ಕೂಡಿಗೆ, ಆ. ೧೬: ಕೂಡಿಗೆ ಕೃಷಿ ಕ್ಷೇತ್ರದ ಆವರಣದಲ್ಲಿರುವ ಮೊರಾರ್ಜಿ ದೇಸಾಯಿ ವಸತಿಯ ವಿದ್ಯಾರ್ಥಿಗಳ ಪೋಷಕರ ಸಭೆಯು ಶಾಲಾ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಕೂಡಿಗೆ ಶಿಕ್ಷಕರ ತರಬೇತಿ ಕೇಂದ್ರದ ಡಯಟ್‌ನ ಉಪನ್ಯಾಸಕರಾದ. ಸಿದ್ದೇಶ್, ಭವಿಷ್ಯದಲ್ಲಿ ವಿದ್ಯಾರ್ಥಿಗಳು ಉತ್ತಮ ನಾಗರಿಕರಾಗಬೇಕಾದರೆ ಶಿಸ್ತು ಸಂಯಮ ಮುಂತಾದ ಮಾನವೀಯ ಮೌಲ್ಯಗಳನ್ನು ಈಗಿನಿಂದಲೇ ರೂಡಿಸಿಕೊಳ್ಳಬೇಕು ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯ ಪ್ರಕಾಶ್, ಸಮಾಜಕ್ಕೆ ಪೂರಕವಾಗುವ ವಿಷಯಗಳು ನಮ್ಮ ಬದುಕಿ ಆದರ್ಶವಾಗಿರುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಭೆಯಲ್ಲಿ ಶಾಲಾ ಶಿಕ್ಷಕರ ವೃಂದ, ಹಾಗೂ ಶಾಲಾ ವಿದ್ಯಾರ್ಥಿ ಪೋಷಕರ ಪರಿಷತ್ತಿನ ಸದಸ್ಯರು ಹಾಜರಿದ್ದರು.