ ಕೋಳುಮುಡಿಯನ ಅನಂತ್‌ಕುಮಾರ್, ಕೊಡಗು ಗೌಡ ವಿದ್ಯಾಸಂಘದ ಕಾರ್ಯದರ್ಶಿ ಕೊಟ್ಟಕೇರಿಯನ ದಯಾನಂದ್, ನಿರ್ದೇಶಕ ತಳೂರು ದಿನೇಶ್, ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ಖಜಾಂಚಿ ನೈಯ್ಯಣಿ ಸಂಜು, ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಕ್ಕೇರ ಲಕ್ಷö್ಮಣ, ನಿರ್ದೇಶಕರುಗಳಾದ ಪುದಿಯನೆರವನ ರಿಶಿತ್ ಮಾದಯ್ಯ, ಕುಟ್ಟನ ಪ್ರಶಾಂತ್, ನಡುಮನೆ ಪವನ್, ಮೂಲೆಮಜಲು ಕನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್, ಮಾಜಿ ಸದಸ್ಯೆ ಕಡ್ಲೇರ ತುಳಸಿ ಮೋಹನ್, ಕೊಡಗು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕುಂಜಿಲನ ಮುತ್ತಮ್ಮ, ಉಪಾಧ್ಯಕ್ಷೆ ಬೈತಡ್ಕ ಜಾನಕಿ ಬೆಳ್ಯಪ್ಪ, ಪದಾಧಿಕಾರಿಗಳು, ಸಮಾಜ ಬಾಂಧವರು, ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.ವೀರಾಜಪೇಟೆ: ವೀರಾಜಪೇಟೆ ಅರಣ್ಯ ವಿಭಾಗದಲ್ಲಿ ಸ್ವಾತಂತ್ರö್ಯ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಧ್ವಜಾರೋಹಣವನ್ನು ವೀರಾಜಪೇಟೆ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಂಬಾಬು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೆಹರೂ, ವೀರಾಜಪೇಟೆ ಅರಣ್ಯ ವಿಭಾಗದ ವ್ಯವಸ್ಥಾಪಕಿ ಪಾಂಡAಡ ಅನಿತಾ, ವೀರಾಜಪೇಟೆ ಅರಣ್ಯ ವಲಯ ಅರಣ್ಯಾಧಿಕಾರಿ ಕಳ್ಳೀರ ದೇವಯ್ಯ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.ಪೊನ್ನAಪೇಟೆ: ಇಲ್ಲಿನ ಮತ್ತೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರö್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣವನ್ನು ಎಸ್‌ಡಿಎಂಸಿ ಅಧ್ಯಕ್ಷ ಪಿ.ಎಂ. ಮೂರ್ತಿ ನೆರವೇರಿಸಿದರು. ನಂತರ ಗ್ರಾಮದ ಬೀದಿಯಲ್ಲಿ ಮೆರವಣಿಗೆ ನಡೆಯಿತು.

ಈ ಸಂದರ್ಭ ಅತಿಥಿಗಳಾಗಿ ಭವ್ಯ, ಜಗನ್, ಪೋಷಕರಾದ ಸುರೇಶ, ಮಂಜು, ಕಾಕು, ಮಣಿ, ಕಾವ್ಯ, ಚಿಕ್ಕಿ, ಬೇಬಿ, ದೊಡ್ಡಮ್ಮ, ಶಾಂತಿ, ಮುಖ್ಯ ಶಿಕ್ಷಕಿ ಬಿ.ಎ. ಇಂದಿರಾ, ಶಿಕ್ಷಕಿ ಎಂ.ಟಿ. ಸುಮ, ಅಡುಗೆ ಸಿಬ್ಬಂದಿ ಮತ್ತಿತರರು ಹಾಜರಿದ್ದರು.ಶನಿವಾರಸಂತೆ: ಸಮೀಪದ ಮುಳ್ಳೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರೊö್ಯÃತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮ ಪ್ರಯುಕ್ತ ನಿವೃತ್ತ ನ್ಯಾಯಾಧೀಶ ದೇವಪ್ಪ ಧ್ವಜಾರೋಹಣ ನೆರವೇರಿಸಿದರು.

ವಿದ್ಯಾರ್ಥಿಗಳು ರಾಷ್ಟç ನಾಯಕರ ಹಾಗೂ ಸ್ವಾತಂತ್ರö್ಯ ಹೋರಾಟಗಾರರ ವೇಷಭೂಷಣಗಳನ್ನು ಧರಿಸಿ ಮಾತನಾಡಿದರು. ದೇಶಭಕ್ತಿ ಗೀತೆಗಳನ್ನು ಹಾಡಿ, ನರ್ತಿಸಿ ರಂಜಿಸಿದರು. ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದ ಭಾರತದ ಚಿತ್ರ ಹಾಗೂ ಫೋಟೋ ಬೂತ್ ಗಮನ ಸೆಳೆಯಿತು.

ಮುಖ್ಯ ಶಿಕ್ಷಕ ಸಿ.ಎಸ್. ಸತೀಶ್ ಹಾಗೂ ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಬಿಂದು ಸುರೇಶ್ ದಿನದ ಮಹತ್ವದ ಕುರಿತು ಮಾತನಾಡಿದರು. ಸದಸ್ಯರು, ನಿಡ್ತ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋಧ, ಉಪಾಧ್ಯಕ್ಷ ತೀರ್ಥಾನಂದ್, ಸದಸ್ಯ ವೆಂಕಟೇಶ್, ಶಿಕ್ಷಕಿ ನವ್ಯ ಹಾಜರಿದ್ದರು.ಚೆಯ್ಯಂಡಾಣೆ: ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ‍್ಯ ದಿನಾಚರಣೆಯನ್ನು ಆಚರಿಸಲಾಯಿತು.

ಸ್ಥಳ ದಾನಿ ಹಾಗೂ ಮಾಜಿ ಸೈನಿಕ ಚೆಯ್ಯಂಡ ಲವ ಅಪ್ಪಚ್ಚು ಧ್ವಜಾರೋಹಣ ನೆರವೇರಿಸಿದರು. ನಂತರ ಮುಖ್ಯ ಬೀದಿಗಳಲ್ಲಿ ತೆರಳಿ ಮೆರವಣಿಗೆ ನಡೆಯಿತು. ವಿದ್ಯಾರ್ಥಿಗಳಿಂದ ಭಾಷಣ, ದೇಶಭಕ್ತಿ ಗೀತೆ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಗ್ರಾಮ ಪಂಚಾಯಿತಿ ವತಿಯಿಂದ ಸಿಹಿ ವಿತರಿಸಲಾಯಿತು.

ಈ ಸಂದರ್ಭ ಎಸ್.ಡಿ.ಎಂ.ಸಿ. ಅಧ್ಯಕ್ಷೆ ರತ್ನ, ಸದಸ್ಯರು, ಪೋಷಕರು, ಮುಖ್ಯ ಶಿಕ್ಷಕಿ ಮೀನಾ ಸ್ವಾಗತಿಸಿ, ಶಿಕ್ಷಕರು ಉಪಸ್ಥಿತರಿದ್ದರು. ಶಿಕ್ಷಕಿ ದಮಯಂತಿ ವಂದಿಸಿದರು.ಶ್ರೀಮAಗಲ: ಸ್ವಾತಂತ್ರö್ಯ ದಿನಾಚರಣೆಯ ಪ್ರಯುಕ್ತ ಶ್ರೀಮಂಗಲ ನಾಡ್ ಕೊಡವ ಸಮಾಜದಲ್ಲಿ ವಿವಿಧ ಸ್ಪರ್ಧೆ ನಡೆಯಿತು. ದೇಶಭಕ್ತಿ ಗೀತೆ, ಭಾಷಣ ಮತ್ತು ನೃತ್ಯವನ್ನು ಆಯೋಜಿಸಲಾಗಿತ್ತು.

ದೇಶಭಕ್ತಿ ಗೀತೆಯಲ್ಲಿ ಪೂಜಿತ ಕೆ.ಪಿ. ಪ್ರಥಮ, ಆರಾಧನಾ ಶರ್ಮ ದ್ವಿತೀಯ ಸ್ಥಾನ ಪಡೆದರು. ತೀತಿರ ಶಾನ್ವಿ ಸಮಾಧಾನಕರ ಬಹುಮಾನ ಪಡೆದರು. ಭಾಷಣ ಸ್ಪರ್ಧೆಯಲ್ಲಿ ಅಜ್ಜಮಾಡ ಬೋಪಯ್ಯ ಪ್ರಥಮ, ಅಜ್ಜಮಾಡ ಪ್ರಾಂಜಲ್ ದ್ವಿತೀಯ ಸ್ಥಾನ ಪಡೆದರು. ಲಿಂಗರಾಜು ಸಮಾಧಾನಕರ ಬಹುಮಾನ ಪಡೆದರು.

ನೃತ್ಯ ಸ್ಪರ್ಧೆಯಲ್ಲಿ ಮಚ್ಚಮಡ ನಕ್ಷಾ ಗಂಗಮ್ಮ ಪ್ರಥಮ ಸ್ಥಾನ ಪಡೆದರು. ಗುಂಪು ನೃತ್ಯದಲ್ಲಿ ಅಜ್ಜಮಾಡ ಹಿಮಾನಿ ಮತ್ತು ಮಚ್ಚಮಡ ವಿದ್ಯಾ ಪ್ರಥಮ ಸ್ಥಾನ ಪಡೆದುಕೊಂಡರು. ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ಕಾರ್ಯಕ್ರಮವನ್ನು ಶ್ರೀಮಂಗಲ ನಾಡ್ ಕೊಡವ ಸಮಾಜದಲ್ಲಿ ಆಯೋಜಿಸಲಾಗಿತ್ತು. ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ನೀನಾ ಪೂಣಚ್ಚ, ಕೊಡವ ಸಮಾಜದ ಕಾರ್ಯದರ್ಶಿ ಮಚ್ಚಮಡ ವಿಜಯ್, ಪೊಮ್ಮಕ್ಕಡ ಕೂಟದ ಸದಸ್ಯರಾದ ಕಾಳಿಮಾಡ ಸೀಮಾ ಪ್ರಶಾಂತ್, ಚೋನಿರ ಪವಿ ರತನ್, ಅಜ್ಜಮಡ ಶರ್ಲಿ, ಅಜ್ಜಮಡ ಸ್ಮಿತಾ, ಮಚ್ಚಮಡ ಶ್ವೇತಾ ಉದಯ್ ಮತ್ತು ಇತರರು ಉಪಸ್ಥಿತರಿದ್ದರು.

ಅಧ್ಯಕ್ಷೆ ನೀನಾ ಪೂಣಚ್ಚ ಮತ್ತು ಕಾರ್ಯದರ್ಶಿ ಮಚ್ಚಮಡ ವಿಜಯ್ ಬಹುಮಾನ ವಿತರಣೆ ಮಾಡಿದರು. ಕಾಳಿಮಡ ಸೀಮಾ ಪ್ರಶಾಂತ್ ವಂದಿಸಿದರು.ಭಾಗಮAಡಲ: ಕೋರಂಗಾಲ ಜ್ಞಾನೋದಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಸ್ವಾತಂತ್ರö್ಯ ಅಮೃತ ಮಹೋತ್ಸವ ಧ್ವಜಾರೋಹಣವನ್ನು ನಿವೃತ್ತ ಮಾಜಿ ಸೈನಿಕ ತಾಪಂಡ ಎಸ್. ನಾಗೇಶ್ ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲೆ ಶ್ವೇತನ್ ಚಂಗಪ್ಪ ವಹಿಸಿದ್ದರು. ವಿದ್ಯಾರ್ಥಿಗಳಿಂದ ಭಾಷಣ, ದೇಶಭಕ್ತಿಗೀತೆ, ನೃತ್ಯ, ಛದ್ಮವೇಶ ಹಾಗೂ ವಿವಿಧ ಕಾರ್ಯಕ್ರಮಗಳು ನಡೆದವು.

ಸಭೆಯಲ್ಲಿ ಶ್ರೀ ಇಗ್ಗುತ್ತಪ್ಪ ವಿದ್ಯಾಸಂಸ್ಥೆಯ ಟ್ರಸ್ಟಿಗಳಾದ ಸಿ.ಆರ್. ಪೂವಯ್ಯ, ಸ್ಥಳ ದಾನಿಗಳಾದ ನಿಡುಬೆ ಅಪ್ಪಚ್ಚ ಉಪಸ್ಥಿತರಿದ್ದರು. ಸಹ ಶಿಕ್ಷಕಿ ಮಾದೆಯಂಡ ಪೂಜಾ ಸ್ವಾತಂತ್ರ‍್ಯೋತ್ಸವದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ವಿದ್ಯಾರ್ಥಿಗಳಿಂದ ಭಾಗಮಂಡಲದ ಮುಖ್ಯ ಬೀದಿಯಲ್ಲಿ, ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ವೀರರಿಗೆ ಜಯಘೋಷದೊಂದಿಗೆ ಪಥಸಂಚಲನ ನಡೆಯಿತು. ಶಾಲೆಯ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು. ಸಹ ಶಿಕ್ಷಕಿ ಕೆ.ಕೆ. ದೀಪಿಕಾ ನಿರೂಪಿಸಿ, ಶಿಕ್ಷಕ ಬಿ.ಬಿ. ಕಿಶೋರ್ ಕುಮಾರ್ ಸ್ವಾಗತಿಸಿದರು. ಸಂಸ್ಥೆಯ ಕಾರ್ಯದರ್ಶಿ ಸಿ.ಆರ್. ಮಿಥುನ್ ಚಂಗಪ್ಪ ವಂದಿಸಿದರು.*ಗೋಣಿಕೊಪ್ಪ: ಚೇಂಬರ್ ಆಫ್ ಕಾಮರ್ಸ್ ಗೋಣಿಕೊಪ್ಪ ಸ್ಥಾನೀಯ ಸಮಿತಿ ವತಿಯಿಂದ ಹರಿಶ್ಚಂದ್ರಪುರ ಸಂಸ್ಥೆಯ ಕಟ್ಟಡದ ಆವರಣದಲ್ಲಿ ಅಧ್ಯಕ್ಷ ಕಡೇಮಾಡ ಸುನೀಲ್ ಮಾದಪ್ಪ, ಗ್ರಾ.ಪಂ. ಅಧ್ಯಕ್ಷೆ ಚೈತ್ರಾ ಬಿ. ಚೇತನ್ ಅವರ ಅಧ್ಯಕ್ಷತೆಯಲ್ಲಿ ಧ್ವಜಾರೋಹಣ ನೆರವೇರಿತು.

ನಂತರ, ಬುಟ್ಟಿಯಂಡ ಎಂ. ಅಪ್ಪಾಜಿಯವರನ್ನು ಅವರ ಮನೆಯಲ್ಲಿ ಚೇಂಬರ್ ಆಫ್ ಕಾಮರ್ಸ್ನ ಪದಾಧಿಕಾರಿಗಳು ಗೌರವಿಸಿದರು. ಹಿರಿಯರಾದ ಕೊಳ್ಳಿಮಾಡ ಅಜಿತ್ ಅಯ್ಯಪ್ಪ, ಕರ್ನಾಟಕ ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ನಿರ್ದೇಶಕ ಕಾಡ್ಯಮಾಡ ಗಿರೀಶ್ ಗಣಪತಿ, ವೈದ್ಯರಾದ ಶಿವಪ್ಪ, ಚಂದ್ರಶೇಖರ್, ಸಂಸ್ಥೆಯ ಪದಾಧಿಕಾರಿಗಳಾದ ಬಿ.ಎನ್. ಪ್ರಕಾಶ್, ಕಿರಿಯಮಾಡ ಅರುಣ್, ತೆಕ್ಕಡ ಕಾಶಿ, ಪ್ರಭಾಕರ ನೆಲ್ಲಿತಾಯ, ರಾಜಶೇಖರ್, ನಾಸಿರ್, ಗಾಂಧಿ ದೇವಯ್ಯ, ಗಣೇಶ್ ರೈ, ಕೃಷ್ಣಪ್ಪ, ಮಳವಂಡ ಅರವಿಂದ್ ಕುಟ್ಟಪ್ಪ, ಪುರುಷೋತ್ತಮ್, ಸುಮಿ ಸುಬ್ಬಯ್ಯ, ಅನಿತ, ಧನಲಕ್ಷಿ÷್ಮ, ಮಾಜಿ ಗ್ರಾ.ಪಂ. ಅಧ್ಯಕ್ಷೆ ಹಬಿಬುನ್ನೀಸಾ ಸೇರಿದಂತೆ ಹಲವರು ಇದ್ದರು.ಮಡಿಕೇರಿ: ರೋಟರಿ ಮಡಿಕೇರಿ ವುಡ್ಸ್ ಮತ್ತು ಓಂಕಾರ್ ಬಾಯ್ಸ್ ತಂಡದ ಸಹಯೋಗದಲ್ಲಿ ಮಡಿಕೇರಿಯ ಆಂಜನೇಯ ದೇಗುಲದ ಸಮೀಪದ ಸರ್ಕಲ್‌ನಲ್ಲಿ ಸ್ವಾತಂತ್ರö್ಯ ದಿನ ಆಚರಿಲಾಯಿತು. ಧ್ವಜಾರೋಹಣವನ್ನು ರೋಟರಿ ಮಡಿಕೇರಿ ವುಡ್ಸ್ನ ಅಧ್ಯಕ್ಷ ಎಸ್.ಎಸ್. ಸಂಪತ್ ಕುಮಾರ್ ನೆರವೇರಿಸಿದರು. ಬಳಿಕ ರಾಷ್ಟçಗೀತೆ ಹಾಡಲಾಯಿತು.

ಸಂಪತ್ ಅವರು ಮಾತನಾಡಿ, ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ‘ಆಜಾದಿ ಕಾ ಅಮೃತ ಮಹೋತ್ಸವ'ವನ್ನು ಸಂಭ್ರಮಿಸೋಣ. ಆದರೆ ಈ ಸಂಭ್ರಮದಲ್ಲಿ ನಮ್ಮ ಜವಾಬ್ದಾರಿಗಳನ್ನು ಮರೆಯದೆ ನಮ್ಮನ್ನು ದೇಶ ಸೇವೆಗಾಗಿ ಸಮರ್ಪಿಸಿಕೊಳ್ಳೋಣ.

ಸ್ವಾತಂತ್ರ‍್ಯಕ್ಕಾಗಿ ಹೋರಾಟ ಮಾಡಿದ ಮಹಾನ್ ವ್ಯಕ್ತಿಗಳನ್ನು ನೆನಪಿಸಿಕೊಳ್ಳಬೇಕಾಗಿದೆ ಎಂದರು. ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಔಷಧಿ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಮತ್ತು ಕೊಡಗು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜೀವನ್ ಕುಶಾಲಪ್ಪ, ರೋಟರಿ ವುಡ್ಸ್ನ ಕಾರ್ಯದರ್ಶಿ ವಸಂತ್ ಕುಮಾರ್, ಖಜಾಂಚಿ ಕವಿತ, ಉಪಾಧ್ಯಕ್ಷೆ ಪದ್ಮ, ಸದಸ್ಯರುಗಳಾದ ಧನಂಜಯ್ ಶಾಸ್ತಿç, ಲೋಕೇಶ್ ಎ.ಕೆ, ಕಶ್ಯಪ್ ಕೆ, ರವೀಂದ್ರ, ಲೀಲಾವತಿ, ಪ್ರಮೀಳಾ ಶೆಟ್ಟಿ, ಓಂಕಾರ್ ಬಾಯ್ಸ್ ವೇದಿಕೆಯ ಹೇಮರಾಜ್, ಸಚಿನ್, ಡಾಲು, ಬಡಸಾಬ್ ಮತ್ತಿತರು ಹಾಜರಿದ್ದರು. ಕ್ಲಬ್ ಕಾರ್ಯದರ್ಶಿ ವಸಂತ್ ಕುಮಾರ್ ವಂದಿಸಿದರು. ಕ್ಲಬ್ ವತಿಯಿಂದ ಬೆಳಗ್ಗಿನ ಉಪಹಾರವನ್ನು ಆಟೋ ಚಾಲಕರಿಗೆ ವಿತರಿಸಲಾಯಿತು.ಮಡಿಕೇರಿ: ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ರಾಷ್ಟç ಧ್ವಜಾರೋಹಣ ಮಾಡಿ ಧ್ವಜ ವಂದನೆಯ ಮೂಲಕ ಶ್ರದ್ಧಾಪೂರ್ವಕವಾಗಿ ಸ್ವಾತಂತ್ರೊö್ಯÃತ್ಸವ ಆಚರಿಸಲಾಯಿತು. ಸ್ವಾತಂತ್ರ‍್ಯ ದಿನಾಚರಣೆಯಲ್ಲಿ ಜಿಲ್ಲಾ ಪೊಲೀಸ್ ಕಚೇರಿ, ಡಿಎಆರ್ ಮತ್ತು ಇತರ ಘಟಕಗಳ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.ಮಡಿಕೇರಿ: ಇಲ್ಲಿನ ಜಲಮಂಡಳಿ ಕಚೇರಿ ಆವರಣದಲ್ಲಿ ಅಜಯ್ ಆರ್.ವಿ. ಸಹಾಯಕ ಕಾರ್ಯಪಾಲಕ ಅಭಿಯಂತರು ಧ್ವಜಾರೋಹಣ ಮಾಡಿ, ಧ್ವಜ ವಂದನೆಯ ಮೂಲಕ ಶ್ರದ್ಧಾಪೂರ್ವಕವಾಗಿ ಸ್ವಾತಂತ್ರೊö್ಯÃತ್ಸವ ಆಚರಿಸಲಾಯಿತು. ಸ್ವಾತಂತ್ರ‍್ಯ ದಿನಾಚರಣೆಯಲ್ಲಿ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.ಮಡಿಕೇರಿ: ಮಡಿಕೇರಿಯ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸ್ವಾತಂತ್ರೊö್ಯÃತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕ ಡಾ. ಕಾರ್ಯಪ್ಪ ಕೆ.ಬಿ. ಅಧ್ಯಕ್ಷತೆಯನ್ನು ವಹಿಸಿ, ಧ್ವಜಾರೋಹಣ ನೆರವೇರಿಸಿದರು. ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶಕ್ಕಾಗಿ ಮಡಿದ ವೀರರನ್ನು ಸ್ಮರಿಸಿ, ವೈದ್ಯಕೀಯ ವೃತ್ತಿಯಲ್ಲಿರುವ ನಾವೆಲ್ಲರೂ ಸಮಾಜಕ್ಕೆ ಸೇವೆಯನ್ನು ನೀಡುವಂತಾಗಬೇಕು ಎಂದರು.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಾಂಶುಪಾಲ ಡಾ. ವಿಶಾಲ್ ಕುಮಾರ್ ಮಾತನಾಡಿದರು. ಸಮಾರಂಭದಲ್ಲಿ ವಿದ್ಯಾರ್ಥಿಗಳಿಂದ ದೇಶಭಕ್ತಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಕಾರ್ಯಕ್ರಮದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆಯ ವೈದ್ಯರುಗಳು, ಬೋಧಕ, ಬೋಧಕೇತರ ಸಿಬ್ಬಂದಿಗಳು, ಎಂಬಿಬಿಎಸ್, ನರ್ಸಿಂಗ್, ಪ್ಯಾರ ಮೆಡಿಕಲ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ನಾಪೋಕ್ಲು: ಕುಂಜಿಲ-ಕಕ್ಕಬ್ಬೆ ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ಕಕ್ಕಬ್ಬೆಯಲ್ಲಿ ೭೫ನೇ ಸ್ವಾತಂತ್ರೊö್ಯÃತ್ಸವನ್ನು ಸಂಭ್ರಮದಿAದ ಆಚರಿಸಲಾಯಿತು.

ಧ್ವಜಾರೋಹಣವನ್ನು ಕುಂಜಿಲ - ಕಕ್ಕಬ್ಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕಕ್ಕಬ್ಬೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಲ್ಯಾಟಂಡ ರಘು ತಮ್ಮಯ್ಯ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶೋಕ್, ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿ ವರ್ಗ, ಸ್ಥಳೀಯ ಶಾಲಾ ವಿದ್ಯಾರ್ಥಿಗಳು, ಶಿಕ್ಷಕ ವೃಂದ, ಸ್ವಸಹಾಯ ಸಂಘದ ಸದಸ್ಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು.

ಪಟ್ಟಣದಲ್ಲಿ ನಡೆದ ಬೃಹತ್ ಮೆರವಣಿಗೆಯಲ್ಲಿ ಕಕ್ಕಬ್ಬೆ ಅಂಬೇಡ್ಕರ್ ವಸತಿ ಶಾಲೆ, ಕಕ್ಕಬ್ಬೆ ಮಾದರಿ ಪ್ರಾಥಮಿಕ ಶಾಲೆ, ಕಕ್ಕಬ್ಬೆ ಕೇಂದ್ರ ವಿದ್ಯಾ ಸಂಸ್ಥೆಯ ಆಂಗ್ಲ ಮಾಧ್ಯಮ ಮತ್ತು ಪ್ರೌಢಶಾಲೆ, ಆಕ್ಸ್ಫರ್ಡ್ ಶಾಲೆ, ಕುಂಜಿಲ, ಯವಕಪಾಡಿ, ನಾಲಡಿ ಶಾಲೆಗಳು ಸೇರಿದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಎಲ್ಲಾ ಸದಸ್ಯರು, ಸಿಬ್ಬಂದಿ ವರ್ಗ, ಸ್ವಸಹಾಯ ಸಂಘದ ಸದಸ್ಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಿದ್ದರು.

ನಂತರ ಮುತ್ತವ್ವ ಹಾಲ್‌ನಲ್ಲಿ ಪಂಚಾಯಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಗೆ ಒಳಪಟ್ಟ ಗ್ರಾಮಗಳ ಮಾಜಿ ಸೈನಿಕರನ್ನು ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಅಪರಾಹ್ನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಗೋಣಿಕೊಪ್ಪ: ಗೋಣಿಕೊಪ್ಪ - ಅರುವತೊಕ್ಲುವಿನಲ್ಲಿರುವ ಕಾಫಿ ಮಂಡಳಿ ಕಚೇರಿಯಲ್ಲಿ ಸ್ವಾತಂತ್ರೊö್ಯÃತ್ಸವ ಸಂಭ್ರಮದಿAದ ನಡೆಯಿತು. ಉಪನಿರ್ದೇಶರಾದ ಡಾ. ಶ್ರೀದೇವಿ, ಕೆ.ಟಿ. ಸೋಮಯ್ಯ, ಧನ್ಯ, ಸುಲೋಚನಾ ಮತ್ತಿತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.ಮಡಿಕೇರಿ: ಚೆಟ್ಟಿಮಾನಿಯ ಸಾಂದೀಪನಿ ವಿದ್ಯಾಪೀಠ ಶಾಲೆಯಲ್ಲಿ ಸ್ವಾತಂತ್ರೊö್ಯÃತ್ಸವ ಆಚರಿಸಲಾಯಿತು. ಧ್ವಜಾರೋಹಣವನ್ನು ಕೆ.ಆರ್. ಯೋಗೇಶ್ ನೆರವೇರಿಸಿದರು.

ಮುಖ್ಯ ಅತಿಥಿಯಾಗಿ ಕೆ.ಜೆ. ರಘುನಾಥ್ ಭಾಗವಹಿಸಿದ್ದರು. ಶಾಲೆಯ ಮುಖ್ಯ ಶಿಕ್ಷಕಿ ಪಿ.ಎಸ್. ಸೀತಮ್ಮ, ಶಿಕ್ಷಕಿಯರಾದ ಶೈಲಾ, ವಾಣಿ ಇದ್ದರು. ವಿದ್ಯಾರ್ಥಿಗಳು ದೇಶಭಕ್ತಿಗೀತೆ ಗಾಯನ ಮಾಡಿದರು. ಗಾಯನ ನೆರವೇರಿಸಿದ ಪುಟಾಣಿಗಳಿಗೆ ಸುಧಾ ರಮಾನಾಥ್ ಬಹುಮಾನ ವಿತರಿಸಿದರು. ವಿದ್ಯಾರ್ಥಿಗಳಿಗೆ ಕೊನೆಯಲ್ಲಿ ಸಿಹಿ ಹಂಚಲಾಯಿತು. ಎಂ.ಎA ಕವಿತಾ ಸ್ವಾಗತಿಸಿದರು. ಅರ್ಪಿತ ಕೆ.ವಿ. ನಿರೂಪಿಸಿದರು.