ಮಡಿಕೇರಿ, ಆ. ೧೬: ೧೨ನೇ ಶತಮಾನದ ಪ್ರಮುಖ ಶರಣರಲ್ಲಿ ನುಲಿಯ ಚಂದಯ್ಯ ಅವರು ತಮ್ಮ ಕಾಯಕ ಮತ್ತು ದಾಸೋಹದ ಮೂಲಕ ಪ್ರಸಿದ್ಧರಾದವರು, ಕಾಯಕಕ್ಕೆ ಹೆಚ್ಚು ಮಹತ್ವ ನೀಡಿದವರು ನುಲಿಯ ಚಂದಯ್ಯ ಎಂದು ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರು ಹಾಗೂ ಕೊರಮ ಕ್ಷೇಮಾಭಿವೃದ್ಧಿ ಸಂಘದ ನಿರ್ದೇಶಕ ಹೆಚ್.ಕೆ. ಕುಮಾರ್ ಅವರು ತಿಳಿಸಿದ್ದಾರೆ.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಏರ್ಪಡಿಸಲಾಗಿದ್ದ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನುಲಿಯ ಚಂದಯ್ಯ ಕಾಯಕ ನಿಷ್ಠೆಯನ್ನು ಅಳವಡಿಸಿಕೊಳ್ಳಬೇಕು. ಚಂದಯ್ಯ ಕಾಯಕದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ ಇರಬೇಕು ಎಂಬುದನ್ನು ಮಡಿಕೇರಿ, ಆ. ೧೬: ೧೨ನೇ ಶತಮಾನದ ಪ್ರಮುಖ ಶರಣರಲ್ಲಿ ನುಲಿಯ ಚಂದಯ್ಯ ಅವರು ತಮ್ಮ ಕಾಯಕ ಮತ್ತು ದಾಸೋಹದ ಮೂಲಕ ಪ್ರಸಿದ್ಧರಾದವರು, ಕಾಯಕಕ್ಕೆ ಹೆಚ್ಚು ಮಹತ್ವ ನೀಡಿದವರು ನುಲಿಯ ಚಂದಯ್ಯ ಎಂದು ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರು ಹಾಗೂ ಕೊರಮ ಕ್ಷೇಮಾಭಿವೃದ್ಧಿ ಸಂಘದ ನಿರ್ದೇಶಕ ಹೆಚ್.ಕೆ. ಕುಮಾರ್ ಅವರು ತಿಳಿಸಿದ್ದಾರೆ.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಏರ್ಪಡಿಸಲಾಗಿದ್ದ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನುಲಿಯ ಚಂದಯ್ಯ ಕಾಯಕ ನಿಷ್ಠೆಯನ್ನು ಅಳವಡಿಸಿಕೊಳ್ಳಬೇಕು. ಚಂದಯ್ಯ ಕಾಯಕದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ ಇರಬೇಕು ಎಂಬುದನ್ನು ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗ ಕಾರ್ಯಕ್ರಮದ ಅಂಗವಾಗಿ ಮನೆ ಮನೆಯಲ್ಲೂ ರಾಷ್ಟç ಧ್ವಜವನ್ನು ಆರಿಸಿ ಎಂದು ಅವರು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ಹೆಬ್ಬಾಲೆ ಪ್ರೌಢಶಾಲೆಯ ಕನ್ನಡ ಪ್ರಾಧ್ಯಾಪಕ ವೆಂಕಟನಾಯಕ್ ಅವರು ಮಾತನಾಡಿ ನುಲಿಯ ಚಂದಯ್ಯ ಅವರು ಹುಟ್ಟಿದ್ದು ೧೧೬೦ ರಲ್ಲಿ. ೬೦ಕ್ಕೂ ಹೆಚ್ಚು ವಚನಗಳನ್ನು ಇವರು ರಚಿಸಿದ್ದಾರೆ. ವೃತ್ತಿಯಲ್ಲಿ ಹಗ್ಗವನ್ನು ನೆಯುವುದು. ಬಂದ ಆದಾಯದಲ್ಲಿ ಸಮಾಜದ ದಾಸೋಹಕ್ಕಾಗಿ ಉಪಯೋಗ ಮಾಡುತ್ತಿದ್ದರು. ಇವರು ಲಿಂಗಪೂಜೆಗೆ ಹೆಚ್ಚು ಮಹತ್ವ ಕೊಡದೆ ಕಾಯಕಕ್ಕೆ ಹೆಚ್ಚು ಒತ್ತು ನೀಡಿದವರು. ಇವರು ಶ್ರೇಷ್ಠ ವಚನಕಾರರಾಗಿದ್ದಾರೆ ಎಂದು ಅವರು ಹೇಳಿದರು.

ಸಮಾಜದಲ್ಲಿ ಸಮಾನತೆಯನ್ನು ಸಾರಿದವರು ಹೊಸ ಸಮಾಜವನ್ನು ಕಟ್ಟಬೇಕು ಎಂದು ಸಾರಿದವರು. ವಚನ ಸಾಹಿತ್ಯದ ಅಮೂಲಾಗ್ರವಾದ ವಿಚಾರ, ವಿಷಯಗಳನ್ನು ತಿಳಿಯಬೇಕು ಆ ಮೂಲಕ ಇಂದಿನ ಪೀಳಿಗೆಗೆ ವಚನಕಾರರ ವಿಚಾರಗಳ ಅಗತ್ಯತೆ ಇದೆ ಎಂದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವಚನ ಗಾಯನ ಸ್ಪರ್ಧೆ ಏರ್ಪಡಿಸಲಾಯಿತು. ವಚನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ಗಣ್ಯರು ವಿತರಿಸಿದರು. ಗೋಪಾಲಕೃಷ್ಣ, ರಮ್ಯ, ಅನ್ಸಿಲಾ ರೇಬಾ, ಸರಸ್ವತಿ, ಉಷಾ, ಚಂದ್ರಮ್ಮ ಇತರರು ಇದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಣಜೂರು ಮಂಜುನಾಥ್ ಸ್ವಾಗತಿಸಿ. ಗೋಪಾಲಕೃಷ್ಣ ಅವರು ನಿರೂಪಿಸಿದರು. ಸಂಜನಾ ಅವರು ವಂದಿಸಿದರು.