ಮಡಿಕೇರಿ, ಆ. ೫: ಪಡಿತರ ಚೀಟಿ ಕುಟುಂಬದ ಸದಸ್ಯರುಗಳ ಇ-ಕೆವೈಸಿ (ಜೀವ ಮಾಪಕ ಮರು ದೃಢೀಕರಣ) ಕಾರ್ಯ ಮಾಡಲು ಸರ್ಕಾರ ಕೊನೆ ಅವಕಾಶ ಕಲ್ಪಿಸಿದೆ. ಪ್ರಸ್ತುತ ಸರ್ಕಾರದ ಆದೇಶದಂತೆ ಇ-ಕೆವೈಸಿ (ಜೀವ ಮಾಪಕ ಮರು ದೃಢೀಕರಣ) ಕಾರ್ಯವನ್ನು ಮತ್ತೆ ಪ್ರಾರಂಭಿಸಲಾಗಿದ್ದು, ಈ ಹಿಂದೆ ಇ-ಕೈವೈಸಿ ಮಾಡಿಸಿರದ ಅಂತ್ಯೋದಯ ಅನ್ನಯೋಜನೆ, (ಎಎವೈ) ಆದ್ಯತಾ ಪಡಿತರ ಚೀಟಿ) ಬಿಪಿಎಲ್ ಮತ್ತು ಆದ್ಯತೇತರ ಪಡಿತರ ಚೀಟಿಗಳಲ್ಲಿ (ಎಪಿಎಲ್) ಸೇರ್ಪಡೆಗೊಂಡಿರುವ ಸದಸ್ಯರುಗಳು ಕೂಡಲೇ ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗೆ ತೆರಳಿ ತಮ್ಮ ಬೆರಳಚ್ಚನ್ನು ನೀಡಿ ಇ-ಕೆವೈಸಿಯನ್ನು (ಜೀವ ಮಾಪಕ ಮರು ದೃಢೀಕರಣ) ಮಾಡಿಸಲು ಕೋರಿದೆ.

ಎಎವೈ, ಆದ್ಯತಾ, ಆದ್ಯತೇತರ ಪಡಿತರ ಚೀಟಿಗಳಲ್ಲಿ ಸೇರ್ಪಡೆಗೊಂಡಿರುವ ಎಲ್ಲಾ ಸದಸ್ಯರು ಈ ರೀತಿ ಇ-ಕೆವೈಸಿಯನ್ನು ಕಡ್ಡಾಯವಾಗಿ ಮಾಡಿಸುವುದು. ಉದ್ಯೋಗ/ ವಿದ್ಯಾಭ್ಯಾಸದ ಸಲುವಾಗಿ ಹಾಗೂ ಇತರೆ ಕಾರಣಗಳಿಂದ ಜಿಲ್ಲೆಯಿಂದ ಹೊರಗೆ ನೆಲೆಸಿರುವ ಪಡಿತರ ಚೀಟಿ ಸದಸ್ಯರು ಅವರು ನೆಲೆಸಿರುವ ವ್ಯಾಪ್ತಿಯಲ್ಲಿರುವ ನ್ಯಾಯಬೆಲೆ ಅಂಗಡಿಗೆ ತೆರಳಿ ಇ-ಕೆವೈಸಿ (ಜೀವ ಮಾಪಕ ಮರು ದೃಢೀಕರಣ) ಮಾಡಿಸುವುದು.

೬ ವರ್ಷದೊಳಗಿನ ಮಕ್ಕಳ ಆಧಾರ್ ಕಾರ್ಡ್ ಮಾಡಿಸಿದ್ದಲ್ಲಿ ಅಂತಹ ಮಕ್ಕಳ ಬೆರಳಚ್ಚು ಅಪ್‌ಡೇಟ್ ಆಗಿರುವುದಿಲ್ಲ. ಇದರಿಂದಾಗಿ ಇ-ಕೆಎವೈಸಿ ಮಾಡಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಬೆರಳಚ್ಚು ಅಪ್‌ಡೇಟ್ ಆಗದಂತಹ ಮಕ್ಕಳನ್ನು ಆಧಾರ್ ಸೆಂಟರ್‌ನಲ್ಲಿ ಬೆರಳಚ್ಚು ಅಪ್‌ಡೇಟ್ ಮಾಡಬೇಕು. ನಂತರವೇ ಪಡಿತರ ಚೀಟಿಯ ಇ-ಕೆವೈಸಿ ಮಾಡಿಸುವುದು.

ಈ ರೀತಿ ಬೆರಳಚ್ಚು ನೀಡಿ ಇ-ಕೆವೈಸಿ ಮಾಡಿಸಲು ಯಾವುದೇ ಶುಲ್ಕ ಇರುವುದಿಲ್ಲ. ಪಡಿತರ ಚೀಟಿದಾರರು ಯಾವುದೇ ಹಣ ನೀಡುವಂತಿಲ್ಲ. ಹಣ ತೆಗೆದುಕೊಂಡಲ್ಲಿ ತಾಲೂಕು ಆಹಾರ ಕಚೇರಿ/ ಉಪ ನಿರ್ದೇಶಕರ ಕಚೇರಿಗೆ ದೂರು ನೀಡಬಹುದು. ಆದ್ದರಿಂದ ಜಿಲ್ಲೆಯ ಎಲ್ಲಾ ವರ್ಗದ ಪಡಿತರ ಚೀಟಿಗಳ ಕುಟುಂಬದ ಸದಸ್ಯರುಗಳು ಕಡ್ಡಾಯವಾಗಿ ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗೆ ತೆರಳಿ ಬೆರಳಚ್ಚನ್ನು ನೀಡಿ ಇ-ಕೈವೈಸಿ ಕಾರ್ಯವನ್ನು (ಜೀವ ಮಾಪಕ ಮರು ದೃಢೀಕರಣ) ಮಾಡಲು ಕೋರಿದೆ.

ಅಂತರರಾಜ್ಯ ಪಡಿತರ ಚೀಟಿದಾರರಿಗೆ ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಿAದ ಪಡಿತರ ವಿತರಿಸುವ ಕುರಿತು. ಕೇಂದ್ರ ಸರ್ಕಾರ ‘ಒಂದು ರಾಷ್ಟç ಒಂದು ಪಡಿತರ ಚೀಟಿ’ ಯೋಜನೆಯಡಿಯಲ್ಲಿ ಹೊರ ರಾಜ್ಯದ ಜನರು ಜಿಲ್ಲೆಯಲ್ಲಿ ವಾಸಿಸುತ್ತಿರುವ ನ್ಯಾಯಬೆಲೆ ಅಂಗಡಿಗಳ ಮೂಲಕ ‘ಪೋರ್ಟ್ಬಿಲಿಟಿ’ ಅಡಿ ಪಡಿತರ ವಿತರಣೆ ಮಾಡಲು ಅಗತ್ಯವಿರುವ ದತ್ತಾಂಶವನ್ನು ಒದಗಿಸಲಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ವಾಸಿಸುತ್ತಿರುವ ಹೊರ ರಾಜ್ಯದ ಆದ್ಯತಾ ಪಡಿತರ ಚೀಟಿದಾರರು ಅವರು ವಾಸಿಸುತ್ತಿರುವ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ ತಮ್ಮ ಪಡಿತರ ಚೀಟಿ ಅಥವಾ ಆಧಾರ್ ಕಾರ್ಡ್ನ್ನು ತೋರಿಸಿ ಬೆರಳಚ್ಚನ್ನು ನೀಡಿ ಆಹಾರ ಧಾನ್ಯವನ್ನು ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ತಿಳಿಸಿದ್ದಾರೆ.