ಗೋಣಿಕೊಪ್ಪಲು, ಆ.೧೫: ಒಂದೆಡೆ ಅಮೃತ ಮಹೋತ್ಸವದ ಅಂಗವಾಗಿ ಸಂಭ್ರಮದಿAದ ಸ್ವಾತಂತ್ರೊö್ಯÃತ್ಸವವನ್ನು ಆಚರಿಸುತ್ತಿದ್ದರೆ ಇನ್ನೊಂದೆಡೆ ನಮಗಿನ್ನು ಸ್ವಾತಂತ್ರö್ಯ ಲಭಿಸಿಲ್ಲ, ವಾಸಿಸಲು ಮನೆ ಇಲ್ಲ. ನಮ್ಮ ಗೋಳನ್ನು ಕೇಳುವವರು, ಆಲಿಸುವ ವರೇ ಇಲ್ಲ ಹೀಗಾಗಿ ನಮಗೆ ಸ್ವಾತಂತ್ರö್ಯ ಲಭಿಸಿಲ್ಲ ಎಂದು ಹೇಳುತ್ತಾ ‘ಯಾರಿಗೆ ಬಂತು.. ಎಲ್ಲಿಗೆ ಬಂತು.. ೪೭ರ ಸ್ವಾತಂತ್ರö್ಯ’ ಎಂಬ ಘೋಷಣೆ ಗಳನ್ನು ಕೂಗುತ್ತ ಗಿರಿಜನರು ಪ್ರತಿಭಟಿಸಿದರು.

ಕಳೆದ ೧೫ ದಿನಗಳಿಂದ ಆದಿವಾಸಿ ಗಿರಿಜನರು ತಮಗೆ ವಾಸಕ್ಕೆ ನಿವೇಶನ ನೀಡುವಂತೆ ಒತ್ತಾಯಿಸಿ ಮಾಯಮುಡಿ ಗ್ರಾ.ಪಂ.ಯ ಮುಂದೆ ಬುಡಕಟ್ಟು ಕಾರ್ಮಿಕರ ಸಂಘದ ಅಧ್ಯಕ್ಷ ವೈ.ಬಿ. ಗಪ್ಪು ಮುಂದಾಳತ್ವದಲ್ಲಿ ಮಾಯಮುಡಿ ಸುತ್ತಮುತ್ತಲಿನ ಲೈನ್ ಮನೆಯಲ್ಲಿ ವಾಸವಿರುವ ಗಿರಿಜನರು ಮನೆ ನಿವೇಶನಕ್ಕಾಗಿ ಕಳೆದ ೧೫ ದಿನಗಳಿಂದ ತಮ್ಮ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಮಣ್ಣಿನ ಮೂಲ ನಿವಾಸಿಗಳು ನಾವಾಗಿದ್ದರೂ ಇನ್ನೂ ಕೂಡ ನಮ್ಮನ್ನು ಸರ್ಕಾರ ಕತ್ತಲೆಯಲ್ಲಿ ಇಟ್ಟಿದೆ. ವಾಸಿಸಲು ಮನೆ ನಿವೇಶನಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಬಡ ಕಾರ್ಮಿಕರ ಕಷ್ಟವನ್ನು ಆಲಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಮಾಯಮುಡಿ ವ್ಯಾಪ್ತಿಯಲ್ಲಿರುವ ನಾಲ್ಕು ಎಕರೆ ಸರ್ಕಾರಿ ಜಾಗದಲ್ಲಿ ಸುತ್ತಮುತ್ತಲಿ ನಲ್ಲಿರುವ ಗಿರಿಜನರಿಗೆ ನಿವೇಶನ ಹಂಚಲು ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು.

ಖಾಲಿ ಇರುವ ಜಾಗದಲ್ಲಿ ಲೈನ್ ಮನೆಯಲ್ಲಿ ವಾಸಿಸುತ್ತಿರುವವರನ್ನು ಗುರುತಿಸಿ ಅವರಿಗೆ ಶಾಶ್ವತ ನೆಲೆ ಕಲ್ಪಿಸಬೇಕು. ಅಲ್ಲಿಯ ತನಕ ನಮ್ಮ ನಿರಂತರ ಹೋರಾಟವನ್ನು ಮುಂದು ವರೆಸು ತ್ತೇವೆಂದು ಸಂಘಟನೆಯ ಅಧ್ಯಕ್ಷ ವೈ.ಬಿ. ಗಪ್ಪು ತಿಳಿಸಿದರು.

ಜಿಲ್ಲಾಡಳಿತ ಅಧಿಕಾರಿಗಳು ಖುದ್ದು ಆಗಮಿಸಿ ನ್ಯಾಯ ಒದಗಿಸಿ ಕೊಡಬೇಕು ಎಂದು ಆಗ್ರಹಿಸಿರುವ ಹೋರಾಟಗಾರರು ಸ್ಥಳದಲ್ಲಿಯೇ ಅಡುಗೆ ತಯಾರಿಸಿ ಮಕ್ಕಳು, ಮಹಿಳೆಯರಾದಿಯಾಗಿ ನೂರಾರು ಸಂಖ್ಯೆಯಲ್ಲಿ ಗಿರಿಜನರು ತಮ್ಮ ಹಕ್ಕಿಗಾಗಿ ಪ್ರತಿಭಟನೆ ಮುಂದುವರೆ ಸುತ್ತಿದ್ದಾರೆ. ನ್ಯಾಯ ಸಿಗುವ ತನಕ ಹೋರಾಟ ಕೈ ಬಿಡುವುದಿಲ್ಲ ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.